ಕುವೆಂಪು ವಿಶ್ವವಿದ್ಯಾಲಯ ನೇಮಕಾತಿ 235 ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ ಶಂಕರಘಟ್ಟ, ನೇಮಕಾತಿ 235 ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಸ್ನಾತಕೋತ್ತರ ಕೇಂದ್ರ, ಕಡೂರು / ಚಿಕ್ಕಮಗಳೂರು ಹಾಗೂ ವಿಶ್ವವಿದ್ಯಾಲಯದ ಅಧೀನಕ್ಕೊಳಪಡುವ ಘಟಕ / ನೇರ ಆಡಳಿತಕ್ಕೊಳಪಟ್ಟ ಕಾಲೇಜಿನ 2019-20ನೇ ಶೈಕ್ಷಣಿಕ ಸಾಲಿನ ಹೆಚ್ಚುವರಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ಪಡೆಯಲು ವಿವಿಧ ವಿಷಯಗಳ ಬೋಧನಾ ಕಾರ್ಯಕ್ಕನುಗುಣವಾಗಿ ನಮೂದಿಸಲಾಗ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ದ್ವಿ-ಪ್ರತಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗಳು ಖಾಲಿ ಇವೆ

CRITERIA DETAILS
Name Of The Posts ಅತಿಥಿ ಉಪನ್ಯಾಸಕರು
Organisation ಕುವೆಂಪು ವಿಶ್ವವಿದ್ಯಾಲಯ
Educational Qualification ಸ್ನಾತಕೋತ್ತರ ಪದವಿ, ಪಿಹೆಚ್.ಡಿ
Job Location ಶಿವಮೊಗ್ಗ, ಕಡೂರು, ಶಂಕರಘಟ್ಟ,ಚಿಕ್ಕಮಗಳೂರು (ಕರ್ನಾಟಕ)
Application Start Date February 13, 2019
Application End Date February 28, 2019

ಶೈಕ್ಷಣಿಕ ವಿದ್ಯಾರ್ಹತೆ:

ಅಭ್ಯರ್ಥಿಗಳು ಸಂಬಂಧಿಸಿದ ವಿಷಯದ ಸ್ನಾತಕೋತ್ತರ ಪದವಿಯನ್ನು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದಿರಬೇಕು ಹಾಗೂ ಯುಜಿಸಿ ನಿಯಮಾನುಸಾರ ಶೇ.55 ಅಂಕಗಳನ್ನು ಹೊಂದಿರಬೇಕು. ಎನ್.ಇಟಿ/ಎಸ್.ಎಲ್.ಇ.ಟಿ ಅಥವಾ ಪಿಹೆಚ್.ಡಿ ಪದವಿಯನ್ನು ಹೊಂದಿದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಅರ್ಜಿ ಶುಲ್ಕದ ವಿವರ:

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಸಾಮಾನ್ಯ ವರ್ಗವಿಕಲಚೇತನ ಅಭ್ಯರ್ಥಿಗಳು
ರೂ.100-00 ರೂ.200-00ಯಾವುದೇ ಶುಲ್ಕ ಇರುವುದಿಲ್ಲ

ಅರ್ಜಿ ಶುಲ್ಕದ ಡಿ.ಡಿ.ಯನ್ನು ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ - ಇವರ ಹೆಸರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಪಡೆದು ಪಾವತಿಯಾಗುವಂತೆ ಸಲ್ಲಿಸುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ವಿಶ್ವವಿದ್ಯಾನಿಲಯದ ವೆಬ್ ಸೈಟ್ http://www.kuvempu.ac.in/KannadaIndex.php ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲಾತಿಗಳೊಂದಿಗೆ ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-577451- ಇವರ ವಿಳಾಸಕ್ಕೆ ದಿನಾಂಕ 28.2.2019 ರಂದು ಸಂಜೆ 4-00 ರೊಳಗಾಗಿ ತಲುಪುವಂತೆ ಕಳುಹಿಸುವುದು.

ಅರ್ಜಿ ಸಲ್ಲಿಸುವಾಗ ಲಕೋಟೆಯ ಮೇಲೆ ----ವಿಷಯದ ಅತಿಥಿ ಉಪನ್ಯಾಸಕರ ಸೇವೆಗೆ ಅರ್ಜಿ ಸಲ್ಲಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.

ಅತಿಥಿ ಉಪನ್ಯಾಸಕರ ಸೇವೆಯು ಸ್ನಾತಕೋತ್ತರ ವಿಭಾಗದ/ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯ ಹಾಗೂ ಶೈಕ್ಷಣಿಕ / ಸೆಮಿಸ್ಟರ್ ಅವಧಿಗೆ ಮಾತ್ರ ಸೀಮಿತವಾಗಿದ್ದು, ಸದರಿ ಅವಧಿಯ ಮುಕ್ತಾಯ ದಿನಾಂಕದಂದು ಸದರಿ ಅತಿಥಿ ಉಪನ್ಯಾಸಕರ ಸೇವೆಯು ತಾನೇ ತಾನಾಗಿ ಯಾವುದೇ ಮುನ್ಸೂಚನೆ ಇಲ್ಲದೆ ರದ್ದಾಗುತ್ತದೆ.

ವಿಶ್ವವಿದ್ಯಾಲಯದ ಕಾಲೇಜುಗಳು ಸೇರಿದಂತೆ 1 ಕ್ಕಿಂತ ಹೆಚ್ಚು ಘಟಕಗಳಿಗೆ ಅರ್ಜಿ ಸಲ್ಲಿಸುವುದಾದಲ್ಲಿ, ಒಂದೇ ಅರ್ಜಿಯಲ್ಲಿ ಘಟಕಗಳನ್ನು/ವಿಭಾಗಗಳನ್ನು ಅನಕ್ರಮವಾಗಿ ನಮೂದಿಸಿ ಅರ್ಜಿಯನ್ನು ಸಲ್ಲಿಸುವುದು.

ವಿಶೇಷ ಸೂಚನೆ:

ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಪ್ರತ್ಯೇಕ ಪತ್ರಗಳನ್ನು ಕಳುಹಿಸಲಾಗುವುದಿಲ್ಲ. ಸಂದರ್ಶನ ದಿನಾಂಕ ಮತ್ತು ಇತರೆ ಮಾಹಿತಿಗಳಿಗೆ ವಿಶ್ವವಿದ್ಯಾಲಯದ ವೆಬ್ ಸೈಟ್ http://www.kuvempu.ac.in/KannadaIndex.php ಅನ್ನು ಗಮನಿಸಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮತ್ತು ಅರ್ಜಿ ನಮೂನೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Kuvempu university recruiting 462 candidates to fill guest faculty posts in karnataka. Interested candidates can send applications through post in prescribed format before 28th february 2019.For more details read the article.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+