ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ (ನಿಮ್ಹಾನ್ಸ್) ನಲ್ಲಿ ಖಾಲಿ ಇರುವ 66 ನರ್ಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು ನಿಮ್ಹಾನ್ಸ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ನವೆಂಬರ್ 25, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳ ವಿವರ
ಒಟ್ಟು ಹುದ್ದೆ: 66
ಹುದ್ದೆ: Post Registered Internee Nurse
ಹುದ್ದೆ ಎಲ್ಲಿ?: ಬೆಂಗಳೂರು ನಿಮ್ಹಾನ್ಸ್.
ವೇತನ ಶ್ರೇಣಿ: ರೂ.12000/- ತಿಂಗಳಿಗೆ.
ವಿದ್ಯಾರ್ಹತೆ: ನರ್ಸಿಂಗ್ ನಲ್ಲಿ ಬಿ.ಎಸ್ಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ: 21ರಿಂದ 30 ವರ್ಷ.
ಇಂಟರ್ನ್ಶಿಪ್ ಅವಧಿ: 6 ತಿಂಗಳಿಂದ ಒಂದು ವರ್ಷ
ಆಯ್ಕೆ ವಿಧಾನ: ಮೆರಿಟ್ ಆಧಾರದ ಮೇಲೆ ಈ ನರ್ಸ್ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಲು ಸೂಚಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯ ಜೊತೆಯ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಕಚೇರಿ ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಕಚೇರಿ ವಿಳಾಸ
The Registrar,
NIMHANS, P.B No.2900, Hosur Road, Bengaluru- 560029
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-11-2017
ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದಲ್ಲಿ ಇಲ್ಲಿ ಕ್ಲಿಕ್ಕಿಸಿ.


Click it and Unblock the Notifications











