ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಸ್ಟಂ ಇಂಜಿನಿಯರ್ಸ್ ಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸೂಪರ್ ಕಂಪ್ಯೂಟರ್ ಎಜುಕೇಷನ್ ಅಂಡ್ ರೀಸರ್ಚ್ ಸೆಂಟರ್ ನಲ್ಲಿ ಗುತ್ತಿಗೆ ಆಧಾರದ ಮೇರೆಗೆ ಸಿಸ್ಟಮ್ ಇಂಜಿನಿಯರ್ಸ್ ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಹುದ್ದೆಗಳ ವಿವರ
ಹುದ್ದೆಯ ಹೆಸರು: ಸಿಸ್ಟಂ ಇಂಜಿನಿಯರ್
ಹುದ್ದೆ ಸಂಖ್ಯೆ: 08
ವಿದ್ಯಾರ್ಹತೆ
ಎಂಸಿಎ/ಬಿಇ/ಬಿಟೆಕ್ (ಸಿಎಸ್/ಐಟಿ) ಅಥವಾ ವಿಶ್ವವಿದ್ಯಾನಿಲಯವು ಘೋಷಿಸಿದ ಪ್ರಥಮ ದರ್ಜೆಗೆ ಸಮನಾದ (ಎಸ್ ಸಿಗೆ ಸೇರಿದ ಅಭ್ಯರ್ಥಿಗಳ ಸಂದರ್ಭದಲ್ಲಿ ದ್ವಿತೀಯ ದರ್ಜೆ) ಮತ್ತು ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ಡೊಮೈನ್ ಸ್ಪೆಸಿಫಿಕ್ ಎಕ್ಸ್ಪರ್ಟೈಸ್ ನಲ್ಲಿ ಸಿಸ್ಟಮ್ ಅಡ್ಮಿನಿಷ್ಟ್ರೇಷನ್ ನಲ್ಲಿ 2 ವರ್ಷಗಳ ಅನುಭವ ಇರಬೇಕು.
(1) Linux with RHCE certification or (2) Linux with HPC sysadmin experience (High Performance Computing systems, Large scale distributed storage servers or Parallel file systems).
ವಯೋಮಿತಿ: ಗರಿಷ್ಠ 30 ವರ್ಷಗಳು
ವೇತನ: ರೂ.24000-30000/-
ಗುತ್ತಿಗೆ ಅವಧಿ: ಒಂದು ವರ್ಷ (ಅಭ್ಯರ್ಥಿಯ ಕಾರ್ಯದಕ್ಷತೆ ಮೇರೆಗೆ ಗರಿಷ್ಠ ಐದು ವರ್ಷಗಳವರೆಗೂ ವಿಸ್ತರಿಸಲಾಗುವುದು)
ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಅದರ ಪ್ರಿಂಟ್ ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಿಗದಿತ ದಿನಾಂಕದೊಳಗೆ ಕಚೇರಿಯ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-11-2017
ಅರ್ಜಿ ಸಲ್ಲಿಸಬೇಕಾದ ವಿಳಾಸ
ASSISTANT REGISTRAR,
UNIT-IB, INDIAN INSTITUTE OF SCIENCE,
BANGALORE-560012
ಹೆಚ್ಚಿನ ಮಾಹತಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











