ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ನೇಮಕಾತಿ 10 SAP ಪ್ರೊಫೆಷನಲ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿದ ನಂತರ ಆನ್‌ಲೈನ್ ಮೂಲಕ ಮಾರ್ಚ್ 21.2019 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

| CRITERIA | DETAILS |
| Name Of The Posts | SAP ಪ್ರೊಫೆಷನಲ್ |
| Organisation | ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ |
| Educational Qualification | ಇಂಜಿನಿಯರಿಂಗ್ ಪದವಿ / ಇನ್ಫರ್ಮೇಶನ್ ಟೆಕ್ನಾಲಜಿ / ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಅಪ್ಲಿಕೇಶನ್ / ಮ್ಯಾನೇಜ್ಮೆಂಟ್ / ಸೈನ್ಸ್ ಕಾಮರ್ಸ್ / ಎಕನಾಮಿಕ್ಸ್ |
| Job Location | ಬೆಂಗಳೂರು, ಕೊಲ್ಕತ್ತಾ, ಗುರ್‌ಗಾಂ |
| Application Start Date | February 27, 2019 |
| Application End Date | March 21, 2019 |
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಪೂರ್ಣಕಾಲಿಕ ಇಂಜಿನಿಯರಿಂಗ್ ಪದವಿ / ಇನ್ಫರ್ಮೇಶನ್ ಟೆಕ್ನಾಲಜಿ / ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಅಪ್ಲಿಕೇಶನ್ / ಮ್ಯಾನೇಜ್ಮೆಂಟ್ / ಸೈನ್ಸ್ ಕಾಮರ್ಸ್ / ಎಕನಾಮಿಕ್ಸ್ ಅನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಈ ಹುದ್ದೆಗಳಿಗೆ ಮಾರ್ಚ್ 21,2019 ರ ಅನ್ವಯ ಸಾಮಾನ್ಯ ಅಭ್ಯರ್ಥಿಗಳು 45 ವರ್ಷ ವಯೋಮಿತಿಯೊಳಗಿನವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ5 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಮಾಜಿ ಸೈನಿಕ/ ಜಮ್ಮು ಕಾಶ್ಮೀರ ನಿವಾಸಿಯಾಗಿದ್ದಲ್ಲಿ ಭಾರತೀಯ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು , ಸಾಮಾನ್ಯ ಓಬಿಸಿ ಅಭ್ಯರ್ಥಿಗಳೂ 400/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ http://www.powergridindia.com./ ಗೆ ಹೋಗಿ.
ಸ್ಟೆಪ್ 2: ನಂತರ ಅಭ್ಯರ್ಥಿಗಳು "Register" ಗೆ ಹೋಗಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿದ ನಂತರ "Apply Online" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ನೀವು ಹೊಸ ಬಳಕೆದಾರರಾಗಿದ್ದಲ್ಲಿ "Click here for New Registration" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಲ್ಲಿ ಕೇಳಲಾಗಿರುವ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ "Submit" ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 5: ರಿಜಿಸ್ಟ್ರೇಶನ್ ಮಾಡಿದ ನಂತರ ಮತ್ತೆ ರಿಜಿಸ್ಟರ್ ನಂಬರ್ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ.
ನಿಮ್ಮ ಭಾವಚಿತ್ರ, ಸಹಿ ಮತ್ತು ಅರ್ಜಿ ಶುಲ್ಕ ಪಾವತಿಸಿ ನಂತರ ಅರ್ಜಿಯನ್ನು "Submit" ಮಾಡಿ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ.
ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











