ಆಯಿಲ್ ಇಂಡಿಯಾ ಲಿಮಿಟೆಡ್ 10 ಮ್ಯಾನೇಜರ್ ಮತ್ತು ಹಿರಿಯ ಖಾತೆ ಅಧಿಕಾರಿ / ಹಿರಿಯ ಆಂತರಿಕ ಲೆಕ್ಕ ಪರಿಶೋಧಕ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.
ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಕ್ಟೋಬರ್ 22,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

| CRITERIA | DETAILS |
| Name Of The Posts | ಮ್ಯಾನೇಜರ್ ಮತ್ತು ಹಿರಿಯ ಖಾತೆ ಅಧಿಕಾರಿ / ಹಿರಿಯ ಆಂತರಿಕ ಲೆಕ್ಕ ಪರಿಶೋಧಕ |
| Organisation | ಆಯಿಲ್ ಇಂಡಿಯಾ ಲಿಮಿಟೆಡ್ |
| Job Location | ಭಾರತದೆಲ್ಲೆಡೆ |
| Salary Scale | ಮ್ಯಾನೇಜರ್ -ತಿಂಗಳಿಗೆ 80,000/- ರಿಂದ 2,20,000/-ರೂ ಮತ್ತು ಹಿರಿಯ ಖಾತೆ ಅಧಿಕಾರಿ / ಹಿರಿಯ ಆಂತರಿಕ ಲೆಕ್ಕ ಪರಿಶೋಧಕ- ತಿಂಗಳಿಗೆ 60,000/- ರಿಂದ 1,80,000/- ರೂ |
| Application Start Date | October 2, 2019 |
| Application End Date | October 22, 2019 |
ವಯೋಮಿತಿ:
ಈ ಹುದ್ದೆಗಳಿಗೆ ಗರಿಷ್ಟ 32 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ಓದಿ ತಿಳಿಯಬಹುದು.
ವೇತನದ ವಿವರ :
ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾ ಅಭ್ಯರ್ಥಿಗಳಿಗೆ ತಿಂಗಳಿಗೆ 80,000/- ರಿಂದ 2,20,000/-ರೂ ಮತ್ತು ಹಿರಿಯ ಖಾತೆ ಅಧಿಕಾರಿ / ಹಿರಿಯ ಆಂತರಿಕ ಲೆಕ್ಕ ಪರಿಶೋಧಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 60,000/- ರಿಂದ 1,80,000/- ರೂ ವೇತನವನ್ನು ನೀಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ :
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.oil-india.com/ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅಕ್ಟೋಬರ್ 22,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ


Click it and Unblock the Notifications











