ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ, ವಿಶ್ವಬ್ಯಾಂಕ್ ನೆರವಿನ ಯೋಜನೆಯಡಿ "ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ" ಯನ್ನು ಜೀವಿ ಪರಿಸ್ಥಿತಿ ಮತ್ತು ಪರಿಸರ ವಿಭಾಗ, ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಯಲ್ಲಿ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿ ಮತ್ತು ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅಕ್ಟೋಬರ್ 30,2020ರ ಸಂಜೆ 5:30ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಖಾಲಿ ಹುದ್ದೆಗಳ ವಿವರ:
ಸಂಗ್ರಹಣಾ ಅಧಿಕಾರಿ - 1 ಹುದ್ದೆ
ಲೆಕ್ಕ ಪತ್ರ ಅಧಿಕಾರಿ - 1 ಹುದ್ದೆ
ಕಾರ್ಯಕ್ರಮ ನಿರ್ವಾಹಕರು (ಎಕಾಲಜಿಸ್ಟ್ -ಮರೈನ್ ಕೋಸ್ಟಲ್ ಎಕಾಲಜಿ) - 1 ಹುದ್ದೆ
ಕಾರ್ಯಕ್ರಮ ನಿರ್ವಾಹಕರು (ಜಿಐಎಸ್ /ರಿಮೋಟ್ ಸೆನ್ಸಿಂಗ್) - 1 ಹುದ್ದೆ
ಒಟ್ಟು 4 ಹುದ್ದೆಗಳು
ವಿದ್ಯಾರ್ಹತೆ:
ಪೋಸ್ಟ್ ಗ್ರಾಜುಯೇಟ್ ಪದವಿ, ಸಿವಿಲ್ ಇಂಜಿನಿಯರಿಂಗ್, ಚಾರ್ಟೆಡ್ ಅಕೌಂಟೆಂಟ್, ಸ್ನಾತಕೋತ್ತರ ಪದವಿ, ಪಿಹೆಚ್‌ಡಿ ಮತ್ತು ಎಂ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ವೇತನದ ವಿವರ:
ಸಂಗ್ರಹಣಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 75,000/-ರೂ, ಲೆಕ್ಕ ಪತ್ರ ಅಧಿಕಾರಿ ಹುದ್ದೆಗಳಿಗೆ ತಿಂಗಳಿಗೆ 60,000/-ರೂ, ಕಾರ್ಯಕ್ರಮ ನಿರ್ವಾಹಕರು (ಎಕಾಲಜಿಸ್ಟ್ -ಮರೈನ್ ಕೋಸ್ಟಲ್ ಎಕಾಲಜಿ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 75,000/-ರೂ ಮತ್ತು ಕಾರ್ಯಕ್ರಮ ನಿರ್ವಾಹಕರು (ಜಿಐಎಸ್ /ರಿಮೋಟ್ ಸೆನ್ಸಿಂಗ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 60,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಆನ್‌ಲೈನ್ ಮೂಲಕ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://karunadu.karnataka.gov.in/ksczma/Pages/Home.aspx ಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ತಮ್ಮ ವ್ಯಕ್ತಿಗತ ಮಾಹಿತಿ, ವಿದ್ಯಾರ್ಹತೆ, ಅನುಭವ ಇತ್ಯಾದಿಗಳ ಬಗ್ಗೆ ಅಗತ್ಯ ಮಾಹಿತಿ, ದಾಖಲೆಗಳ ಪ್ರತಿಗಳನ್ನು ಅಕ್ಟೋಬರ್ 30,2020ರ ಸಂಜೆ 5:30ರ ಒಳಗಾಗಿ ಕಚೇರಿಯ ವಿಳಾಸಕ್ಕೆ ತಲುಪುವಂತೆ ಅರ್ಜಿಯನ್ನು ಸಲ್ಲಿಸಬಹುದು.
ಕಚೇರಿಯ ವಿಳಾಸ:
ಯೋಜನಾ ನಿರ್ದೇಶಕರು,
ಕೊಠಡಿ ಸಂಖ್ಯೆ 709-710,
2ನೇ ಹಂತ, 7ನೇ ಮಹಡಿ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು - 560001.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











