ಮಂಡ್ಯ ಜಿಲ್ಲಾ ನ್ಯಾಯಾಲಯ: 2018-19 ನೇ ಸಾಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಮಂಡ್ಯ ಜಿಲ್ಲಾ ನ್ಯಾಯಾಲಯ 2018-19ನೇ ಸಾಲಿನ ವಿವಿಧ ಹುದ್ದೆಗಳ ನೇಮಕಾತಿಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಮತ್ತು ಜವಾನ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿಯು ಡಿಸೆಂಬರ್ 17,2018 ರಿಂದ ಪ್ರಾರಂಭವಾಗಿದ್ದು, ಜನವರಿ 17,2019ರ ವರೆಗೆ ಅರ್ಜಿ ಸಲ್ಲಿಸುವ ಅವಕಾಶವಿದೆ.

ವಿವಿಧ ಹುದ್ದೆಗಳ ಮಾಹಿತಿಯೊಂದಿಗೆ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಲು ಮುಂದೆ ಓದಿ

ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

 

CRITERIA DETAILS
Name Of The Posts ಶೀಘ್ರ ಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಮತ್ತು ಜವಾನ ಹುದ್ದೆಗಳು
Organisation ಜಿಲ್ಲಾ ನ್ಯಾಯಾಲಯ ಘಟಕ ಮಂಡ್ಯ
Educational Qualification ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ೧೦ನೇ ತರಗತಿ/ ೧೨/ಪದವಿ ಅಥವಾ ಸಮನಾದ ಅರ್ಹತೆಯನ್ನು ಮಾನ್ಯತೆ ಪಡೆದ ಇನ್ ಸ್ಟಿಟ್ಯೂಟ್ ನಿಂದ ಪಡೆದಿರಬೇಕು.
Job Location ಮಂಡ್ಯ, ಕರ್ನಾಟಕ
Salary Scale ತಿಂಗಳಿಗೆ 17,000 ರಿಂದ 52,650/-ರೂಗಳು
Industry ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ, ಮಂಡ್ಯ
Application End Date January 17, 2019

ವಯೋಮಿತಿ:

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಗರಿಷ್ಟ ವಯೋಮಿತಿ:

ಸಾಮಾನ್ಯ ವರ್ಗ 35 ವರ್ಷ
2A, 2B, 3A, 3B 38 ವ‍ರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 40ವರ್ಷ

1. ಶೀಘ್ರಲಿಪಿಗಾರರು (Stenographer)

ವೇತನ ಶ್ರೇಣಿ:ತಿಂಗಳಿಗೆ 27,650/- ರಿಂದ 52,650/- ರೂ ಹಾಗೂ ಇನ್ನಿತರೆ ಭತ್ಯೆಗಳು

ಹುದ್ದೆಗಳ ವರ್ಗೀಕರಣ

ಮೀಸಲಾತಿಮಹಿಳಾ ಅಭ್ಯರ್ಥಿ ಇತರೆಅಂಗವಿಕಲ (ದೃಷ್ಟಿಮಾಂದ್ಯ) ಮಾಜಿ ಸೈನಿಕ ಗ್ರಾಮೀಣ ಒಟ್ಟು
ಸಾಮಾನ್ಯ ವರ್ಗ 01 01 - 01 -03

ಪ್ರವರ್ಗ-2A 01 - - - 01 ಪ್ರವರ್ಗ-1A - - 01* - - 01 ಪರಿಶಿಷ್ಟ ಜಾತಿ

 
- - - - 01 01 ಒಟ್ಟು 02 01 01 01 01 06

* ದೃಷ್ಟಿಮಾಂದ್ಯ

ಶೈಕ್ಷಣಿಕ ವಿದ್ಯಾರ್ಹತೆ:

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಹಿರಿಯ ಶ್ರೇಣಿಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಹಾಗೂ ಹಿರಿಯ ಶ್ರೇಣಿಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರತಕ್ಕದ್ದು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರ ತಕ್ಕದ್ದು

2 ಬೆರಳಚ್ಚುಗಾರರು (Typist)

ವೇತನ ಶ್ರೇಣಿ: ತಿಂಗಳಿಗೆ 21,400 ರಿಂದ 42,000/- ರೂ ಹಾಗೂ ಇನ್ನಿತರೆ ಭತ್ಯೆಗಳು

ಹುದ್ದೆಗಳ ವರ್ಗೀಕರಣ

ಮೀಸಲಾತಿ ಯೋಜನಾ ನಿರಾಶ್ರಿತರುಮಹಿಳಾ ಅಭ್ಯರ್ಥಿ ಇತರೆ ಅಂಗವಿಕಲ ಮಾಜಿ ಸೈನಿಕ ಗ್ರಾಮೀಣಕನ್ನಡ ಮಾಧ್ಯಮ ಒಟ್ಟು
ಸಾಮಾನ್ಯ ವರ್ಗ 01 02 02 01 01 01 - 08
ಪರಿಶಿಷ್ಟ ಜಾತಿ - 01 - - - 01 01 03
ಪ್ರವರ್ಗ-2A - 01 - - - 01 - 02
ಪ್ರವರ್ಗ-1 - - - 01 - - - 01
ಪ್ರವರ್ಗ-3B - - - 01 - - - 01
ಪ್ರವರ್ಗ-2B - - - 01 - - - 01
ಒಟ್ಟು 01 04 02 04 01 03 01 16

* ದೃಷ್ಟಿ ಮಾಂದ್ಯ

* ಶ್ರವಣ ದೋಷ

ಶೈಕ್ಷಣಿಕ ವಿದ್ಯಾರ್ಹತೆ:

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಹಿರಿಯ ಶ್ರೇಣಿಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಹಾಗೂ ಹಿರಿಯ ಶ್ರೇಣಿಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರತಕ್ಕದ್ದು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರ ತಕ್ಕದ್ದು.

3 ಬೆರಳಚ್ಚು ನಕಲುಗಾರರು(Typist -Copyist)

ವೇತನ ಶ್ರೇಣಿ: ತಿಂಗಳಿಗೆ 21,400/- ರಿಂದ 42,000/-ರೂ ಹಾಗೂ ಇನ್ನಿತರೆ ಭತ್ಯೆಗಳು

ಹುದ್ದೆಗಳ ವರ್ಗೀಕರಣ

ಮೀಸಲಾತಿ ಇತರೆಮಹಿಳೆ ಒಟ್ಟು
ಸಾಮಾನ್ಯ ಅಭ್ಯರ್ಥಿ 01-

1 ಪ್ರವರ್ಗ -3B -01

01 ಒಟ್ಟು 01 01 02

ಶೈಕ್ಷಣಿಕ ವಿದ್ಯಾರ್ಹತೆ:

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕಿರಿಯ ಶ್ರೇಣಿಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರತಕ್ಕದ್ದು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರತಕ್ಕದ್ದು.

4 ಜವಾನರು:

ವೇತನ ಶ್ರೇಣಿ: ತಿಂಗಳಿಗೆ 17,000/- ರಿಂದ 28,950/- ರೂ ಹಾಗೂ ಇನ್ನಿತರೆ ಭತ್ಯೆಗಳು

ಹುದ್ದೆಗಳ ವರ್ಗೀಕರಣ

ಮೀಸಲಾತಿಇತರೆಗ್ರಾಮೀಣ ಮಾ.ಸೈ ಅಂಗವಿಕಲ ಮಹಿಳಾ ಅಭ್ಯರ್ಥಿಕನ್ನಡ ಮಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
ಪ್ರವರ್ಗ-2A 02 01 01 01* 01 - - 06
ಸಾಮಾನ್ಯ ವರ್ಗ 03 05 01 01** 05 01 01 17

ಪರಿಶಿಷ್ಟ ಜಾತಿ 01 01 01 01* 01 - - 05ಪ್ರವರ್ಗ-1 01 01 - - - - - 02ಪ್ರವರ್ಗ-2B - 01 - - - - - 01ಪ್ರವರ್ಗ-3B 01 - - - - - - 01ಪರಿಶಿಷ್ಟ ಪಂಗಡ - - - - 01 - - 01ಪ್ರವರ್ಗ- 3A - 01-

- - - - 01 ಒಟ್ಟು 08 10 03 03 08 01 01 34

* ಲೋ ವಿಷನ್

* ಆರ್ಥೋ

ಶೈಕ್ಷಣಿಕ ವಿದ್ಯಾರ್ಹತೆ:

7ನೇ ತರಗತಿ ಪರೀಕ್ಷತೆಯಲ್ಲಿ ಉತ್ತೀರ್ಣರಾಗಿರಬೇಕು.

ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಅವರ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕದ ವಿವರ:

ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 200/-ರೂ, ಓಬಿಸಿ (2A/2B/3A &3B) ಆಭ್ಯರ್ಥಿಗಳಿಗೆ ಶುಲ್ಕ 100/-ರೂ ಮತ್ತು ಇತರೆ (ಎಸ್ ಸಿ/ಎಸ್ ಟಿ/ಪಿಡ್ಬ್ಯೂಡಿ)

ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ನಮೂನೆಯನ್ನು ಬೆಬ್ ಸೈಟ್ https://districts.ecourts.gov.in/mandya ನಲ್ಲಿ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು 17.1.2019ರ ಸಂಜೆ 4 ಗಂಟೆ ಕೊನೆಯ ದಿನವಾಗಿರುತ್ತದೆ. ಒಂದು ವೇಳೆ ಕೊನೆಯ ದಿನಾಂಕವು ಸಾರ್ವತ್ರಿಕ ರಜಾದಿನವಾಗಿದ್ದಲ್ಲಿ, ಮುಂದಿನ ಕೆಲಸದ ದಿನದ ಕಛೇರಿಯ ಅವಧಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ.

ಅರ್ಜಿ ನಮೂನೆಯಲ್ಲಿರುವ ವಿವರವನ್ನು ಓದಿಕೊಂಡು ಅಲ್ಲಿ ಕೇಳಲಾಗಿರುವ ದಾಖಲಾತಿಗಳೊಂದಿಗೆ ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ

ಅರ್ಜಿ ಸಲ್ಲಿಸಬೇಕಾದ ವಿಳಾಸ:

ವಿಳಾಸ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಮಂಡ್ಯ ಜಿಲ್ಲೆ, ಮಂಡ್ಯ

ಹುದ್ದೆಗಳ ಕುರಿತಾದ ಅರ್ಹತೆ ಮತ್ತು ವಯೋಮಿತಿ ಸಡಿಲಿಕೆ ಮತ್ತು ಅರ್ಜಿ ನಮೂನೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Mandya District Court 2018-19: Recruitment for Various Posts
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X