NIT Karnataka Recruitment 2021 : 36 ಟೆಕ್ನಿಕಲ್ ಅಸಿಸ್ಟ್ಡೆಂಟ್ ಮತ್ತು ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ಐಟಿ ಕರ್ನಾಟಕ), ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ 36 ತಾಂತ್ರಿಕ ಸಹಾಯಕ/ಕಿರಿಯ ಎಂಜಿನಿಯರ್/SAS ಸಹಾಯಕ ಮತ್ತು ಅಧೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ​​ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ nitk.ac.in ನಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಆನ್‌ಲೈನ್ ನೋಂದಣಿ ಮತ್ತು ಅರ್ಜಿ ಪ್ರಕ್ರಿಯೆಯು ಆಗಸ್ಟ್ 25, 2021 ರಿಂದ ಸೆಪ್ಟೆಂಬರ್ 24, 2021ರ ಸಂಜೆ 5:30 ರವರೆಗೆ ನಡೆಯಲಿದೆ.

ಎನ್‌ಐಟಿ ಕರ್ನಾಟಕದಲ್ಲಿ 36 ಹುದ್ದೆಗಳ ನೇಮಕಾತಿ

ಎನ್‌ಐಟಿ ಕರ್ನಾಟಕ ನೇಮಕಾತಿ 2021 ವಿದ್ಯಾರ್ಹತೆ:

ಎನ್‌ಐಟಿ ಕರ್ನಾಟಕ ನೇಮಕಾತಿ 2021 ಮೂಲಕ ಎನ್‌ಐಟಿ ಕರ್ನಾಟಕದಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್/ಎಂಸಿಎ/ಡಿಪ್ಲೋಮಾ ವಿದ್ಯಾರ್ಹತೆಯನ್ನು ಸಿವಿಲ್, ಎಲೆಕ್ಟ್ರಿಕಲ್, ಇತ್ಯಾದಿ ಎಂಜಿನಿಯರಿಂಗ್ ವಿಭಾಗಗಳಲ್ಲಿ ಹೊಂದಿರಬೇಕು. ವಿಜ್ಞಾನದಲ್ಲಿ ಪದವಿ/ಸ್ನಾತಕೋತ್ತರ ಪದವಿ; ದೈಹಿಕ ಶಿಕ್ಷಣದಲ್ಲಿ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಎನ್‌ಐಟಿ ಕರ್ನಾಟಕ ನೇಮಕಾತಿ 2021 ವಯೋಮಿತಿ:

ಎನ್‌ಐಟಿ ಕರ್ನಾಟಕ ನೇಮಕಾತಿ 2021 ಮೂಲಕ ತಾಂತ್ರಿಕ ಸಹಾಯಕ/ಕಿರಿಯ ಎಂಜಿನಿಯರ್/SAS ಸಹಾಯಕ ಮತ್ತು ಅಧೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಗರಿಷ್ಟ 30 ವರ್ಷ ವಯೋಮಿತಿಯೊಳಗಿರಬೇಕು. ಎನ್‌ಐಟಿ ಕರ್ನಾಟಕ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಎನ್‌ಐಟಿ ಕರ್ನಾಟಕ ನೇಮಕಾತಿ 2021 ವೇತನ:

ಎನ್‌ಐಟಿ ಕರ್ನಾಟಕ ನೇಮಕಾತಿ 2021 ಮೂಲಕ ತಾಂತ್ರಿಕ ಸಹಾಯಕ/ಕಿರಿಯ ಎಂಜಿನಿಯರ್/SAS ಸಹಾಯಕ ಮತ್ತು ಅಧೀಕ್ಷಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಎನ್‌ಐಟಿ ಕರ್ನಾಟಕ ನೇಮಕಾತಿ 2021 ಅರ್ಜಿ ಶುಲ್ಕ:

ಎನ್‌ಐಟಿ ಕರ್ನಾಟಕ ನೇಮಕಾತಿ 2021 ಮೂಲಕ ತಾಂತ್ರಿಕ ಸಹಾಯಕ/ಕಿರಿಯ ಎಂಜಿನಿಯರ್/SAS ಸಹಾಯಕ ಮತ್ತು ಅಧೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000/-ರೂ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಅಂಗವಿಕಲ/ಪ.ಜಾ/ಪ.ಪಂ/ಮಹಿಳೆ/ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಎನ್‌ಐಟಿ ಕರ್ನಾಟಕ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:

ಎನ್‌ಐಟಿ ಕರ್ನಾಟಕ ನೇಮಕಾತಿ 2021 ಮೂಲಕ ತಾಂತ್ರಿಕ ಸಹಾಯಕ/ಕಿರಿಯ ಎಂಜಿನಿಯರ್/SAS ಸಹಾಯಕ ಮತ್ತು ಅಧೀಕ್ಷಕರ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಅರ್ಜಿದಾರರ ಕಿರುಪಟ್ಟಿಯನ್ನು ಮಾಡಲಾಗುವುದು ತದನಂತರ ಸಂದರ್ಶನ ಮತ್ತು ದಾಖಲೆ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಎನ್‌ಐಟಿ ಕರ್ನಾಟಕ ನೇಮಕಾತಿ 2021 ಅರ್ಜಿ ಸಲ್ಲಿಕೆ :

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.nitk.ac.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಸೆಪ್ಟೆಂಬರ್ 24,2021ರ ಸಂಜೆ 5:30ರೊಲಗೆ ಅರ್ಜಿಯನ್ನು ಹಾಕಬಹುದು.

ಆ್‌ಲೈನ್ ನೋಂದಣಿಯ ನಂತರ ಅಭ್ಯರ್ಥಿಗಳು ಅರ್ಜಿಯ ಹಾರ್ಡ್‌ ಕಾಪಿಯನ್ನು ಕಚೇರಿಗೆ ಸೆಪ್ಟೆಂಬರ್ 28, 2021 ರ ಸಂಜೆ 5: 30 ರೊಳಗೆ ಕಳುಹಿಸಬೇಕು.

ಕಚೇರಿ ವಿಳಾಸ:
The Registrar,
National Institute Of Technology Karnataka, Surathkal,
Mangaluru-575 025,
Karnataka, India.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
NIT karnataka recruitment 2021 notification has been released for 36 technical assistant and superintendent posts. Interested candidates can apply before September 24.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+