NPCIL Recruitment 2021: 200 ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) 200 ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾರ್ಚ್ 9,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಮುಂದೆ ಓದಿ.

ಎನ್‌ಪಿಸಿಐಎಲ್ ನಲ್ಲಿ ಉದ್ಯೋಗಾವಕಾಶ...ಆಸಕ್ತರು ಮಾ.9ರೊಳಗೆ ಅರ್ಜಿ ಹಾಕಿ

ವಿದ್ಯಾರ್ಹತೆ:

ಬಿ.ಎಸ್ಸಿ/ಬಿ.ಇ/ಬಿ.ಟೆಕ್, ಎಂ.ಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಏಪ್ರಿಲ್ 2,2020ರ ಅನ್ವಯ ಗರಿಷ್ಟ 41 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಓಬಿಸಿ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವ‍ರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ:

ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 55,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪ.ಜಾ/ಪ.ಪಂ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://npcilcareers.co.in/MainSite/default.aspx ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಮಾರ್ಚ್ 9,2021ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
NPCIL recruitment 2021 notification has been released for 200 executive trainee posts. Interested candidates can apply through online before march 9.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+