PCARDB: 48 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯದಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೌಕರರ ಸಾಮಾನ್ಯ ಶ್ರೇಣಿ ಸಮಿತಿ ಇದರಲ್ಲಿ ಖಾಲಿ ಇರುವ ಲೆಕ್ಕಾಧಿಕಾರಿಗಳು,ಪ್ರಥಮ ದರ್ಜೆ ಸಹಾಯಕರು, ಹಿರಿಯ ಕ್ಷೇತ್ರಾಧಿಕಾರಿ, ಎರಡನೇ ದರ್ಜೆ ಸಹಾಯಕರು, ಕಿರಿಯ ಕ್ಷೇತ್ರಾಧಿಕಾರಿ ಮತ್ತು ಬೆರಳಚ್ಚುಗಾರರು/ಗಣಕ ಯಂತ್ರ ನಿರ್ವಾಹಕರ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ.

ಒಟ್ಟು 48 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಖುದ್ದಾಗಿ/ಅಂಚೆ/ಕೋರಿಯರ್ ಇತ್ಯಾದಿ ಮೂಲಕ ಕಳುಹಿಸಲು ಅವಕಾಶವಿರುವುದಿಲ್ಲ.

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ 48 ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ:

ಲೆಕ್ಕಾಧಿಕಾರಿ -6 ಹುದ್ದೆಗಳು
ಹಿರಿಯ ಕ್ಷೇತ್ರಾಧಿಕಾರಿ -3 ಹುದ್ದೆಗಳು
ಪ್ರ.ದ. ಸಹಾಯಕರು - 7 ಹುದ್ದೆಗಳು
ಕಿರಿಯ ಕ್ಷೇತ್ರಾಧಿಕಾರಿ -9 ಹುದ್ದೆಗಳು
ಬೆರಳಚ್ಚುಗಾರರು/ಗಣಕಯಂತ್ರ ನಿರ್ವಾಹಕರು - 2 ಹುದ್ದೆಗಳು
ಸಹಾಯಕರು - 4 ಹುದ್ದೆಗಳು
ಜವಾನರು - 13 ಹುದ್ದೆಗಳು
ಒಟ್ಟು - 48 ಹುದ್ದೆಗಳು

ವಿದ್ಯಾರ್ಹತೆ:

ಲೆಕ್ಕಾಧಿಕಾರಿ, ಹಿರಿಯ ಕ್ಷೇತ್ರಾಧಿಕಾರಿ ಮತ್ತು ಪ್ರ.ದ. ಸಹಾಯಕರು ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾನಿಲಯದ ಬಿ.ಕಾಂ / ಬಿ.ಬಿ.ಎಂ / ಬಿ.ಬಿ.ಎ / ಬಿ.ಸಿ.ಎ / ಸಹಕಾರದಲ್ಲಿ ಪದವೀಧರರಾಗಿರಬೇಕು. ಕಿರಿಯ ಕ್ಷೇತ್ರಾಧಿಕಾರಿ ಮತ್ತು ಬೆರಳಚ್ಚುಗಾರರು /ಗಣಕಯಂತ್ರ ನಿರ್ವಾಹಕರು ಹುದ್ದೆಗಳಿಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು ಜೊತೆಗೆ ಗಣಕಯಂತ್ರದ ಜ್ಞಾನ ಹೊಂದಿರಬೇಕು. ಸಹಾಯಕರು ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಮತ್ತು ಜವಾನರು ಹುದ್ದೆಗಳಿಗೆ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು.

ವೇತನದ ವಿವರ:

ಲೆಕ್ಕಾಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,650/- ರಿಂದ 32,000/-ರೂ,
ಹಿರಿಯ ಕ್ಷೇತ್ರಾಧಿಕಾರಿ ಮತ್ತು ಪ್ರ.ದ. ಸಹಾಯಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 14,550/- ರಿಂದ 26,700/-ರೂ, ಕಿರಿಯ ಕ್ಷೇತ್ರಾಧಿಕಾರಿ ಮತ್ತು ಬೆರಳಚ್ಚುಗಾರರು /ಗಣಕಯಂತ್ರ ನಿರ್ವಾಹಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 11,600/- ರಿಂದ 21,000/-ರೂ, ಸಹಾಯಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 10,400/-ರಿಂದ 16,400/-ರೂ ಮತ್ತು ಜವಾನರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 9,600/-ರಿಂದ 14,550/-ರೂ ವೇತನವನ್ನು ನೀಡಲಾಗುವುದು.

ವಯೋಮಿತಿ:

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಟ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಟ 40 ವರ್ಷಗಳು ಮೀರಿರಬಾರದು.

ಅರ್ಜಿ ಶುಲ್ಕ:

ಅರ್ಜಿದಾರರು 500/-ರೂ + 50/-ರೂ ಅಂಚೆ ಸೇವೆ ಶುಲ್ಕವನ್ನು ರಾಜ್ಯದ ಯಾವುದೇ ವಿದ್ಯುನ್ಮಾನ ಪಾವತಿ ಲಭ್ಯದ ಅಂಚೆ ಕಚೇರಿಗೆ ತೆರಳಿ ನಿಗದಿತ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಏಪ್ರಿಲ್ 17,2020ರೊಳಗೆ ಪಾವತಿಸಬೇಕಿರುತ್ತದೆ. ಡಿಡಿ/ಪೋಸ್ಟಲ್ ಆರ್ಡರ್ ಅಥವಾ ಇನ್ನಿತರೆ ರೀತಿಯಲ್ಲಿ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ನೇಮಕಾತಿ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ವೈಯಕ್ತಿ ಸಂದರ್ಶನ ಇರುವುದಿಲ್ಲ.

ಸೂಚನೆಗಳು:
ಬ್ಯಾಂಕಿನಲ್ಲಿ ಹಾಲಿ ಇರುವ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಬಂಧ ನೇರ ನೇಮಕಾತಿ ಪ್ರಕ್ರಿಯೆಯ ಪೂರ್ಣ ವಿವರಗಳನ್ನು ಬ್ಯಾಂಕಿನ ಜಾಲ ತಾಣದಿಂದ ಪಡೆದು ತಾಕ್ಷಣಿಕ ಸೇವೆಯ (online) ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು. ಬೇರೆ ರೀತಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
• ಅಭ್ಯರ್ಥಿಯು ಭಾರತೀಯ ನಾಗರೀಕನಾಗಿರತಕ್ಕದ್ದು.
• ಕನ್ನಡ ಭಾಷೆಯಲ್ಲಿ ಓದಲು, ಬರೆಯಲು, ಅರ್ಥೈಸಿಕೊಳ್ಳಲು ಮಾತನಾಡಲು ಬರಬೇಕು.
• ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು.
• ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು ಒಂದೇ ನೊಂದಣಿ ಸಂಖ್ಯೆಯಡಿಯಲ್ಲಿಯೇ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ, ಪ್ರತ್ಯೇಕವಾಗಿ ಅರ್ಜಿ ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಏಪ್ರಿಲ್ 16,2020ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅಭ್ಯರ್ಥಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್‌ಸೈಟ್ http://recruit-app.com/cccpcardbl2020/ ಗೆ ಭೇಟಿ ನೀಡಿ.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
PCARDB bank recruitment 2020 notification has been released on official website for the recruitment of 48 various posts. Interested candidates can apply before 16th April 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+