ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆ.ಎ.ಆರ್.ಪಿ. ಮೌಂಟೆಡ್ ಕಂಪನಿ, ಮೈಸೂರು ಇಲ್ಲಿ 17 ಆಂಗ್ಲ ಮತ್ತು ಕರ್ನಾಟಕ ವಾದ್ಯಗಾರ ಹಾಗೂ ಕರ್ನಾಟಕ ವಾದ್ಯಗಾರರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ. ಆಸಕ್ತರು ಜುಲೈ 15,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.

ಖಾಲಿ ಹುದ್ದೆಗಳ ವಿವರ:
ಆಂಗ್ಲ ವಾದ್ಯವಂದದ ವಾದ್ಯಗಾರ - 7 ಹುದ್ದೆಗಳು
ಕರ್ನಾಟಕ ವಾದ್ಯವಂದದ ವಾದ್ಯಗಾರ - 8 ಹುದ್ದೆಗಳು
ಕರ್ನಾಟಕ ವಾದ್ಯಗಾರರ ಬ್ಯಾಕ್‌ಲಾಗ್ - 2 ಹುದ್ದೆಗಳು
ಒಟ್ಟು 17 ಹುದ್ದೆಗಳು
ವಿದ್ಯಾರ್ಹತೆ:
ಆಂಗ್ಲ ವಾದ್ಯವಂದದ ವಾದ್ಯಗಾರ ಹುದ್ದೆಗಳಿಗೆ ಲಂಡನ್‌ನ ಟ್ರಿನಿಟಿ ಸಂಗೀತ ಕಾಲೇಜ್ ನ ಲಿನ್ಸಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಇದಲ್ಲದೆ, ಎಲ್ಲಾ ರೀತಿ ದೊಡ್ಡ ಪ್ರಮಾಣದ, ಸಣ್ಣ ಪ್ರಮಾಣದ ಮತ್ತು ಕ್ರೊಮ್ಯಾಟಿಕ್ ಸ್ಕೇಲಿನ ವಾದ್ಯಗಳ ಬಗ್ಗೆ ತಿಳುವಳಿಕೆ ಇರಬೇಕು ಹಾಗೂ ವಾದ್ಯೋಪಕರಣಗಳನ್ನು ಆ ಕ್ಷಣವೇ ಸರಾಗವಾಗಿ ನುಡಿಸುವ ಸಾಮರ್ಥ್ಯವಿರಬೇಕು.
ಕರ್ನಾಟಕ ವಾದ್ಯವಂದದ ವಾದ್ಯಗಾರ ಮತ್ತು ಬ್ಯಾಕ್‌ಲಾಗ್ ಹುದ್ದೆಗಳಿಗೆ ಕರ್ನಾಟಕ ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆ ತೇರ್ಗಡೆಯಾಗಿರಬೇಕು ಅಥವಾ ಕಾನೂನಿನ ಅನ್ವಯ ಸ್ಥಾಪಿಸಲಾಗಿರುವ ವಿಶ್ವವಿದ್ಯಾಲಯದ 'ಬಿ' ಮ್ಯೂಸಿಕ್ ಪದವಿ. ಎಲ್ಲಾ ದೊಡ್ಡ ಪ್ರಮಾಣದದ, ಸಣ್ಣ ಪ್ರಮಾದ ಹಾಗೂ ಕ್ರೊಮ್ಯಾಟಿಕ್ ಸ್ಕೇಲ್ ಗಳ ತಿಳುವಳಿಕೆ ಇರಬೇಕು ಮತ್ತು ಕೂಡಲೇ ಸರಾಗವಾಗಿ ವಾದ್ಯ ನುಡಿಸುವ ಸಾಮರ್ಥ್ಯವಿರಬೇಕು.
ವಯೋಮಿತಿ:
ಅರ್ಜಿಯನ್ನು ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ಅಂದರೆ ಜೂನ್ 25,2021ಕ್ಕೆ ಅಭ್ಯರ್ಥಿಗೆ ಕನಿಷ್ಟ 18 ರಿಂದ ಗರಿಷ್ಟ 30 ವರ್ಷ ವಯೋಮಿತಿಯೊಳಗಿನವರಾಗಿರಬೇಕು.
ಬ್ಯಾಕ್‌ಲಾಗ್ ಹುದ್ದೆಗಳಿಗೆ ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ವೇತನ:
ವಾದ್ಯಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,500/- ರಿಂದ 47,650/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, 2(ಎ), 2(ಬಿ), 3(ಎ), 3(ಬಿ) ಗೆ ಅಭ್ಯರ್ಥಿಗಳು 250/-ರೂ ಮತ್ತು ಪ.ಜಾ/ಪ.ಪ/ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಎಸ್‌ಬಿಐ ಬ್ಯಾಂಕ್ ನ ಅಧಿಕೃತ ಶಾಖೆಗಳಿಂದ ಡಿ.ಡಿಯನ್ನು "ಕಮಾಂಡೆಂಟ್, ಕೆ.ಎ.ಆರ್.ಪಿ. ಮೌಂಟೆಡ್ ಕಂಪನಿ, ಮೈಸೂರು ರವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸುವುದು.
ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ನಿಗಧಿತ ನಮೂನೆಯ ಅರ್ಜಿ ಹಾಗೂ ಮಾಹಿತಿ/ಸೂಚನೆಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಬೆರಳಚ್ಚು ಮಾಡಿಸಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಜುಲೈ 15,2021ರೊಳಗೆ ಅರ್ಜಿಯನ್ನು ತಲುಪಿಸಬೇಕಿರುತ್ತದೆ.
ಅರ್ಜಿಗಳನ್ನು ಕಮಾಂಡೆಂಟ್, ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ, ಲಲಿತಮಹಲ್ ರಸ್ತೆ, ಮೈಸೂರು-570 011ರವರ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕೊನೆಯ ದಿನಾಂಕದೊಳಗೆ ಕಚೇರಿಗೆ ತಲುಪುವಂತೆ ಕಳುಹಿಸಬಹುದು.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











