NTPC Recruitment 2020: 70 ಡಿಪ್ಲೋಮಾ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಎನ್‌ಟಿಪಿಸಿ) 70 ಡಿಪ್ಲೋಮಾ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 12,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

 

ಎನ್‌ಟಿಪಿಸಿ ಯಲ್ಲಿ ಉದ್ಯೋಗಾವಕಾಶ...ಡಿ.12ರೊಳಗೆ ಅರ್ಜಿ ಹಾಕಿ

ವಿದ್ಯಾರ್ಹತೆ:

ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ:

ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವೇತನ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 24,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಸಾಮಾನ್ಯ/ಓಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 300/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಪ.ಜಾ/ಪ.ಪಂ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಕೆ:

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.ntpccareers.net/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಡಿಸೆಂಬರ್ 12,2020ರ ಮಧ್ಯರಾತ್ರಿಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
NTPC recruitment 2020 notification released for 70 diploma trainee posts. Interested candidates can apply through online before December 12.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X