ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ (ಎಂಎಫ್‌ಎಲ್) ನೇಮಕಾತಿ 14 ಮ್ಯಾನೇಜರ್, ಜನರಲ್ ಮ್ಯಾನೇಜರ್,ಜ್ಯೂನಿಯರ್ ಫೈರ್‌ಮೆನ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.
ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಎಂಎಫ್‌ಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿಯನ್ನು ಮೇ 20,2019 ರೊಳಗೆ ಸಲ್ಲಿಸಬಹುದು. ಅರ್ಜಿಯ ಪ್ರಿಂಟೌಟ್ ಅನ್ನು ಕಚೇರಿಯ ವಿಳಾಸಕ್ಕೆ ಮೇ 22,2019 ರೊಳಗೆ ಕಳುಹಿಸಬೇಕಿರುತ್ತದೆ.

| CRITERIA | DETAILS |
| Name Of The Posts | ಮ್ಯಾನೇಜರ್, ಜನರಲ್ ಮ್ಯಾನೇಜರ್,ಜ್ಯೂನಿಯರ್ ಫೈರ್‌ಮೆನ್ |
| Organisation | ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ (ಎಂಎಫ್‌ಎಲ್) |
| Educational Qualification | ಪದವಿ,ಎಂಬಿಎ,ಸಿಎಸ್, ಡಿಪ್ಲೋಮ,ಸ್ನಾತಕೋತ್ತರ ಪದವಿ,ಬಿ.ಇ / ಬಿ.ಟೆಕ್ ಮತ್ತು ಎಸ್‌ಎಸ್‌ಎಲ್‌ಸಿ |
| Job Location | ಚೆನ್ನೈ,ದೆಹಲಿ ,ಭಾರತದೆಲ್ಲೆಡೆ |
| Salary Scale | ಹುದ್ದೆಗಳಿಗನುಸಾರ |
| Application Start Date | April 17, 2019 |
| Application End Date | May 20, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಪದವಿ,ಎಂಬಿಎ, ಡಿಪ್ಲೋಮ,ಸ್ನಾತಕೋತ್ತರ ಪದವಿ,ಬಿ.ಇ / ಬಿ.ಟೆಕ್,ಎಸ್‌ಎಸ್‌ಎಲ್‌ಸಿ ಮತ್ತು ಭಾರತದ ಕಂಪೆನಿ ಸೆಕ್ರೆಟರಿ ಇನ್‌ಸ್ಟಿಟ್ಯೂಟ್‌ನಲ್ಲಿ ಮೆಂಬರ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವೇತನ ಮತ್ತು ವಯೋಮಿತಿಯ ವಿವರ:
| ಹುದ್ದೆಗಳ ಹೆಸರು | ವೇತನದ ವಿವರ | ವಯೋಮಿತಿ |
| ಜನರಲ್ ಮ್ಯಾನೇಜರ್ (ಪ್ಲಾನ್ಟ್) | 51,300/-ರಿಂದ 73,000/- ರೂ | 48 ರಿಂದ 50 |
| ಜನರಲ್ ಮ್ಯಾನೇಜರ್ (ಎಂ ಮತ್ತು ಡಿ) | 51,300/-ರಿಂದ 73,000/- ರೂ | 48 ರಿಂದ 50 |
| ಕಂಪೆನಿ ಸೆಕ್ರೆಟರಿ | 32,900/-ರಿಂದ 58,000/- ರೂ | 45 ರಿಂದ 50 |
| ಸೇಫ್ಟಿ ಆಫೀಸರ್ | 20,600/-ರಿಂದ 46,500/- ರೂ | 35 ರಿಂದ 45 |
| ವೆಲ್‌ಫೇರ್ ಆಫೀಸರ್ | 20,600/-ರಿಂದ 46,500/- ರೂ | 35 ರಿಂದ 45 |
| ಮ್ಯಾನೇಜರ್ (ಇಲೆಕ್ಟ್ರಿಕಲ್) | 32,900/-ರಿಂದ 58,000/- ರೂ | 36 ರಿಂದ 45 |
| ಮ್ಯಾನೇಜರ್ (ಇನ್‌ಸ್ಟ್ರುಮೆಂಟೇಷನ್) | 32,900/-ರಿಂದ 58,000/- ರೂ | 36 ರಿಂದ 45 |
| ಡೆಪ್ಯುಟಿ ಮ್ಯಾನೇಜರ್ (ಸಿವಿಲ್) | 24,900/-ರಿಂದ 50,500/- ರೂ | 30 ರಿಂದ 40 |
| ಡೆಪ್ಯುಟಿ ಮ್ಯಾನೇಜರ್ (ಲೈಯೇಷನ್ ಆಫೀಸರ್) | 24,900/-ರಿಂದ 50,500/- ರೂ | 30 ರಿಂದ 40 |
| ಜ್ಯೂನಿಯರ್ ಮೆಡಿಕಲ್ ಅಸಿಸ್ಟೆಂಟ್ (ಪುರುಷ) | 9,270/- ರೂ | ವಯೋಮಿತಿಯ ನಿರ್ಬಂಧವಿಲ್ಲ |
| ಜ್ಯೂನಿಯರ್ ಫೈರ್‌ಮೆನ್ -ಗ್ರೇಡ್II | 9,020/- ರೂ | ವಯೋಮಿತಿಯ ನಿರ್ಬಂಧವಿಲ್ಲ |
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ ಅಭ್ಯರ್ಥಿಗಳು 1000/-ರೂ, ಜ್ಯೂನಿಯರ್ ಮೆಡಿಕಲ್ ಅಸಿಸ್ಟೆಂಟ್ ಮತ್ತು ಫೈರ್‌ಮೆನ್ ಹುದ್ದೆಗಳಿಗೆ 250/-ರೂ ಮತ್ತು ಉಳಿದ ಹುದ್ದೆಗಳಿಗೆ 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://madrasfert.co.in/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಎಂಎಫ್‌ಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿಯನ್ನು ಮೇ 20,2019 ರೊಳಗೆ ಸಲ್ಲಿಸಬಹುದು. ಅರ್ಜಿಯ ಪ್ರಿಂಟೌಟ್ ಅನ್ನು ಕಚೇರಿಯ ವಿಳಾಸಕ್ಕೆ ಮೇ 22,2019 ರೊಳಗೆ ಕಳುಹಿಸಬೇಕಿರುತ್ತದೆ.
ಕಚೇರಿಯ ವಿಳಾಸ:
ಜನರಲ್ ಮ್ಯಾನೇಜರ್ (ಪರ್ಸನಲ್ ಮತ್ತು ಅಡ್ಮಿನಿಸ್ಟ್ರೇಷನ್),
ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್,
ಮನಾಲಿ,
ಚೆನ್ನೈ -600068
ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











