4000 ಮಂದಿಗೆ ಉದ್ಯೋಗ ನೀಡಲು ಬೃಹತ್ ಉದ್ಯೋಗ ಮೇಳ

ಸೊರಬ ಪಟ್ಟಣದ ರಂಗ ಮಂದಿರದಲ್ಲಿ ಉದ್ಯೋಗದಾತ ಸಂಸ್ಥೆ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. 80ಕ್ಕೂ ಅಧಿಕ ಪ್ರತಿಷ್ಠಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಆಗಸ್ಟ್ 31ರಂದು ಸೊರಬದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಉದ್ಯೋಗದಾತ ಸಂಸ್ಥೆ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. 80ಕ್ಕೂ ಅಧಿಕ ಪ್ರತಿಷ್ಠಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

ವಿದ್ಯಾರ್ಹತೆಗೆ ಅನುಗುಣವಾಗಿ 8000 ದಿಂದ 30,000 ರೂ. ತನಕ ವೇತನ ನೀಡಲು ಕಂಪನಿಗಳು ಒಪ್ಪಿಕೊಂಡಿವೆ.

ಬೃಹತ್ ಉದ್ಯೋಗ ಮೇಳ

ಈ ಉದ್ಯೋಗ ಮೇಳದಲ್ಲಿ 80 ಕಂಪನಿಗಳು ಭಾಗವಹಿಸಲಿದ್ದು, 4000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಉದ್ಯೋಗ ಮೇಳದಲ್ಲಿ ಆಯ್ಕೆಗೊಳ್ಳುವ ಯುವಕರಿಗೆ ತರಬೇತಿಯನ್ನು ಕಂಪನಿಗಳು ನೀಡಲಿವೆ.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಯುವಕ, ಯುವತಿಯರು ತಮ್ಮ ದಾಖಲಾತಿಗಳ ಜೊತೆ ಆಗಮಿಸಬೇಕು ಎಂದು ಉದ್ಯೋಗದಾತ ಸಂಸ್ಥೆ ಮನವಿ ಮಾಡಿದೆ. ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ಪ್ರವೇಶ ಮತ್ತು ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆ ಇರುತ್ತದೆ

2008ರಿಂದ ಎಂಜಿನಿಯರಿಂಗ್‌ ಪದವಿ ಪಡೆದವರಿಗೆ ಉದ್ಯೋಗ ದೊರೆತಿಲ್ಲ. ಸರಕಾರಗಳು ಈ ಬಗ್ಗೆ ಚಿಂತನೆ ಮಾಡದಿರುವುದರಿಂದ ಸಮಾಜಮುಖಿ ಚಿಂತನೆವುಳ್ಳ ವ್ಯಕ್ತಿಗಳು ಇಂತಹ ಒಳ್ಳೆಯ ಯೋಜನೆ ಹೊಂದುವುದು ಮುಖ್ಯವಾಗುತ್ತದೆ. ದೇಶದಲ್ಲಿ ಉದ್ಯೋಗ ಮಾಡಲು ಯಾವ ಕೊರತೆ ಇಲ್ಲ. ಆದರೆ, ಆಕರ್ಷಕ ಕೆಲಸ ಹಾಗೂ ವೇತನ ಪಡೆಯುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿರುವುದರಿಂದಾಗಿ ಉದ್ಯೋಗದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ನಿರುದ್ಯೋಗದ ಬಗ್ಗೆ ಚರ್ಚೆ ನಡೆಯುತ್ತಿದೆ ಹೊರತು ಪರಿಹರಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯುತ್ತಿಲ್ಲ ಎಂದು ಉದ್ಯೋಗದಾತ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ.ರುಕ್ಮಾಂಗದ ಹೇಳಿದ್ದಾರೆ.

ಅಭ್ಯರ್ಥಿಗಳು ಸಂದರ್ಶನಕ್ಕೆ ಆಗಮಿಸುವಾಗ ತಮ್ಮ ವಿವರ ಹಾಗೂ ಗುರುತಿನ ಚೀಟಿ, ಭಾವಚಿತ್ರ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ತರತಕ್ಕದ್ದು. ಕನಿಷ್ಠ 10 ವಿವರ ಪತ್ರ (ರೆಸ್ಯುಮೆ) ಗಳ ಪ್ರತಿಗಳನ್ನು ತರಬೇಕು.

ಉದ್ಯೋಗ ಮೇಳದ ಸ್ಥಳ: ಪ್ರವಾಸಿ ಮಂದಿರ, ಸೊರಬ

ಮೇಳ ಆರಂಭವಾಗುವ ಸಮಯ: ಬೆಳಗ್ಗೆ 9:00

ವಿದ್ಯಾರ್ಹತೆ

ಯಾವುದೇ ವಿಷಯಗಳಲ್ಲಿ ಪದವಿ ಪಡೆದವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಉದ್ಯೋಗ ಮೇಳಕ್ಕೆ ತಯಾರಾಗಿ ಹೋಗಿ

ಮೊದಲನೆಯದಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಅಲ್ಲಿಗೆ ಹೋಗುವ ಮುನ್ನ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಸಂದರ್ಶನದ ವೇಳೆಗಿಂತ ಸ್ವಲ್ಪ ಮೊದಲೇ ಸ್ಥಳ ತಲುಪಿ. ಸರಳವಾದ ಉಡುಗೆ ಧರಿಸಿ. ಮೇಕಪ್ ಸಹ ಸರಳವಾಗಿ ಗೌರವಯುತವಾಗಿದ್ದು, ಸ್ಮಾರ್ಟ್ ಲುಕ್ ಕೊಡುವಂತೆ ಇರಬೇಕು.

ನಿಮ್ಮ ಸಾಮರ್ಥ್ಯ, ಕೆಲಸದ ಬಗೆಗಿರುವ ಆಸಕ್ತಿ, ಶ್ರಮ, ದುಡಿಮೆ, ಪ್ರಾಮಾಣಿಕತನದ ಬಗ್ಗೆ ಹೇಳಿ. ನೆನಪಿರಲಿ, ಆತ್ಮಪ್ರಶಂಸೆ ಅತಿಯಾಗದಂತೆ ಗಮನ ವಹಿಸಿ. ನಿಮಗಿರುವ ಪರಿಣತಿ, ವಿಶೇಷ ಅರಿವು, ಎಂಥ ಒತ್ತಡಕ್ಕೂ ಒಳಗಾಗದೇ ದುಡಿಯುವ ಮನೋಭಾವ, ಎಲ್ಲದರಲ್ಲೂ ನಿಮಗಿರುವ ಜ್ಞಾನದ ಬಗ್ಗೆ ತಿಳಿಸಿ ಅವರ ಗಮನ ಸೆಳೆಯಿರಿ.

More News  

For Quick Alerts
ALLOW NOTIFICATIONS  
For Daily Alerts

English summary
Mega job fair organized in Soraba taluk, Shivamoga on August 31, 2017. More than 80 company will participate in the job fair.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+