ಎನ್‌ಹೆಚ್‌ಎಂ ನೇಮಕಾತಿ...ಫೆ.19ಕ್ಕೆ ನೇರಸಂದರ್ಶನ

ಬೆಂಗಳೂರು ನಗರ ಜಿಲ್ಲೆಯಲ್ಲಿ 2019-20ನೇ ಸಾಲಿಗೆ ಎನ್‌ಹೆಚ್‌ಎಂ ಯೋಜನೆಯ ಪೌಷ್ಥಿಕ ಮತ್ತು ಸಮಗ್ರ ಹಾಲುಣಿಸುವ ನಿರ್ವಹಣಾ ಕೇಂದ್ರಗಳಿಗೆ 8 ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅರ್ಹ ಅಭ್ಯರ್ಥಿಗಳು ಫೆಬ್ರವರಿ 19,2020 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

NHM: 8 ಹುದ್ದೆಗಳಿಗೆ ನೇರ ಸಂದರ್ಶನ

CRITERIA DETAILS
Name Of The Posts ಸಿ.ಎಲ್‌.ಎಂ.ಸಿ ಸಹಾಯಕ ಸಿಬ್ಬಂದಿ, ಸಿ.ಎಸ್‌.ಎಂ.ಸಿ ಪ್ರಯೋಗಶಾಲಾ ತಂತ್ರತ್ಜರು ಮತ್ತು ಡಯಟ್ ಕಾನ್ಸಿಲ್
Organisation ರಾಷ್ಟ್ರೀಯ ಆರೋಗ್ಯ ಅಭಿಯಾನ
Educational Qualification ಬಿ.ಎಸ್ಸಿ/ಜಿಎನ್‌ಎಂ, ಡಿಎಂಎಲ್‌ಟಿ, ಬಿ.ಎಸ್ಸಿ/ ಬಿ.ಎ ಪದವಿ
Job Location ಬೆಂಗಳೂರು (ಕರ್ನಾಟಕ)
Salary Scale ಸಿ.ಎಲ್‌.ಎಂ.ಸಿ ಸಹಾಯಕ ಸಿಬ್ಬಂದಿ-ತಿಂಗಳಿಗೆ 11,500/-ರೂ, ಸಿ.ಎಸ್‌.ಎಂ.ಸಿ ಪ್ರಯೋಗಶಾಲಾ ತಂತ್ರತ್ಜರು-ತಿಂಗಳಿಗೆ 14,000/-ರೂ ಮತ್ತು ಡಯಟ್ ಕಾನ್ಸಿಲ್-ತಿಂಗಳಿಗೆ 14,000/-ರೂ
Application Start Date February 12, 2020
Application End Date February 19, 2020

ವಿದ್ಯಾರ್ಹತೆ:

ಸಿ.ಎಲ್‌.ಎಂ.ಸಿ ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಮಾನ್ಯೆತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್‌ಸಿ/ಜೆಎನ್‌ಎಂ ಪದವಿ ಹೊಂದಿರಬೇಕು ಮತ್ತು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಎಎನ್‌ಎಂ ತರಬೇತಿ ಪಡೆದಿರಬೇಕು ಹಾಗೂ ಕೆಎನ್‌ಸಿ ನೊಂದಣಿ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಸಿ.ಎಸ್‌.ಎಂ.ಸಿ ಪ್ರಯೋಗಶಾಲಾ ತಂತ್ರತ್ಜರು ಹುದ್ದೆಗಳಿಗೆ ಡಿಎಂಎಲ್‌ಟಿ ಪದವಿಯೊಂದಿಗೆ ಕಡ್ಡಾಯವಾಗಿ
ಮತ್ತು ಡಯಟ್ ಕಾನ್ಸಿಲ್ ಹುದ್ದೆಗಳಿಗೆ ಬಿ.ಎಸ್ಸಿ ಇನ್ ನ್ಯೂಟ್ರೀಶಿಯನ್/ಬಿಎ ಇನ್ ನ್ಯೂಟ್ರೀಶಿಯನ್/ಹೋಂ ಸೈನ್ಸ್ ಪದವಿ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ:

ಎನ್‌ಹೆಚ್‌ಎಂ ನೇಮಕಾತಿಯ ವಿವಿಧ ಹುದ್ದೆಗಳಿಗೆ ನಡೆಸಲಾಗುವ ನೇರಸಂದರ್ಶನಕ್ಕೆ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಹಾಜರಾಗಬಹುದು.

ವೇತನದ ವಿವರ:

ಸಿ.ಎಲ್‌.ಎಂ.ಸಿ ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ತಿಂಗಳಿಗೆ 11,500/-ರೂ, ಸಿ.ಎಸ್‌.ಎಂ.ಸಿ ಪ್ರಯೋಗಶಾಲಾ ತಂತ್ರತ್ಜರು ಹುದ್ದೆಗಳಿಗೆ ತಿಂಗಳಿಗೆ 14,000/-ರೂ ಮತ್ತು ಡಯಟ್ ಕಾನ್ಸಿಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 14,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಸಂದರ್ಶನದ ವಿವರ:

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಸಂದರ್ಶನ ದಿನಾಂಕ: 19-02-2020

ಸಂದರ್ಶನ ಸಮಯ: ಬೆಳಿಗ್ಗೆ 11 ಘಂಟೆಗೆ

ಸಂದರ್ಶನ ನಡೆಯುವ ಸ್ಥಳ:

ಜಿಲ್ಲಾ ಆರ್‌.ಸಿ.ಹೆಚ್ ಅಧಿಕಾರಿಗಳ ಕಛೇರಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ,
ಹಳೇ ಟಿ.ಬಿ. ಆಸ್ಪತ್ರೆ,
ಇಂದಿರಾನಗರ,
ಬೆಂಗಳೂರು-560038

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

NHM: 8 ಹುದ್ದೆಗಳಿಗೆ ನೇರ ಸಂದರ್ಶನ

More News  

For Quick Alerts
ALLOW NOTIFICATIONS  
For Daily Alerts

English summary
NHM recruitment 2020 notification has been released on official website for the recruitment of 8 support staff, technician and counselor posts. Interested candidates can attend walk in interview on 19th February 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+