ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನಲ್ಲಿ ಖಾಲಿ ಇರುವ 87 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಭಾರತದಾದ್ಯಂತ ಗ್ರಾಮೀಣಾಭಿವೃದ್ಧಿ ಬ್ಯಾಂಕಿಂಗ್ ಸೇವೆ (RDBS)ಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೇ 26,2019 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಈ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
CRITERIA | DETAILS |
Name Of The Posts | ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಎ ಮತ್ತು ಮ್ಯಾನೇಜರ್ ಗ್ರೇಡ್ ಬಿ |
Organisation | ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) |
Educational Qualification | ಪದವಿ ಉತ್ತೀರ್ಣ ಹಾಗೂ ಹುದ್ದೆಗೆ ಸಂಬಂಧಪಟ್ಟಂತೆ ಸ್ನಾತಕೋತ್ತರ ಪದವಿ |
Job Location | ಭಾರತದೆಲ್ಲೆಡೆ |
Salary Scale | ಸಂಸ್ಥೆಯ ನಿಯಮಾನುಸಾರ |
Application Start Date | May 10, 2019 |
Application End Date | May 26, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಅಸಿಸ್ಟೆಂಟ್ ಮ್ಯಾನೇಜರ್ ಗ್ರೂಪ್ ಎ ಮತ್ತು ಮ್ಯಾನೇಜರ್ ಗ್ರೂಪ್ ಬಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಕನಿಷ್ಟ ಪದವಿ ಮತ್ತು ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ / ಸಂಸ್ಥೆಯಿಂದ ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಸಂಸ್ಥೆಯ ನಿಯಮಾನುಸಾರ ವಯೋಮಿತಿಯನ್ನು ಹೊಂದಿರಬೇಕು ಮತ್ತು ಈ ಬಗೆಗೆ ಹೆಚ್ಚು ತಿಳಿಯಲು ಅಧಿಸೂಚನೆಯನ್ನು ಓದಬಹುದು.
ವೇತನದ ವಿವರ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯ ನಿಯಮಾನುಸಾರ ವೇತನವನ್ನು ನೀಡಲಾಗುವುದು.
ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೋರೇಶನ್ 2019 ವಿವಿಧ ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನ ಅಧಿಕೃತ ವೆಬ್ಸೈಟ್ https://www.nabard.org/ ಗೆ ಹೋಗಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಮೇ 26,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಒದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ