ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 5000ಕ್ಕೂ ಅಧಿಕ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಏಪ್ರಿಲ್ 1,2022 ರಿಂದ ಏಪ್ರಿಲ್ 30,2022ರ ಸಂಜೆ 6 ಗಂಟೆಯೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.
KSP ನೇಮಕಾತಿ 2022 ಖಾಲಿ ಹುದ್ದೆಗಳ ವಿವರ :
ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ - 1500 ಹುದ್ದೆಗಳು
ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ - 3550 ಹುದ್ದೆಗಳು
ಒಟ್ಟು 5,550 ಹುದ್ದೆಗಳು
KSP ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ 2022 : ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳಿವೆ ?
ಬೆಂಗಳೂರು ನಗರ - 593 ಹುದ್ದೆಗಳು
ರೈಲ್ವೆ, ಬೆಂಗಳೂರು - 35 ಹುದ್ದೆಗಳು
ಕಲಬುರಗಿ ನಗರ - 20 ಹುದ್ದೆಗಳು
ಕಲಬುರಗಿ ಜಿಲ್ಲೆ - 10 ಹುದ್ದೆಗಳು
ಬೀದರ್ - 79 ಹುದ್ದೆಗಳು
ಯಾದಗಿರಿ - 25 ಹುದ್ದೆಗಳು
ಬಳ್ಳಾರಿ/ವಿಜಯನಗರ - 107 ಹುದ್ದೆಗಳು
ರಾಯಚೂರು - 63 ಹುದ್ದೆಗಳು
ಕೊಪ್ಪಳ - 38 ಹುದ್ದೆಗಳು
ಮೈಸೂರು ನಗರ - 25 ಹುದ್ದೆಗಳು
ಮಂಗಳೂರು ನಗರ - 50 ಹುದ್ದೆಗಳು
ಹುಬ್ಬಳ್ಳಿ-ಧಾರವಾಡ ನಗರ - 45 ಹುದ್ದೆಗಳು
ಬೆಳಗಾವಿ ನಗರ - 75 ಹುದ್ದೆಗಳು
ಬೆಂಗಳೂರು ಜಿಲ್ಲೆ - 60 ಹುದ್ದೆಗಳು
ತುಮಕೂರು - 45 ಹುದ್ದೆಗಳು
ರಾಮನಗರ - 30 ಹುದ್ದೆಗಳು
ಮೈಸೂರು - 40 ಹುದ್ದೆಗಳು
ಹಾಸನ - 30 ಹುದ್ದೆಗಳು
ಮಂಡ್ಯ - 30 ಹುದ್ದೆಗಳು
ಶಿವಮೊಗ್ಗ - 25 ಹುದ್ದೆಗಳು
ದಕ್ಷಿಣ ಕನ್ನಡ, ಮಂಗಳೂರು - 45 ಹುದ್ದೆಗಳು
ಬೆಳಗಾವಿ - 30 ಹುದ್ದೆಗಳು
KSP ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ 2022 : ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳಿವೆ ?
ಬೆಂಗಳೂರು ನಗರ - 1330 ಹುದ್ದೆಗಳು
ಮೈಸೂರು ನಗರ - 90 ಹುದ್ದೆಗಳು
ಮಂಗಳೂರು ನಗರ - 235 ಹುದ್ದೆಗಳು
ಹುಬ್ಬಳ್ಳಿ-ಧಾರವಾಡ ನಗರ - 60 ಹುದ್ದೆಗಳು
ಬೆಂಗಳೂರು ಜಿಲ್ಲೆ - 160 ಹುದ್ದೆಗಳು
ತುಮಕೂರು - 65 ಹುದ್ದೆಗಳು
ಕೋಲಾರ - 40 ಹುದ್ದೆಗಳು
ಕೆ.ಜಿ.ಎಫ್ - 14 ಹುದ್ದೆಗಳು
ರಾಮನಗರ - 75 ಹುದ್ದೆಗಳು
ಮೈಸೂರು ಜಿಲ್ಲೆ - 152 ಹುದ್ದೆಗಳು
ಚಾಮರಾಜನಗರ - 40 ಹುದ್ದೆಗಳು
ಹಾಸನ - 55 ಹುದ್ದೆಗಳು
ಕೊಡಗು - 20 ಹುದ್ದೆಗಳು
ಮಂಡ್ಯ - 75 ಹುದ್ದೆಗಳು
ದಾವಣಗೆರೆ - 40 ಹುದ್ದೆಗಳು
ಶಿವಮೊಗ್ಗ - 70 ಹುದ್ದೆಗಳು
ಚಿತ್ರದುರ್ಗ - 20 ಹುದ್ದೆಗಳು
ಹಾವೇರಿ - 60 ಹುದ್ದೆಗಳು
ದ.ಕ ಮಂಗಳೂರು - 185 ಹುದ್ದೆಗಳು
ಉಡುಪಿ - 40 ಹುದ್ದೆಗಳು
ಯು.ಕೆ ಕಾರವಾರ - 80 ಹುದ್ದೆಗಳು
ಚಿಕ್ಕಮಗಳೂರು - 70 ಹುದ್ದೆಗಳು
ಬೆಳಗಾವಿ - 90 ಹುದ್ದೆಗಳು
ಗದಗ - 40 ಹುದ್ದೆಗಳು
ಧಾರವಾಡ - 75 ಹುದ್ದೆಗಳು
ಕಲಬುರಗಿ - 80 ಹುದ್ದೆಗಳು
ಬೀದರ್ - 70 ಹುದ್ದೆಗಳು
ಯಾದಗಿರಿ - 50 ಹುದ್ದೆಗಳು
ಬಳ್ಳಾರಿ - 69 ಹುದ್ದೆಗಳು
ರಾಯಚೂರು - 50 ಹುದ್ದೆಗಳು
ಕೊಪ್ಪಳ - 20 ಹುದ್ದೆಗಳು
ಮೌಂಟೆಡ್ ಕಂಪನಿ, ಮೈಸೂರು - 30 ಹುದ್ದೆಗಳು
KSP ನೇಮಕಾತಿ 2022 ವಿದ್ಯಾರ್ಹತೆ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ೧೨ನೇ ತರಗತಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
KSP ನೇಮಕಾತಿ 2022 ವಯೋಮಿತಿ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಟ 25 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
KSP ನೇಮಕಾತಿ 2022 ವೇತನ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.
KSP ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೇಹದಾರ್ಢ್ಯತೆ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
KSP ನೇಮಕಾತಿ 2022 ಅರ್ಜಿ ಶುಲ್ಕ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ವರ್ಗ, ಪ್ರವರ್ಗ-2ಎ, ಪ್ರವರ್ಗ-2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 400/-ರೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು 200/-ರೂ ಅರ್ಜಿ ಶುಲ್ಕವನ್ನು ನಗದು/ಆನ್‌ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ ಹೆಚ್‌ಡಿಎಫ್‌ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬಹುದು.
KSP ನೇಮಕಾತಿ 2022 ಅರ್ಜಿ ಸಲ್ಲಿಕೆ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯ
ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://rec21.ksp-online.in/ ಗೆ ಭೇಟಿ ನೀಡಿ. ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಏಪ್ರಿಲ್ 1,2022 ರಿಂದ ಏಪ್ರಿಲ್ 30,2022ರ ಸಂಜೆ 6 ಗಂಟೆಯೊಳಗೆ ಅರ್ಜಿಯನ್ನು ಹಾಕಬಹುದು.
ಅರ್ಜಿಗಳನ್ನು ಖುದ್ದಾಗಿ/ಅಂಚೆ/ಕೊರಿಯರ್ ಮೂಲಕಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅಭ್ಯರ್ಥಿಗಳು ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.
ಅಭ್ಯರ್ಥಿಗಳು ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











