ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವೆಗಳ ಉಳಿಕೆ ಮೂಲ ವೃಂದದ ಗ್ರೂಪ್ ಸಿ ವೃಂದದ ಖಾಲಿ ಇರುವ 67 ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತರು ಆನ್‌ಲೈನ್ ನಲ್ಲಿ ಅಧಿಸೂಚನೆಯನ್ನು ಓದಿ ನಂತರ ಏಪ್ರಿಲ್ 22,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

| CRITERIA | DETAILS |
| Name Of The Posts | ಜ್ಯೂನಿಯರ್ ಇಂಜಿನಿಯರ್,ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನೀಶಿಯನ್ |
| Organisation | ಕರ್ನಾಟಕ ಲೋಕ ಸೇವಾ ಆಯೋಗ |
| Educational Qualification | 12 ನೇ ತರಗತಿ, ಡಿಪ್ಲೋಮಾ , ಗ್ರಾಜುಯೇಟ್, ಬಿ.ಇ / ಬಿ.ಟೆಕ್ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ |
| Job Location | ಬೆಂಗಳೂರು, ಕರ್ನಾಟಕ |
| Salary Scale | ಕಿರಿಯ ಅಭಿಯಂತರರು (ಸಿವಿಲ್)-33,450/- ರಿಂದ 62,600/-ರೂ, ಫಾರ್ಮಾಸಿಸ್ಟ್ - 23,500/- ರಿಂದ 47,650/-ರೂ, ಲ್ಯಾಬ್ ಟೆಕ್ನಿಷಿಯನ್ 27,650/- ರಿಂದ 52,650/-ರೂ, ಶುಶ್ರೂಷಕರು (ಸ್ಟಾಫ್ ನರ್ಸ್ )-23,500/-ರಿಂದ 47,650/- ರೂ |
| Application Start Date | March 20, 2019 |
| Application End Date | April 22, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂಚೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.
| ಹುದ್ದೆಗಳ ಹೆಸರು | ಹುದ್ದೆಗಳಿಗನುಸಾರ ಕೇಳಲಾಗಿರುವ ವಿದ್ಯಾರ್ಹತೆ |
| ಕಿರಿಯ ಅಭಿಯಂತರರು (ಸಿವಿಲ್) | ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಅನ್ನು ಸರ್ಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ನಲ್ಲಿ ಅಧ್ಯಯನ ಮಾಡುತ್ತಿರುವ ಅಥವಾ ಅಧ್ಯಯನ ಮಾಡಿರುವ ಅಭ್ಯರ್ಥಿಗಳು |
| ಫಾರ್ಮಾಸಿಸ್ಟ್ | ಫಾರ್ಮೆಸಿಯಲ್ಲಿ ಡಿಪ್ಲೋಮಾವನ್ನು ಫಾರ್ಮೆಸಿಯಿಂದ ಮಾನ್ಯತೆ ಪಡೆದ ಬೋರ್ಡ್ ನಲ್ಲಿ ಉತ್ತೀರ್ಣರಾಗಿರಬೇಕು. |
| ಲ್ಯಾಬ್ ಟೆಕ್ನಿಷಿಯನ್ | ಪಿಯುಸಿಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ರಸಾಯನಶಾಸ್ತ್ರವನ್ನು ಪ್ರಮುಖ ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಲ್ಯಾಬ್ ಟೆಕ್ನೀಶಿಯನ್ ಕೋರ್ಸ್ ನಲ್ಲಿ ಡಿಪ್ಲೋಮಾ ಅನ್ನು ಮಾನ್ಯತೆ ಪಡೆದ ಸಂಸ್ಥೆ / ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಮಾಡಿರಬೇಕು (ಪ್ಯಾರಾ ಮೆಡಿಕಲ್ ಬೋರ್ಡ್) |
| ಶುಶ್ರೂಷಕರು (ಸ್ಟಾಫ್ ನರ್ಸ್) | ಪಿಯುಸಿ ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಜನರಲ್ ನರ್ಸಿಂಗ್ ಕೋರ್ಸ್ ನಲ್ಲಿ ಸರ್ಟಿಫಿಕೇಟ್ ಪಡೆದಿರಬೇಕು |
ಖಾಲಿ ಹುದ್ದೆಗಳು:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕಿರಿಯ ಅಭಿಯಂತರರು (ಸಿವಿಲ್) | 19 |
| ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಫಾರ್ಮಾಸಿಸ್ಟ್ | 4 |
| ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಲ್ಯಾಬ್ ಟೆಕ್ನಿಷಿಯನ್ | 18 |
| ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಶುಶ್ರೂಷಕರು (ಸ್ಟಾಫ್ ನರ್ಸ್) | 26 |
| ಒಟ್ಟು | 67 |
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷಗಳು ಮತ್ತು ಗರಿಷ್ಟ 35 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪ್ರವರ್ಗ-2A , 2B ,3A ,3B ಅಭ್ಯರ್ಥಿಗಳು 38 ವರ್ಷಗಳು, ಪ.ಜಾ, ಪ.ಪಂ, ಪ್ರವರ್ಗ-1ರ ಅಭ್ಯರ್ಥಿಗಳು 40 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವೇತನದ ವಿವರ:
| ಹುದ್ದೆಗಳ ಹೆಸರು | ವೇತನದ ವಿವರ |
| ಕಿರಿಯ ಅಭಿಯಂತರರು (ಸಿವಿಲ್) | 33,450/- ರಿಂದ 62,600/-ರೂ |
| ಫಾರ್ಮಾಸಿಸ್ಟ್ | 23,500/- ರಿಂದ 47,650/-ರೂ |
| ಲ್ಯಾಬ್ ಟೆಕ್ನಿಷಿಯನ್ | 27,650/- ರಿಂದ 52,650/-ರೂ |
| ಶುಶ್ರೂಷಕರು (ಸ್ಟಾಫ್ ನರ್ಸ್ ) | 23,500/-ರಿಂದ 47,650/- ರೂ |
ನೇಮಕಾತಿ ವಿಧಾನ:
ಅಭ್ಯರ್ಥಿಗಳನ್ನು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
| ಸಾಮಾನ್ಯ ಅರ್ಹ ಅಭ್ಯರ್ಥಿಗಳಿಗೆ | 600/-ರೂ |
| ಪ್ರವರ್ಗ- 2A, 2B, 3A, 3B ಸೇರಿದ ಅಭ್ಯರ್ಥಿಗಳಿಗೆ | 300/-ರೂ |
| ಮಾಜಿ ಸೈನಿಕ ಅಭ್ಯರ್ಥಿಗಳಿಗೆ | 50/-ರೂ |
| ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ | ಶುಲ್ಕದಿಂದ ವಿನಾಯಿತಿ ನೀಡಲಾಗಿದೆ |
ಸೂಚನೆ: ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ, ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಒಂದೇ ಶುಲ್ಕವನ್ನು ಪಾವತಿಸತಕ್ಕದ್ದು. ಅರ್ಜಿ ಶುಲ್ಕವನ್ನು ಏಪ್ರಿಲ್ 23, 2019 ರೊಳಗೆ ಪಾವತಿಸಬೇಕು.
ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ ಸಹಿ / ವಯೋಮಿತಿ / ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ಯಾವುದೇ ನಾಗರೀಕ ಸೇವಾ ಕೇಂದ್ರಗಳಲ್ಲಿ ಅಥವಾ ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡತಕ್ಕದ್ದು, ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು / ಭಾವಚಿತ್ರ / ಸಹಿಯನ್ನು ಅಪ್ಲೋಡ್ ಮಾಡದೇ ಇರುವ / ಅಸ್ಟಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ತಿರಸ್ಕರಿಸಲಾಗುವುದು. ಶುಲ್ಕವನ್ನು ನಾಗರೀಕ ಸೇವಾ ಕೇಂದ್ರಗಳಲ್ಲಿ ಪಾವತಿಸಲು ಅವಕಾಶ ನೀಡಲಾಗಿರುವುದರಿಂದ ಅರ್ಜಿಗಳನ್ನು ಇಲ್ಲಿಯೂ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ:
* ಹೊಸದಾಗಿ ಅಪ್ಲಿಕೇಶನ್ ಲಿಂಕ್ ರಲ್ಲಿ ಲಾಗಿನ್ ಆಗಲು User Name ಮತ್ತು Password ಅನ್ನು ಸೃಷ್ಟಿಸಬೇಕು.
* ಅಪ್ಲಿಕೇಶನ್ ಲಿಂಕ್ ರಲ್ಲಿ ಲಾಗಿನ್ ಆದ ನಂತರ ನಿಮ್ಮ ಪೂರ್ಣ ಪ್ರೊಫೈಲ್ ಅನ್ನು ಭರ್ತಿ ಮಾಡಿ.
* ಅಪ್ಲೋಡ್ ಮಾಡಬೇಕಾದ ಭಾವಚಿತ್ರ ಮತ್ತು ಸಹಿ ಸ್ಕ್ಯಾನ್ ಪ್ರತಿಗಳನ್ನು jpg ನಮೂನೆಯಲ್ಲಿ ಸಿದ್ದವಾಗರಿಬೇಕು ಹಾಗೂ 50kb ಗಿಂತ ಹೆಚ್ಚಾಗಿರಬಾರದು.
* ಅಧಿಸೂಚನೆ ಎದುರು ಇರುವ Click here to apply ಲಿಂಕ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ Profile ರಲ್ಲಿ ಲಭ್ಯವಿರುವ ಮಾಹಿತಿಯು ನಿಮ್ಮ ಅರ್ಜಿ ನಮೂನೆಯಲ್ಲಿ ಪ್ರಕಟವಾಗುತ್ತದೆ. ಅರ್ಜಿಯಲ್ಲಿ ಬಾಕಿ ಉಳಿದಿರುವ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
*ಅರ್ಜಿ ಸಲ್ಲಿಸಿದ ನಂತರ My application link ರಲ್ಲಿ ನೀವು ಅರ್ಜಿ ಸಲ್ಲಿಸಿರುವ ಅಧಿಸೂಚನೆಯನ್ನು ಆಯ್ಕೆ ಮಾಡಿದಲ್ಲಿ ಕೆಳಗೆ ನಿಮ್ಮ ಅರ್ಜಿಯು ಪ್ರಕಟವಾಗುತ್ತದೆ.
*ಅರ್ಜಿ ಪಕ್ಕದಲ್ಲಿ pay now ಲಿಂಕ್ ಅನ್ನು ಒತ್ತಿದಲ್ಲಿ Online pyment ಆಯ್ಕೆಗಳು ಮೂಡುತ್ತವೆ.ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಒಂದು ಪ್ರತಿಯನ್ನು ನಿಮ್ಮ ಬಳಿ ಇರಿಸಿಕೊಳ್ಳತಕ್ಕದ್ದು.
ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











