KPSC: 106 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗ 106 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಕೆಪಿಎಸ್ಸಿಯಲ್ಲಿ 106 ಹುದ್ದೆಗಳಿವೆ..ಮಾ.6ರೊಳಗೆ ಅರ್ಜಿ ಹಾಕಿ

ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 6, 2020 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ:

ಗ್ರೂಪ್ ಎ: 7 ಹುದ್ದೆಗಳು
ಗ್ರೂಪ್ ಬಿ: 99 ಹುದ್ದೆಗಳು
ಒಟ್ಟು 106 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:

ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಾಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:

ಅಧಿಸೂಚನೆಯಲ್ಲಿ ತಿಳಿಸಿರುವಂತೆ ಮಾರ್ಚ್ 6,2020ರ ಅನ್ವಯ ಕನಿಷ್ಟ 21 ರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ, ಪ್ರವರ್ಗ- 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ರ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ಓದಿ ತಿಳಿಯತಕ್ಕದ್ದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಪರೀಕ್ಷಾ ದಿನಾಂಕಗಳು:

ಪೂರ್ವಭಾವಿ ಪರೀಕ್ಷಾ ದಿನಾಂಕ: ಮೇ 17,2020
ಮುಖ್ಯ ಪರೀಕ್ಷಾ ದಿನಾಂಕ: 2020ರ ಆಗಸ್ಟ್/ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲಾಗುವುದು. (ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು)

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಫೆಬ್ರವರಿ 6,2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮಾರ್ಚ್ 6,2020
ಪರೀಕ್ಷೆ ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: ಮಾರ್ಚ್ 7,2020

ಪರೀಕ್ಷಾ ಶುಲ್ಕದ ವಿವರ:

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 600/-ರೂ+35ರೂ
ಪ್ರವರ್ಗ- 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ 300/-ರೂ+35/-ರೂ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50+35/-ರೂ
ಪರಿಶಿಷ್ಟ ಜಾತಿ,ಪರಿಶಿಷ್ಟ,ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ ಆದರೆ ಪ್ರೊಸೆಸಿಂಗ್ ಚಾರ್ಚ್ 35/-ರೂ ಅನ್ನು ಎಲ್ಲಾ ಅಭ್ಯರ್ಥಿಗಳು ಪಾವತಿಸಲೇಬೇಕು.

ಅರ್ಜಿ ಶುಲ್ಕವನ್ನು ಯಾವುದೇ ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ ಅಥವಾ ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಅಭ್ಯರ್ಥಿಗಳು ಆನ್-ಲೈನ್ ನಲ್ಲಿ ಆಯೋಗದ ಅಂತರ್ಜಾಲ http://www.kpsc.kar.nic.in/ ಅಥವಾ http://www.kpsc.kar.nic.in/notification.html ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿಸುವ ಮೂಲಕ ಮಾರ್ಚ್ 6,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಶುಲ್ಕವನ್ನು ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಆನ್-ಲೈನ್ ಮೂಲಕ ಅರ್ಜಿಯನ್ನು ಭರ್ತಿಮಾಡುವ ಸಂದರ್ಭದಲ್ಲಿ ಯಾವುದಾದರೂ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ (Help line) ಸಂಖ್ಯೆ. 7406086807 / 7406086801
ಪರೀಕ್ಷಾಶಾಖೆ-1 : 080-30574935
ಮತ್ತು ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ 080-30574957/30574901 ಅನ್ನು ಸಂಪರ್ಕಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
KPSC recruitment 2020 notification has been released in official website for the recruitment of 106 gazetted probationary group A and B posts. Interested candidates can apply through online before 6th march 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+