KUIDFC Recruitment 2020: ವಿವಿಧ 11 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ, ಬೆಂಗಳೂರು ಇಲ್ಲಿ ಖಾಲಿ ಇರುವ 11 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಜೂನ್ 30 ರಿಂದ ಜುಲೈ 14,2020ರ ಸಂಜೆ 4 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಕೆಯುಐಡಿಎಫ್ ಸಿಯಲ್ಲಿ 11 ಹುದ್ದೆಗಳ ನೇಮಕಾತಿ,.ಜು..14ರೊಳಗೆ ಅರ್ಜಿ ಹಾಕಿ

ಹುದ್ದೆಗಳ ವಿವರ:

ಉಪ ಪ್ರಧಾನ ವ್ಯವಸ್ಥಾಪಕರು - 1 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು- 1 ಹುದ್ದೆ
ಸಹಾಯಕ ಪ್ರಧಾನ ವ್ಯವಸ್ಥಾಪಕರು/ವ್ಯವಸ್ಥಾಪಕರು - 1 ಹುದ್ದೆ
ವ್ಯವಸ್ಥಾಪಕರು / ಸಹಾಯಕ ವ್ಯವಸ್ಥಾಪಕರು (ಸಾರ್ವಜನಿಕ ಸಂಪರ್ಕ) -1 ಹುದ್ದೆ
ವ್ಯವಸ್ಥಾಪಕರು / ಸಹಾಯಕ ವ್ಯವಸ್ಥಾಪಕರು ( ಮಾನವ ಸಂಪನ್ಮೂಲ) - 1 ಹುದ್ದೆ
ವ್ಯವಸ್ಥಾಪಕರು (ತಾಂತ್ರಿಕ)- 1 ಹುದ್ದೆ
ಸಹಾಯಕ ವ್ಯವಸ್ಥಾಪಕರು - 1 ಹುದ್ದೆ
ಹಿರಿಯ ಕಾರ್ಯನಿರ್ವಾಹಕ ಸಹಾಯಕರು -3 ಹುದ್ದೆಗಳು
ಕಿರಿಯ ಕಾರ್ಯನಿರ್ವಾಹಕ ಸಹಾಯಕರು -1 ಹುದ್ದೆ
ಒಟ್ಟು 11 ಹುದ್ದೆಗಳು

ವೇತನದ ವಿವರ:

ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ತಿಂಗಳಿಗೆ 56,800/-ರೂ, ಸಹಾಯಕ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ತಿಂಗಳಿಗೆ 52,650/-ರೂ, ವ್ಯವಸ್ಥಾಪಕರು ಹುದ್ದೆಗಳಿಗೆ ತಿಂಗಳಿಗೆ 45,300/-ರೂ, ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ ತಿಂಗಳಿಗೆ 40,900/-ರೂ, ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ತಿಂಗಳಿಗೆ 37,900/-ರೂ ಮತ್ತು ಕಿರಿಯ ಕಾರ್ಯನಿರ್ವಾಹಕ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,400/-ರೂ ವೇತನವನ್ನು ನೀಡಲಾಗುವುದು.

ನೇಮಕಾತಿ ವಿಧಾನ:

ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಮೆರಿಟ್, ಅನುಭವದ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್ ಸಿ) ಅಧಿಕೃತ ವೆಬ್‌ಸೈಟ್‌ http://www.kuidfc.com/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜುಲೈ 14,2020ರ ಸಂಜೆ 4 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.

ಈ ಹುದ್ದೆಗಳಿಗೆ ಕೇಳಲಾಗಿರುವ ಶೈಕ್ಷಣಿಕ ವಿದ್ಯಾರ್ಹತೆ / ಅನುಭವ / ಕರ್ತವ್ಯಗಳ ವಿವರವನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
KUIDFC 2020 released recruitment notification for 11 various posts. Interested candidates can apply through online before July 14.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+