ಎನ್ಐಎ ನೇಮಕಾತಿ 2019: ಸ್ಫೋಟಕ, ಫೋರೆನ್ಸಿಕ್ಸ್ ಮತ್ತು ಛಾಯಾಗ್ರಾಹಕ ತಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ತನಿಖಾ ಸಂಸ್ಥೆಯು ಸ್ಫೋಟಕ ಪರಿಣಿತ, ಜೀವಶಾಸ್ತ್ರ ತಜ್ಞ, ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್, ಟೆಕ್ನಿಕಲ್ ಫೋರೆನ್ಸಿಕ್ ಸೈಕಾಲಜಿಸ್ಟ್, ಕ್ರೈಮ್ ಸೀನ್ ಅಸಿಸ್ಟೆಂಟ್ ಮತ್ತು ಛಾಯಾಗ್ರಾಹಕ ಸೇರಿದಂತೆ 18 ವಿವಿಧ ಸ್ಥಾನಗಳನ್ನು ನಿಯೋಜಿಸಲು ಭಾರತೀಯ ನಾಗರೀಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಯನ್ನು ಮಾರ್ಚ್ 7.2019 ರೊಳಗೆ ಸಲ್ಲಿಸಬೇಕು.

ಅರ್ಜಿಯನ್ನು ಅಧಿಸೂಚನೆಯಲ್ಲಿ ತಿಳಿಸಿರುವಂತೆಯೇ ಆಫ್ ಲೈನ್ ಮೂಲಕ ಸಲ್ಲಿಸಬೇಕು.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೆಹಲಿ,ಲಕ್ನೋ,ಗುವಾಹಟಿ,ಕೊಲ್ಕತ್ತ,ಹೈದರಾಬಾದ್,ಮುಂಬೈ, ಕೊಚ್ಚಿ, ರಾಯ್ಪುರ್ ಮತ್ತು ಜಮ್ಮುವಿನಲ್ಲಿ ಕೆಲಸ ನಿರ್ವಹಿಸಬೇಕಿರುತ್ತದೆ.

ಎನ್ಐಎ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

 

CRITERIA DETAILS
Name Of The Posts ಸೈನ್ಟಿಸ್ಟ್ ಸ್ಥಾನ/ಹುದ್ದೆಗಳು
Organisation ರಾಷ್ಟ್ರೀಯ ತನಿಖಾ ಸಂಸ್ಥೆ
Educational Qualification ಬಿಇ/ಬಿ.ಟೆಕ್/ಎಂ.ಎಸ್ಸಿ/ಪಿಹೆಚ್ ಡಿ
Experience ಅಧಿಸೂಚನೆಯಲ್ಲಿರುವಂತೆ ಹುದ್ದೆಗಳಿಗೆ ಸಂಬಂಧಪಟ್ಟಂತೆ
Skills Required ಅಧಿಸೂಚನೆಯಲ್ಲಿ ತಿಳಿಸಿರುವಂತೆ
Job Location ಭಾರತದೆಲ್ಲೆಡೆ
Salary Scale ತಿಂಗಳಿಗೆ ರೂ 35,400/- 1,77,500 (ಸಂಸ್ಥೆಯಿಂದ)
Industry ತನಿಖೆ
Application Start Date January 7, 2019
Application End Date March 7, 2019

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಸ್ಫೋಟಕ ಪರಿಣಿತ03
ಜೀವಶಾಸ್ತ್ರ ತಜ್ಞ01
ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್04
ಟೆಕ್ನಿಕಲ್ ಫೋರೆನ್ಸಿಕ್ ಸೈಕಾಲಜಿಸ್ಟ್

03
ಕ್ರೈಮ್ ಸೀನ್ ಅಸಿಸ್ಟೆಂಟ್06
ಛಾಯಾಗ್ರಾಹಕ01
ಒಟ್ಟು18

ವಿದ್ಯಾರ್ಹತೆ ಮತ್ತು ಅನುಭವ:

ಸ್ಫೋಟಕ ಪರಿಣಿತ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಸಾಯನಶಾಸ್ತ್ರದಲ್ಲಿ ಅಥವಾ ಪೋರೆನ್ಸಿಕ್ ಸೈನ್ಸ್ ನಲ್ಲಿ ಎಂ.ಎಸ್ಸಿಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾನಿಲಯದಿಂದ ಉತ್ತೀರ್ಣರಾಗಿರಬೇಕು ಮತ್ತು ಸ್ಫೋಟಕಗಳು ಮತ್ತು ಅಗ್ನಿಶಾಮಕಗಳ ಪರೀಕ್ಷೆಯಲ್ಲಿ 5 ವರ್ಷಗಳ ಅನುಭವವಿರಬೇಕು. ರಸಾಯನಶಾಸ್ತ್ರದಲ್ಲಿ ಪಿಹೆಚ್ ಡಿ ಮಾಡಿದ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗಿದೆ.

ಜೀವಶಾಸ್ತ್ರ ತಜ್ಞ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಯೋಲಜಿ, ಝೂಲಾಜಿ,ಮೈಕ್ರೋಬಯಾಲಜಿ, ಮಾನವಶಾಸ್ತ್ರದಲ್ಲಿ ಎಂಎಸ್ಸಿ ಅಥವಾ ಎಂ.ಎಸ್ಸಿ ಯನ್ನು ಪೋರೆನ್ಸಿಕ್ ಸೈನ್ಸ್ ನಲ್ಲಿ ಜೀವಶಾಸ್ತ್ರ ಅಥವಾ ಪ್ರಾಣಿಶಾಸ್ತ್ರದಲ್ಲಿ ಮಾಡಿರಬೇಕು. ಅಲ್ಲದೇ ಜೀವಶಾಸ್ತ್ರ ಅಥವಾ ಪ್ರಾಣಿಶಾಸ್ತ್ರವನ್ನು ಬಿಎಸ್ಸಿಯಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಲ್ಲಿ ಓದಿ ಉತ್ತೀರ್ಣರಾಗಿರಬೇಕು ಮತ್ತು ಜೈವಿಕ ಪ್ರಯೋಗಾಲಯದಲ್ಲಿ 3 ವರ್ಷಗಳ ಅನುಭವವನ್ನು ಹೊಂದಿರಲೇಬೇಕು

 

ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಟೆಕ್ನಾಲಜಿಯಲ್ಲಿ ಬಿಇ/ಬಿ.ಟೆಕ್ ಮಾಡಿರಬೇಕು ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫರ್ಮೇಶನ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. ಡಿಜಿಟಲ್ ತನಿಖೆ/ಕಂಪ್ಯೂಟರ್ ಫೋರೆನ್ಸಿಕ್ಸ್ ಮತ್ತು ಇತತೆ ವಿಷಯಗಳಲ್ಲಿ 3 ವರ್ಷಗಳ ಅನುಭವವನ್ನು ಹೊಂದಿರಬೇಕು.

ಟೆಕ್ನಿಕಲ್ ಫೋರೆನ್ಸಿಕ್ ಸೈಕಾಲಜಿಸ್ಟ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ಲಿಮಿನಾಲಜಿ ಅಥವಾ ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು ಮತ್ತು ಕ್ಲಿನಿಕಲ್ ಸೈಕಾಲಜಿ ಅಭ್ಯಾಸದಲ್ಲಿ 3 ವರ್ಷಗಳ ಅನುಭವ ಹೊಂದಿರಲೇಬೇಕು.

ಕ್ರೈಮ್ ಸೀನ್ ಅಸಿಸ್ಟೆಂಟ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿ-ತಂತ್ರಜ್ಞಾನ, ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ, ಭೌತಶಾಸ್ತ್ರ ಅಥವಾ ಫೋರೆನ್ಸಿಕ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಪಡೆದಿರಬೇಕು ಮತ್ತು ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ ಸ್ವಾಯತ್ತ ಸಂಸ್ಥೆಗಳು/ UTಗಳಲ್ಲಿ/ ಪಿಎಸ್ ಯು/ವಿಶ್ವವಿದ್ಯಾನಿಲಯಗಳು ಅಥವಾ ಯಾವುದೇ ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಗಳಲ್ಲಿ 3 ವರ್ಷಗಳ ಅನುಭವವನ್ನು ಹೊಂದಿರಲೇಬೇಕು.

ಛಾಯಾಗ್ರಾಹಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀದರರಾಗಿರಲೇಬೇಕು ಮತ್ತು ಛಾಯಾಗ್ರಹಣದಲ್ಲಿ ಡಿಪ್ಲೊಮ ವನ್ನು ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಮಾಡಿರಬೇಕು ಮತ್ತು ಛಾಯಾಗ್ರಹಣದ ವಿವಿಧ ಶಾಖೆಗಳಲ್ಲಿ 3 ವರ್ಷಗಳ ಅನುಭವವನ್ನು ಪಡೆದಿರಬೇಕು.

ವೇತನದ ವಿವರ:

ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವು ಸಂಸ್ಥೆಯಿಂದ ತಿಂಗಳಿಗೆ 35,400/- ರಿಂದ 1,77,500/-ರೂಗಳ ವರೆಗೆ ನೀಡಲಾಗುತ್ತದೆ.

ಅಭ್ಯರ್ಥಿಗಳು ಅರ್ಜಿಯನ್ನು ಸೂಚನೆಯಲ್ಲಿ ತಿಳಿಸಿರುವ ಮಾದರಿಯಲ್ಲಿಯೇ ಭರ್ತಿ ಮಾಡುವುದರ ಜೊತೆಗೆ ಅಗತ್ಯ ದಾಖಲೆಗಳು/ಪ್ರಮಾಣಪತ್ರಗಳನ್ನು ಪೋಸ್ಟ್ ಮೂಲಕ ಮಾರ್ಚ್ 7.2019 ರೊಳಗೆ ಕಳುಹಿಸಬೇಕು.

ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು " The SP (Admin), NIA HQ, Opp CGO Complex,Lodhi Road, New Delhi-110003" ಇಲ್ಲಿಗೆ ಕಳುಹಿಸಿ.

ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The National Investigation Agency (NIA), India's premier investigation agency with the Govt. of India has invited applications from Indian nationals for filling 18 vacancies on deputation basis to various positions comprising Explosive Expert, Biology Expert, Cyber Forensic Examiner, Technical Forensic Psychologist, Crime Scene Assistant and Photographer. The application process towards the same will start from 07 January 2019 and will end on 07 March 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more