ನ್ಯಾಷನಲ್ ಏರೋಸ್ಟೇಸ್ ಲ್ಯಾಬೋರೇಟರೀಸ್ ವಿವಿಧ ಕನ್ಸಲ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ

ನ್ಯಾಷನಲ್ ಏರೋಸ್ಟೇಸ್ ಲ್ಯಾಬೋರೇಟರೀಸ್ ವಿವಿಧ ಕನ್ಸಲ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮಾರ್ಚ್4, 2019 ರೊಳಗೆ ಅರ್ಜಿ ಸಲ್ಲಿಸಬಹುದು.

 ಎನ್ ಎಎಲ್ ನಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

CRITERIA DETAILS
Name Of The Posts ಕನ್ಸಲ್ಟೆಂಟ್
Organisation :ನ್ಯಾಷನಲ್ ಏರೋಸ್ಟೇಸ್ ಲ್ಯಾಬೋರೇಟರೀಸ್
Educational Qualification ಪದವಿ/ಬಿ.ಇ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ
Job Location ಕರ್ನಾಟಕ
Salary Scale 70,000/-ರೂ ವೇತನ
Application Start Date February 2, 2019
Application End Date March 4, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ಬಿ.ಇ ಅಥವಾ ಅದಕ್ಕೆ ಸಮನಾದ ಅರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

ವಿವಿಧ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 65ವರ್ಷ ವಯೋಮಿತಿಯೊಳಗಿನವರಾಗಿಬೇಕು.

ವೇತನದ ವಿವರ:

ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 70,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿದಾರರು ಸಹಿ ಮಾಡಿದ ಅರ್ಜಿಯ ಜೊತೆಗೆ ತಮ್ಮ ಗುರುತಿನ ಚೀಟಿಗಳ ಪ್ರತಿಗಳನ್ನು , ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೂ ದಾಖಲೆಗಳ ದೃಢೀಕೃತ ಪ್ರಗಳ ಜೊತೆಗೆ ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಅಳತೆಯ ಭಾವಚಿತ್ರವನ್ನು ಪೋಸ್ಟ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

ವಿಳಾಸ:

The Controller of Administration National Aerospace Laboratoriews,
P.B.No.1779, HAL Airport Road, Kodihalli,
Bengaluru- 560017

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ : https://www.nal.res.in/en

ನ್ಯಾಷನಲ್ ಏರೋಸ್ಟೇಸ್ ಲ್ಯಾಬೋರೇಟರಿ( ಎನ್ ಎಎಲ್):

ನ್ಯಾಷನಲ್ ಏರೋಸ್ಟೇಸ್ ಲ್ಯಾಬೋರೇಟರಿ (ಎನ್ ಎಎಲ್) ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ (ಸಿಎಸ್ ಐಆರ್) ನ ಘಟಕವಾಗಿದ್ದು, ಭಾರತದ ಅಂತರಿಕ್ಷಯಾನ ಆರ್ & ಡಿ ಪ್ರಯೋಗಾಲಯವಾಗಿದೆ.
ಸಿಎಸ್ ಐಆರ್-ಎನ್ ಎಎಲ್ ಏರೋಸ್ಪೇಸ್ ಮತ್ತು ಸಂಬಂಧಿತ ವಿಷಯಗಳಲ್ಲಿ ಉನ್ನತ ಮಟ್ಟದ ಅಧ್ಯಯನ ಮತ್ತು ಸಂಶೋಧನೆ ನಡೆಸುವ ಹೈಟೆಕ್ ಸಂಸ್ಥೆ ಇದಾಗಿದ್ದು, ವಿಮಾನಗಳ ವಿನ್ಯಾಸ, ಅಂತರಿಕ್ಷ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ನಾಗರಿಕ ವಿಮಾನ ನಿರ್ಮಿಸಲು ಮತ್ತು ಎಲ್ಲಾ ರಾಷ್ಟ್ರೀಯ ವೈಮಾನಿಕ ಕಾರ್ಯಕ್ರಮಗಳನ್ನು ಬೆಂಬಲಿಸುವ ಧ್ಯೇಯೋದ್ದೇಶ ಹೊಂದಿದೆ.
ಸಿಎಸ್ ಐಆರ್-ಎನ್ ಎಎಲ್ ಅತ್ಯುತ್ತಮ ಸೌಲಭ್ಯವನ್ನು ಹೊಂದಿದೆ ಮತ್ತು ಇಲ್ಲಿನ ಸೌಲಭ್ಯಗಳು ಅನೇಕ ರಾಷ್ಟ್ರೀಯ ಸೌಲಭ್ಯಗಳ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದೆ. ಇದರ ಜೊತೆಗೆ ಆರ್& ಡಿ ಸಾಮರ್ಥ್ಯ ಮತ್ತು ಯಶಸ್ಸು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹ. ದೇಶದ ವೈಮಾನಿಕ ಮತ್ತು ಅಂತರಿಕ್ಷ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಬೆಳವಣಿಗೆಗಳು ಮತ್ತು ಅತ್ಯುನ್ನತ ಮಟ್ಟದ ಸಾಧನೆಗೆ ಸಿಎಸ್ ಐಆರ್ ಎನ್ ಎಎಲ್ ನೆರವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
National aerospace laboratories notification has been released on official website for the recruitment of various consultant posts. Interested candidates can send applications before 4th march 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X