ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ನೇಮಕಾತಿ 5 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ ಇಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಡನೆ ನೂತನವಾಗಿ ಸ್ಥಾಪಿಸಲಾಗಿರುವ Multi-Disciplinary Research Unit (MRU) ಗೆ ಈ ಕೆಳಕಂಡ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇರೆಗೆ 11 ತಿಂಗಳುಗಳ ಅವಧಿಗೆ ನೇಮಕಾತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಭರ್ತಿಮಾಡಿದ ಅರ್ಜಿ ಮತ್ತು ಅಗತ್ಯ ದಾಖಲಾತಿಗಳನ್ನು ದಿನಾಂಕ 7.2..2019ರ ಸಂಜೆ 5:00ಗಂಟೆ ಒಳಗಾಗಿ ಕಛೇರಿಗೆ ಸಲ್ಲಿಸತಕ್ಕದ್ದು.

ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ರಿಸರ್ಚ್ ಸೈಂಟಿಸ್ಟ್ ||,ರಿಸರ್ಚ್ ಸೈಂಟಿಸ್ಟ್ |,ಲ್ಯಾಬ್ ಟೆಕ್ನೀಶಿಯನ್, ಲ್ಯಾಬ್ ಅಸಿಸ್ಟೆಂಟ್/ಡಿ.ಇ.ಓ
Organisation ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
Educational Qualification M.Sc, PhD,B.Sc,ಪದವಿ
Job Location ಮಂಡ್ಯ
Application Start Date January 24, 2019
Application End Date February 7, 2019

ಶೈಕ್ಷಣಿಕ ವಿದ್ಯಾರ್ಹತೆ:

ರಿಸರ್ಚ್ ಸೈಂಟಿಸ್ಟ್ ||: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಎಂಎಸ್ಸಿ ಮತ್ತು ಪಿಹೆಚ್ ಡಿ ಯನ್ನು ಬಯೋ ಕೆಮಿಸ್ಟ್ರಿಯಲ್ಲಿ ಮಾಡಿರುವುದಲ್ಲದೇ 3ವರ್ಷಗಳ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳು ರಾಜ್ಯ/ಕೇಂದ್ರ ಸರ್ಕಾರದ ಸಂಶೋಧನಾ ಪ್ರಕಟಣೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿ ಅನುಭವ ಹೊಂದಿದಲ್ಲಿ ಅವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು.

ರಿಸರ್ಚ್ ಸೈಂಟಿಸ್ಟ್ |: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ ಮತ್ತು ಪಿಹೆಚ್ ಡಿ ಯನ್ನು ಮೆಡಿಕಲ್ ಬಯೋಕೆಮಿಸ್ಟ್ರಿ/ಬಯೋಟೆಕ್ನಾಲಜಿಯಲ್ಲಿ ಮಾಡಿದ್ದು ವೃತ್ತಿಯಲ್ಲಿ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳು ಸಂಶೋಧಾನಾ ಪ್ರಕಟಣಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿ ಅನುಭವ ಇದ್ದಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು.

ಲ್ಯಾಬ್ ಟೆಕ್ನೀಶಿಯನ್:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ ಪದವಿಯನ್ನು ಮೆಡಿಕಲ್ ಲ್ಯಾಬೋರೇಟರಿ ಇನ್ ಟೆಕ್ನಾಲಜಿಯಲ್ಲಿ ಮಾಡಿರುವುದರ ಜೊತೆಗೆ 2ವರ್ಷಗಳ ಅನುಭವವನ್ನು ಹೊಂದಿರಬೇಕು.

ಲ್ಯಾಬ್ ಅಸಿಸ್ಟೆಂಟ್/ಡಿ.ಇ.ಓ:

ಈ ಹುದ್ದೆಗಳಿಗೆ ಪದವಿಯ ಜೊತೆಗೆ ಗಣಕಯಂತ್ರದ ಅಡ್ವಾನ್ಸ್ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ರಿಸರ್ಚ್ ಸೈಂಟಿಸ್ಟ್ :|| 1
ರಿಸರ್ಚ್ ಸೈಂಟಿಸ್ಟ್ :| 1
ಲ್ಯಾಬ್ ಟೆಕ್ನೀಶಿಯನ್ 2
ಲ್ಯಾಬ್ ಅಸಿಸ್ಟೆಂಟ್/ ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್-ಎ) 1
ಒಟ್ಟು 5

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಹೀಗಿರಬೇಕು

ರಿಸರ್ಚ್ ಅಸಿಸ್ಟೆಂಟ್ | ಮತ್ತು || ಗರಿಷ್ಟ 45 ವರ್ಷಗಳು
ಲ್ಯಾಬೋರೇಟರಿ ಟೆಕ್ನೀಶಿಯನ್ / ಲ್ಯಾಬ್ ಅಸಿಸ್ಟೆಂಟ್ /ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ -ಎ) ಗರಿಷ್ಟ 35 ವರ್ಷಗಳು

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ವೇತನದ ವಿವರ ಇಲ್ಲಿವೆ

ರಿಸರ್ಚ್ ಸೈಂಟಿಸ್ಟ್ ||: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 58,900/- ರೂ ವೇತನ

ರಿಸರ್ಚ್ ಸೈಂಟಿಸ್ಟ್ |: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 48,469/-ರೂ ವೇತನ

ಲ್ಯಾಬ್ ಟೆಕ್ನೀಶಿಯನ್: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,360/-ರೂ ವೇತನ

ಲ್ಯಾಬ್ ಅಸಿಸ್ಟೆಂಟ್/ಡಿ.ಇ.ಓ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 16,179/- ರೂ ವೇತನ ನೀಡಲಾಗುವುದು.

ಆಯ್ಕೆ ವಿಧಾನ:

ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ ತದನಂತರ ನೇರಸಂದರ್ಶನವನ್ನು ಕೈಗೊಳ್ಳಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಭರ್ತಿಮಾಡಿದ ಅರ್ಜಿ ಮತ್ತು ಅಗತ್ಯ ದಾಖಲಾತಿಗಳನ್ನು 2 ಪಾಸ್ ಪೋರ್ಟ್ ಭಾವಚಿತ್ರಗಳೊಡನೆ ರಿಸರ್ಚ್ ಸೈಂಟಿಸ್ಟ್ || ಮತ್ತು |ಹುದ್ದೆಗೆ ರೂ.1000/-ಗಳ ಡಿ.ಡಿ ಹಾಗೂ ಲ್ಯಾಬ್ ಟೆಕ್ನೀಶಿಯನ್ ಮತ್ತು ಲ್ಯಾಬ್ ಅಸಿಸ್ಟೆಂಟ್/ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ರೂ.500/- ಗಳ ಡಿ.ಡಿಯನ್ನು "ನಿರ್ದೇಶಕರು, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ" ಇವರ ಹೆಸರಿಗೆ ದಿನಾಂಕ 7.2.2019ರ ಸಂಜೆ 5:00ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು. ಲಕೋಟೆಯ ಮೇಲೆ ಯಾವ ಹುದ್ದೆಗಾಗಿ ಅರ್ಜಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.

ನಿಗಧಿತ ಅರ್ಜಿ ನಮೂನೆ, ಅಭ್ಯರ್ಥಿಗಳಿಗೆ ನಿಗಧಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ, ಕ್ರೋಢೀಕೃತ ವೇತನ ಹಾಗೂ ಮತ್ತಿತರೆ ವಿವರಗಳನ್ನು ಸಂಸ್ಥೆಯ www.mimsmandya.org ವೆಬ್ ಸೈಟ್ ಅನುಬಂಧ-1ರಲ್ಲಿ ಪಡೆಯಬಹುದಾಗಿರುತ್ತದೆ.

ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Mandya institute of medical sciences notification has been released for the recruitment for 5 various posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+