ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ನೇಮಕಾತಿ 32 ಎಕ್ಸಿಕ್ಯುಟಿವ್ ಮತ್ತು ಅಡ್ವೈಸರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಓಎನ್‌ಜಿಸಿ ಯ ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅರ್ಜಿಯನ್ನು ಏಪ್ರಿಲ್ 9,2019 ರೊಳಗೆ ಸಲ್ಲಿಸಬಹುದು.

| CRITERIA | DETAILS |
| Name Of The Posts | ಎಕ್ಸಿಕ್ಯುಟಿವ್ ಮತ್ತು ಅಡ್ವೈಸರ್ |
| Organisation | ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ |
| Educational Qualification | ಎಂಬಿಎ, ಸ್ನಾತಕೋತ್ತರ ಪದವಿ / ಡಿಪ್ಲೋಮಾ , ಪದವಿ (ಲಾ) |
| Job Location | ಭಾರತದೆಲ್ಲೆಡೆ |
| Salary Scale | 60,000/- ರಿಂದ 1,80,000/-ರೂ |
| Application Start Date | March 15, 2019 |
| Application End Date | April 9, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಎಂಬಿಎ, ಸ್ನಾತಕೋತ್ತರ ಪದವಿ / ಡಿಪ್ಲೋಮಾ , ಪದವಿ (ಲಾ) ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ / ಬೋರ್ಡ್‌ನಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಈ ಹುದ್ದೆಗಳಿಗೆ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುತ್ತದೆ.
ವೇತನದ ವಿವರ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 60,000/- ರಿಂದ 1,80,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಸಾಮಾನ್ಯ / ಓಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 370/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ / ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ಓಎನ್‌ಜಿಸಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿಯನ್ನು ಏಪ್ರಿಲ್ 9,2019ರೊಳಗೆ ಸಲ್ಲಿಸಬಹುದು.
ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











