
ಕರ್ನಾಟಕ ರಾಜ್ಯದ ವಿವಿಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಲ್ಲಿನ 22 ಅಧ್ಯಕ್ಷರು, 17 ಸದಸ್ಯರು ಮತ್ತು 17 ಮಹಿಳಾ ಸದಸ್ಯರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಕೋವಿಡ್ ಕಾರಣದಿಂದಾಗಿ ಲಾಕ್‌ಡೌನ್ ಘೋಷಿಸಲಾಗಿದ್ದರಿಂದ ಈ ಹುದ್ದೆಗಳಿಗೆ ಜುಲೈ 1ರ ವರೆಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ.
ವಿದ್ಯಾರ್ಹತೆ/ಅನುಭವ/ವಯೋಮಿತಿ:
ಅಧ್ಯಕ್ಷರು ಹುದ್ದೆಗಳಿಗೆ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿರಬೇಕು ಅಥವಾ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿರಬೇಕು ಅಥವಾ ಜಿಲ್ಲಾ ನ್ಯಾಯಾಧೀಶರಾಗಲು ಅರ್ಹತೆಯನ್ನು ಹೊಂದಿರುವಂತಹವರಾಗಿರಬೇಕು.
ಸದಸ್ಯರು/ಮಹಿಳಾ ಸದಸ್ಯರು ಹುದ್ದೆಗಳಿಗೆ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.
ಅಭ್ಯರ್ಥಿಯು ನ್ಯಾಯ, ನಿಷ್ಠೆ ಹಾಗೂ ಘನತೆಯನ್ನು ಹೊಂದಿರುವದರ ಜೊತೆಗೆ ಗ್ರಾಹಕರ ವ್ಯವಹಾರಗಳು, ಕಾನೂನು, ಸಾರ್ವಜನಿಕ ವ್ಯವಹಾರಗಳು, ಆಡಳಿತ, ಆರ್ಥಿಕ, ವಾಣಿಜ್ಯ, ಕೈಗಾರಿಕೆ, ಹಣಕಾಸು, ನಿರ್ವಹಣೆ, ಇಂಜಿನಿಯರಿಂಗ್, ತಾಂತ್ರಿಕ, ಸಾರ್ವಜನಿಕ ಆರೋಗ್ಯ ಅಥವಾ ಔಷಧ ಕೇತ್ರಗಳಲ್ಲಿ 15 ವರ್ಷಗಳ ಕಡಿಮೆಯಿಲ್ಲದ ವಿಶೇಷ ಜ್ಞಾನ ಮತ್ತು ವೃತ್ತಿ ಅನುಭವವನ್ನು ಹೊಂದಿರತಕ್ಕದ್ದು.
ನೇಮಕಾತಿ ವಿಧಾನ:
ವಸ್ತುನಿಷ್ಠೆ ಮಾದರಿಯ ಪರೀಕ್ಷೆ, ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು 250/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಕಲ್ಪಿಸಿರುವಂತಹ ವಿಧಾನದಲ್ಲಿ ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಕೆ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://kscdrc.kar.nic.in/index_kan.htm ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜೂನ್ 25,2021 ರಿಂದ ಜುಲೈ 1,2021ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











