ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿ 2019: 127 ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿ 127 ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಆರ್ಜಿಯನ್ನು ಏಪ್ರಿಲ್ 4,2019 ರೊಳಗೆ ಸಲ್ಲಿಸಬಹುದು.

CRITERIA DETAILS
Name Of The Posts ಟೆಕ್ನಿಕಲ್ ಅಸಿಸ್ಟೆಂಟ್
Organisation ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ
Educational Qualification ಪದವಿ
Job Location ಭಾರತದೆಲ್ಲೆಡೆ
Salary Scale 35,400/- ರಿಂದ 1,12,400/-ರೂ
Application Start Date March 15, 2019
Application End Date April 4, 2019

ಎನ್‌ಟಿಆರ್‌ಓ ನಲ್ಲಿ ಉದ್ಯೋಗಾವಕಾಶ

ವಿದ್ಯಾರ್ಹತೆ:

ಇಲೆಕ್ಟ್ರಾನಿಕ್ಸ್ ವಿಭಾಗ /ಸ್ಟ್ರೀಮ್: ಅಭ್ಯರ್ಥಿಗಳು ಪದವಿಯನ್ನು ಸೈನ್ಸ್ ನೊಂದಿಗೆ ಗಣಿತ ಅಥವಾ ಭೌತಶಾಸ್ತ್ರವನ್ನು ಪ್ರಮುಖ ವಿಷಯವನ್ನಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರಬೇಕು.
ಅಥವಾ
3 ವರ್ಷದ ಡಿಪ್ಲೋಮ ಇನ್ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ಇನ್ ಇಲೆಕ್ಟ್ರಾನಿಕ್ಸ್ / ಕಮ್ಯುನಿಕೇಶನ್ / ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಟೆಲಿಕಮ್ಯುನಿಕೇಶನ್ / ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಅನ್ನು ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಅಧ್ಯಯನ ನಡೆಸಿ ಉತ್ತೀರ್ಣರಾಗಿರಬೇಕು.
ಅಥವಾ
ಡಿಪ್ಲೋಮಾ / ಟೆಕ್ನಿಕಲ್ ಪ್ರೊಫಿಷಿಯನ್ಸಿ ಸರ್ಟಿಫಿಕೇಟ್ ಅನ್ನು ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ಇನ್ ಇಲೆಕ್ಟ್ರಾನಿಕ್ಸ್ / ಕಮ್ಯುನಿಕೇಶನ್ /ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ /ಟೆಲಿಕಮ್ಯುನಿಕೇಶನ್ /ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ನಲ್ಲಿ ಹೊಂದಿರಬೇಕು ಮತ್ತು ಕಂಪ್ಯೂಟರ್ ಬಳಕೆಯ ಜ್ಞಾನವನ್ನು ಹೊಂದಿರಬೇಕು.

ಕಂಪ್ಯೂಟರ್ ಸೈನ್ಸ್ ವಿಭಾಗ /ಸ್ಟ್ರೀಮ್: ಅಭ್ಯರ್ಥಿಗಳು ಪದವಿಯನ್ನು ಸೈನ್ಸ್ ಜೊತೆಗೆ ಗಣಿತ ಅಥವಾ ಭೌತಶಾಸ್ತ್ರ ವನ್ನು ಪ್ರಮುಖ ವಿಷಯವನ್ನಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರಬೇಕು.
ಅಥವಾ
ಪದವಿಯನ್ನು ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಮಾನ್ಯತೆ ಪಡೆದ ಇನ್‌ಸ್ಟಿಟ್ಯೂಟ್‌ನಲ್ಲಿ ಮಾಡಿರಬೇಕು; ಅಥವಾ ಇಂಜಿನಿಯರಿಂಗ್ ನಲ್ಲಿ3 ವರ್ಷದ ಡಿಪ್ಲೋಮಾ ಅಥವಾ ಟೆಕ್ನಾಲಜಿ ಇನ್ ಕಂಪ್ಯೂಟರ್ / ಕಂಪ್ಯೂಟರ್ ಸೈನ್ಸ್ /ಕಂಪ್ಯೂಟರ್ ಟೆಕ್ನಾಲಜಿ / ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ / ಇನ್ಫರ್ಮೇಶನ್ ಟೆಕ್ನಾಲಜಿಯನ್ನು ಮಾನ್ಯತೆ ಪಡೆದ ಇನ್‌ಸ್ಟಿಟ್ಯೂಟ್ ನಲ್ಲಿ ಮಾಡಿರಬೇಕು.
ಅಥವಾ
ಡಿಪ್ಲೋಮಾ / ಟೆಕ್ನಿಕಲ್ ಪ್ರೊಫಿಶಿಯನ್ಸಿ ಸರ್ಟಿಫಿಕೇಟ್ ಇನ್ ಕಂಪ್ಯೂಟರ್ / ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಟೆಕ್ನಾಲಜಿ / ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ / ಇನ್ಫರ್ಮೇಶನ್ ಟೆಕ್ನಾಲಜಿ ಯನ್ನು ಆರ್ಮ್ಡ್ ಫೋರ್ಸ್ ನಿಂದ ಅವಾರ್ಡ್ ಪಡೆದಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 35,400/- ರಿಂದ 1,12,400/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ http://ntro.gov.in/ntroWeb/welcome.do ಗೆ ಹೋಗಿ.
ಸ್ಟೆಪ್ 2: ನಂತರ ಅಭ್ಯರ್ಥಿಗಳು " Current Openings" ಗೆ ಹೋಗಿ ನಿಮಗೆ ಸೂಕ್ತವಾಗುವ ಹುದ್ದೆಯನ್ನು ಆಯ್ಕೆ ಮಾಡಿ.
ಸ್ಟೆಪ್ 3: ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ನಂತರ "Apply Online" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಭ್ಯರ್ಥಿಗಳು ಮೊದಲ ಯೂಸರ್ ಆಗಿದ್ದಲ್ಲಿ "Click here for New Registration" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ನಂತರ ಅರ್ಜಿಯನ್ನು ಸಲ್ಲಿಸಲು "Submit" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6: ರಿಜಿಸ್ಟರ್ ಮಾಡಿದ ಬಳಿಕ ಅಭ್ಯರ್ಥಿಗಳು ರಿಜಿಸ್ಟರ್ ನಂಬರ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ ಅರ್ಜಿಯಲ್ಲಿ ಕೇಳಲಾದ ನಿಮ್ಮ ಭಾವಚಿತ್ರ ಲಗತ್ತಿಸಿ ಮತ್ತು ನಿಮ್ಮ ಸಹಿಯನ್ನು ಹಾಕಿ.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅಧಿಕೃತ ವೆಬ್‌ಸೈಟ್‌ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
NTRO Jobs Recruitment Notification 2019.National Technical Research Organization inviting applications for the positions of Technical Assistant.Interested and Eligible candidates can apply for the positions.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+