ದೇಶದ ಗೃಹ ಸಚಿವಾಲಯದ ಅಧೀನದಲ್ಲಿರುವ ಇಂಟಲಿಜೆನ್ಸ್ ಬ್ಯುರೊದಲ್ಲಿ ಆಫೀಸರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು 1,430 ಹುದ್ದೆಗಳಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆಅರ್ಜಿ ಸಲ್ಲಿಸಲು ಸೆಪ್ಟೆಂಬರ್ 2ರ ತನಕ ಕಾಲಾವಕಾಶ ನೀಡಲಾಗಿದೆ.
ಒಟ್ಟು ಹುದ್ದೆಗಳಲ್ಲಿ 130 ಹುದ್ದೆಗಳನ್ನು ಎಕ್ಸ್ ಸವೀರ್‍ಸ್‌ಮನ್ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇನ್ನುಳಿದಂತೆ ಎಸ್‌ಸಿ ಅಭ್ಯರ್ಥಿಗಳಿಗೆ 109, ಎಸ್‌ಟಿ ಅಭ್ಯರ್ಥಿಗಳಿಗೆ 56 ಮತ್ತು ಒಬಿಸಿ ವರ್ಗದವರಿಗೆ 184 ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 951 ಹುದ್ದೆಗಳನ್ನು ಮೀಸಲಿಡಲಾಗಿದೆ.
ವೇತನ ಶ್ರೇಣಿ: ರೂ.9300-34800+4200/-

ವಿದ್ಯಾರ್ಹತೆ
ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ
ಅಭ್ಯರ್ಥಿಗಳ ವಯಸ್ಸು 18ರಿಂದ 27 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 30 ವರ್ಷಗಳಿಗೆ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ 32 ವರ್ಷಗಳಿಗೆ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಪುರುಷ ಅಭ್ಯರ್ಥಿಗಳು ಮಾತ್ರ ಪರೀಕ್ಷಾ ಶುಲ್ಕವಾಗಿ ರೂ. 100/-. ಪಾವತಿಸಬೇಕು.
- ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ.
- ಶುಲ್ಕವನ್ನು ಆನ್‌ಲೈನ್ ಮತ್ತು ಆಫ್ ಲೈನ್‌ನಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ.
ಪರೀಕ್ಷಾ ವಿಧಾನ
ಎರಡು ಹಂತದ ಪರೀಕ್ಷೆ (ಟೈರ್ -1 ಮತ್ತು ಟೈರ್-2) 200 ಅಂಕಗಳಿಗೆ ನಡೆಯಲಿದೆ .
ಟೈರ್ -1 ಮೊದಲ ಹಂತದ ಪರೀಕ್ಷೆಯು 100 ಅಂಕಗಳಿಗೆ ನಡೆಯಲಿದ್ದು, ಜನರಲ್ ಅವೇರ್ನೆಸ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಲಾಜಿಕಲ್/ಅನಾಲಿಟಿಕಲ್ ಎಬಿಲಿಟಿ ಮತ್ತು ಇಂಗ್ಲಿಷ್ ಲಾಂಗ್ವೇಜ್‌ಗೆ ಸಂಬಂಧಪಟ್ಟಂತೆ ತಲಾ 25 ಅಂಕಗಳ ತಲಾ 25 ಪ್ರಶ್ನೆಗಳಿರಲಿವೆ. ಟೈರ್-1 ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕ್ಸ್ ಇರಲಿದ್ದು, ಉತ್ತರ ಗುರುತಿಸಿರದೇ ಇದ್ದಲ್ಲಿ ಅಂಕಗಳನ್ನು ಕಳೆಯಲಾಗುವುದಿಲ್ಲ. . ಈ ಪರೀಕ್ಷೆಯಲ್ಲಿ ಒಂದಿಷ್ಟು ಅರ್ಹತೆ ಪಡೆದವರನ್ನು ಮಾತ್ರ ಟೈರ್-2 ಪರೀಕ್ಷೆಗೆ ಪರಿಗಣಿಸಲಾಗುತ್ತದೆ.
ಇದನ್ನು ಗಮನಿಸಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ 1588 ಹುದ್ದೆಗಳ ನೇಮಕಾತಿ
ಟೈರ್-2 ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿ ನಡೆಯಲಿದೆ. ಎಸ್ಸೆ ಮತ್ತು ಇಂಗ್ಲಿಷ್ ಕಾಂಪ್ರಹೆನ್ಷನ್‌ಗೆ ಸಂಬಂಧಪಟ್ಟಂತೆ 100 ಅಂಕಗಳ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ. ಎರಡೂ ಪತ್ರಿಕೆಗಳಿಗೆ ತಲಾ ಒಂದು ಗಂಟೆ ಉತ್ತರಿಸಲು ಸಮಯ ನೀಡಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರ ಸಂದರ್ಶನ ನಡೆಸಲಾಗುತ್ತದೆ.
ಟೈರ್-1 ಮತ್ತು ಟೈರ್-2 ಎರಡೂ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ರಾಜ್ಯದ ಅಭ್ಯರ್ಥಿಗಳು ಬೆಂಗಳೂರಿನಲ್ಲೇ ಪರೀಕ್ಷೆ ಬರೆಯಬಹುದು.
ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ ವಿಳಾಸ ಗಮನಿಸಿ


Click it and Unblock the Notifications











