ಓರಿಯಂಟಲ್ ಇನ್ಸೂರೆನ್ಸ್ ಕಂಪನಿ 300 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Job Alerts
oi-Vinaykumar
ಸರ್ಕಾರಿ ಸ್ವಾಮ್ಯದ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಅಧಿಕಾರಿಗಳ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ದಿನಾಂಕ 15, ಸೆಪ್ಟೆಂಬರ್, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸರ್ಕಾರಿ ಸ್ವಾಮ್ಯದ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಒಟ್ಟು 300 ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಕೌಂಟ್ಸ್ - 20, ಆಟೋಮೊಬೈಲ್ ಇಂಜಿನಿಯರ್ಸ್- 15, ವೈದ್ಯಕೀಯ ಅಧಿಕಾರಿಗಳು- 10 ಸೇರಿದಂತೆ ವಿವಿಧ ವಿಭಾದ ಆಡಳಿತಾಧಿಕಾರಿ ಅಧಿಕಾರಿಗಳ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ದಿನಾಂಕ 15, ಸೆಪ್ಟೆಂಬರ್, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ನೇಮಕಾತಿ
ವಿದ್ಯಾರ್ಹತೆ
ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ
31/07/2017ಕ್ಕೆ ಅನ್ವಯವಾಗುವಂತೆ 21ರಿಂದ 30 ವರ್ಷ ವಯೋಮಿತಿಯನ್ನು ಅಭ್ಯರ್ಥಿಗಳಿಗೆ ನಿಗದಿ ಪಡಿಸಲಾಗಿದೆ.
ವೇತನ ಶ್ರೇಣಿ
ಬೇಸಿಕ್ ವೇತನ ಸೇರಿದಂತೆ ಎಲ್ಲಾ ಭತ್ಯೆಗಳು ಸೇರಿ ತಂಗಳಿಗೆ 51000 ರು.
ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶವಿರುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.600/-
ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-
ಆಯ್ಕೆ ವಿಧಾನ
ಪ್ರಾಥಮಿಕ ಪರೀಕ್ಷೆ ಬಳಿಕ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆಯಾದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಪರೀಕ್ಷೆಗಳು ದಿನಾಂಕ 22 ಅಕ್ಟೋಬರ್, 2017ರಂದು ನಡೆಯಲಿವೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-09-2017 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 15-09-2017 ಮೊದಲ ಹಂತದ ಪರೀಕ್ಷೆ ನಡೆಯುವ ದಿನಾಂಕ: : 22-10-2017 (ತಾತ್ಕಾಲಿಕ) ಎರಡನೇ ಹಂತದ ಪರೀಕ್ಷೆ ನಡೆಯುವ ದಿನಾಂಕ: 18-11-2017 (ತಾತ್ಕಾಲಿಕ)