KPSC: ಸಹಾಯಕ / ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ..ತಿಂಗಳಿಗೆ 52,650/-ರೂಗಳವರೆಗೆ ವೇತನ

2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1,140 ಸಹಾಯಕ /ಪ್ರಥಮ ದರ್ಜೆ
ಸಹಾಯಕರ ಹುದ್ದೆಗಳಿಗಾಗಿ ಕರ್ನಾಟಕ ಲೋಕಸೇವಾ ಆಯೋಗದಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 6, 2020 ಕೊನೆಯ ದಿನವಾಗಿದೆ.

ಕೆಪಿಎಸ್ಸಿಯಲ್ಲಿ 1,140 ಹುದ್ದೆಗಳಿವೆ..ಮಾ.6ರೊಳಗೆ ಅರ್ಜಿ ಹಾಕಿ

ಹುದ್ದೆಗಳ ವಿವರ:

ಹೈದರಾಬಾದ್ ಕರ್ನಾಟಕ ವೃಂದದ ಸಹಾಯಕ /ಪ್ರಥಮ ದರ್ಜೆ ಸಹಾಯಕ = 137 ಹುದ್ದೆಗಳು
ಉಳಿಕೆ ಮೂಲಕ ವೃಂದದ ಸಹಾಯಕ /ಪ್ರಥಮ ದರ್ಜೆ ಸಹಾಯಕ (ನಾನ್ ಹೈದರಾಬಾದ್ ಕರ್ನಾಟಕ ) = 975 ಹುದ್ದೆಗಳು
ಸಹಾಯಕ (ಕರ್ನಾಟಕ ಭವನ,ನವದೆಹಲಿ) (ಉಳಿಕೆ ಮೂಲ ವೃಂದ-3 ಹುದ್ದೆಗಳು ಮತ್ತು ಹೈ.ಕರ್ನಾಟಕ ವೃಂದ-1 ಹುದ್ದೆ) = 4 ಹುದ್ದೆಗಳು

ರಾಜ್ಯ ಸಿವಿಲ್ ಸೇವೆಯಡಿ ಸಹಾಯಕ/ಪ್ರಥಮ ದರ್ಜೆ ಸಹಾಯಕ= 24 ಹುದ್ದೆಗಳು

ಒಟ್ಟು = 1,140 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:

ಸಹಾಯಕರು ಅಥವಾ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಟಿಪ್ಪಣಿ:

ಡಿಪ್ಲೊಮಾ, ಹಿಂದಿ ಸಭಾಗಳಿಂದ ಪಡೆದ ರತ್ನಾ, ವಿಶಾರದ, ಪಂಡಿತ್ ಇತ್ಯಾದಿ ವಿದ್ಯಾರ್ಹತೆಗಳನ್ನು ಪದವಿಗೆ ತತ್ಸಮಾನವೆಂದು KCS (Recruitment to the Ministerial Post) Rule 1978 ರ ನಿಯಮಗಳಲ್ಲಿ ಅಧಿಸೂಚಿಸಿರುವುದಿಲ್ಲವಾದ್ದರಿಂದ, ಇವು ಪದವಿಗೆ ಸಮಾನವಾಗುವುದಿಲ್ಲ. ಆದ್ದರಿಂದ ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಸದರಿ ಹುದ್ದೆಗೆ ಅರ್ಹರಾಗುವುದಿಲ್ಲ.

ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ವಯೋಮಿತಿ:

ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕನಿಷ್ಟ 18 ರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ, ಓಬಿಸಿ,ಪ್ರವರ್ಗ- 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ಓದಿ ತಿಳಿಯತಕ್ಕದ್ದು.

ವೇತನ ಶ್ರೇಣಿ:

ಸಹಾಯಕರ ಹುದ್ದೆಗಳಿಗೆ ತಿಂಗಳಿಗೆ 30,350/- ರಿಂದ 58,250/-ರೂ
ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ತಿಂಗಳಿಗೆ 27,650/-ರಿಂದ 52,650/-ರೂ

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಪರೀಕ್ಷಾ ದಿನಾಂಕಗಳು:

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ದಿನಾಂಕ: ಮೇ 9,2020
ಮತ್ತು ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ: ಮೇ 10,2020

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಫೆಬ್ರವರಿ 6,2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮಾರ್ಚ್ 6,2020
ಪರೀಕ್ಷೆ ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: ಮಾರ್ಚ್ 7,2020

ಪರೀಕ್ಷಾ ಶುಲ್ಕದ ವಿವರ:

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 600/-ರೂ+35ರೂ
ಪ್ರವರ್ಗ- 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ 300/-ರೂ+35/-ರೂ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50+35/-ರೂ
ಪರಿಶಿಷ್ಟ ಜಾತಿ,ಪರಿಶಿಷ್ಟ,ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ ಆದರೆ ಪ್ರೊಸೆಸಿಂಗ್ ಚಾರ್ಚ್ 35/-ರೂ ಅನ್ನು ಎಲ್ಲಾ ಅಭ್ಯರ್ಥಿಗಳು ಪಾವತಿಸಲೇಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಅಭ್ಯರ್ಥಿಗಳು ಆನ್-ಲೈನ್ ನಲ್ಲಿ ಆಯೋಗದ ಅಂತರ್ಜಾಲ http://www.kpsc.kar.nic.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿಸುವ ಮೂಲಕ ಮಾರ್ಚ್ 6,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಶುಲ್ಕವನ್ನು ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಆನ್-ಲೈನ್ ಮೂಲಕ ಅರ್ಜಿಯನ್ನು ಭರ್ತಿಮಾಡುವ ಸಂದರ್ಭದಲ್ಲಿ ಯಾವುದಾದರೂ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ (Help line) ಸಂಖ್ಯೆ. 7406086807 / 7406086801 ಮತ್ತು ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ 080-30574936 ಅನ್ನು ಸಂಪರ್ಕಿಸಬಹುದು.

ಅಭ್ಯರ್ಥಿಗಳು ಹೈದರಾಬಾದ್ ಕರ್ನಾಟಕ ವೃಂದದ ಸಹಾಯಕ /ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು

ಉಳಿಕೆ ಮೂಲಕ ವೃಂದದ ಸಹಾಯಕ /ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಭವನ,ನವದೆಹಲಿ ಇಲ್ಲಿ ಖಾಲಿ ಇರುವ ಸಹಾಯಕರ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು

ಹೆಚ್ಚುವರಿ ಸೇರ್ಪಡೆಯಾದ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
KPSC recruitment 2019-20 notification has been released in official website for the recruitment of 1,140 assistant/fda posts. Interested candidates can apply before 6th March 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+