ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ 24 ಅಸಿಸ್ಟೆಂಟ್ ಗ್ರೇಡ್- 1ಮತ್ತು ಸ್ಟೆನೋ ಗ್ರೇಡ್-1ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದುಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಆಸಕ್ತರು ಎನ್ ಪಿಸಿಐಎಲ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಿಕೊಂಡು ನಂತರ ಅರ್ಜಿಯನ್ನು ಆನ್ ಲೈನ್ ನಲ್ಲಿ ಫೆಬ್ರವರಿ 19,2019 ರೊಳಗೆ ಸಲ್ಲಿಸಬಹುದು.

| CRITERIA | DETAILS |
| Name Of The Posts | ಅಸಿಸ್ಟೆಂಟ್ ಗ್ರೇಡ್- 1 ಮತ್ತು ಸ್ಟೆನೋ ಗ್ರೇಡ್-1 |
| Organisation | ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ |
| Educational Qualification | ಪದವಿ,ಹೆಚ್ ಎಸ್ ಸಿ,ಡಿಪ್ಲೋಮಾ,ಬಿಎಸ್ಸಿ,ಎಸ್ ಎಸ್ ಸಿ |
| Job Location | ಕರ್ನಾಟಕ |
| Salary Scale | ಅಸಿಸ್ಟೆಂಟ್ ಗ್ರೇಡ್ -1 (ಹೆಚ್ ಆರ್)ಮತ್ತು ಸ್ಟೆನೋ ಗ್ರೇಡ್-1 ತಿಂಗಳಿಗೆ - 25,500/- ರೂ, ಸ್ಟೈಪೆಂಡಿಯರಿ ಟ್ರೈನಿ- ಡೆಂಟಲ್ ಟೆಕ್ನಿಶಿಯನ್ ತಿಂಗಳಿಗೆ -29,299/- ರೂ ,ಸೈಂಟಿಫಿಕ್ ಅಸಿಸ್ಟೆಂಟ್/ಬಿ,ಪ್ರವರ್ಗ-1 ಸ್ಟೈಪೆಂಡಿಯರಿ ಟ್ರೈನಿ ಮತ್ತು ಸಬ್ ಆಫೀಸರ್- B ತಿಂಗಳಿಗೆ -35,400/- ರೂ |
| Application Start Date | February 1, 2019 |
| Application End Date | February 19, 2019 |
ಖಾಲಿ ಹುದ್ದೆ ಮತ್ತು ವಿದ್ಯಾರ್ಹತೆಯ ವಿವರ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ | ವಿದ್ಯಾರ್ಹತೆ |
| ಅಸಿಸ್ಟೆಂಟ್ ಗ್ರೇಡ್ -1(ಹೆಚ್ ಆರ್) | 13 | ಪದವಿ |
| ಸ್ಟೆನೋ ಗ್ರೇಡ್-1 | 7 | ಪದವಿ |
| ಸ್ಟೈಪೆಂಡಿಯರಿ ಟ್ರೈನಿ- ಡೆಂಟಲ್ ಟೆಕ್ನಿಶಿಯನ್ | 1 | ಹೆಚ್ ಎಸ್ ಸಿ |
| ಸೈಂಟಿಫಿಕ್ ಅಸಿಸ್ಟೆಂಟ್/B | 1 | ಡಿಪ್ಲೋಮಾ |
| ಪ್ರವರ್ಗ-1 ಸ್ಟೈಪೆಂಡಿಯರಿ ಟ್ರೈನಿ | 1 | ಬಿಎಸ್ಸಿ |
| ಸಬ್ ಆಫೀಸರ್-B | 1 | ಎಸ್ ಎಸ್ ಸಿ |
ವಯೋಮಿತಿ:
ಈ ಹುದ್ದೆಗಳಿಗೆ ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.
ವೇತನದ ವಿವರ:
ಅಸಿಸ್ಟೆಂಟ್ ಗ್ರೇಡ್ -1 (ಹೆಚ್ ಆರ್)ಮತ್ತು ಸ್ಟೆನೋ ಗ್ರೇಡ್-1 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,500/- ರೂ ಮತ್ತು ಸ್ಟೈಪೆಂಡಿಯರಿ ಟ್ರೈನಿ- ಡೆಂಟಲ್ ಟೆಕ್ನಿಶಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 29,299/- ರೂ ವೇತನ,ಸೈಂಟಿಫಿಕ್ ಅಸಿಸ್ಟೆಂಟ್/ಬಿ,ಪ್ರವರ್ಗ-1 ಸ್ಟೈಪೆಂಡಿಯರಿ ಟ್ರೈನಿ ಮತ್ತು ಸಬ್ ಆಫೀಸರ್-ಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,400/- ರೂ ವೇತನವನ್ನು ನೀಡಲಾಗುವುದು.
ಅರ್ಜಿಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಎನ್ ಪಿಸಿಐಎಸ್ ನ ಅಧಿಕೃತ ವೆಬ್ ಸೈಟ್
http://www.npcil.co.in./Content/Hindi/index.aspx ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











