ಪ್ರಸಾರ್ ಭಾರತಿ ನೇಮಕಾತಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಸಾರ್‌ ಭಾರತಿ ನೇಮಕಾತಿ ಡಿಜಿಟಲ್ ಅಸಿಸ್ಟೆಂಟ್ ಮ್ಯಾನೇಜರ್, ಸೋಶಿಯಲ್ ಮೀಡಿಯಾ ಮ್ಯಾನೇಜರ್, ಡಿಜಿಟಲ್ ವೀಡಿಯೋ ಎಡಿಟರ್, ಡಿಜಿಟಲ್ ಸೀನಿಯರ್ ಸಬ್‌-ಎಡಿಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಪ್ರಸಾರ್ ಭಾರತಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಪೋಸ್ಟ್ ಮಾಡುವ ಮೂಲಕ ಮೇ 2,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಪ್ರಸಾರ್ ಭಾರತಿಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಡಿಜಿಟಲ್ ಅಸಿಸ್ಟೆಂಟ್ ಮ್ಯಾನೇಜರ್, ಸೋಶಿಯಲ್ ಮೀಡಿಯಾ ಮ್ಯಾನೇಜರ್, ಡಿಜಿಟಲ್ ವೀಡಿಯೋ ಎಡಿಟರ್, ಡಿಜಿಟಲ್ ಸೀನಿಯರ್ ಸಬ್‌-ಎಡಿಟರ್
Organisation ಪ್ರಸಾರ್‌ ಭಾರತಿ
Educational Qualification ಸ್ನಾತಕೋತ್ತರ ಪದವಿ, ಪದವಿ, ಪತ್ರಿಕೋದ್ಯಮದಲ್ಲಿ ಪದವಿ,
Job Location ನವದೆಹಲಿ
Salary Scale ಡಿಜಿಟಲ್ ಅಸಿಸ್ಟೆಂಟ್ ಮ್ಯಾನೇಜರ್ - ತಿಂಗಳಿಗೆ 75,000/- ರೂ, ಸೋಶಿಯಲ್ ಮೀಡಿಯಾ ಮ್ಯಾನೇಜರ್ - ತಿಂಗಳಿಗೆ 50,000/-ರೂ ಮತ್ತು ಡಿಜಿಟಲ್ ಸೀನಿಯರ್ ಸಬ್‌-ಎಡಿಟರ್ -ತಿಂಗಳಿಗೆ 35,000/-ರೂ
Application End Date May 2, 2019

ಶೈಕ್ಷಣಿಕ ವಿದ್ಯಾರ್ಹತೆ:

ಡಿಜಿಟಲ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ , ಸೋಶಿಯಲ್ ಮೀಡಿಯಾ ಮ್ಯಾನೇಜರ್ ಮತ್ತು ಡಿಜಿಟಲ್ ವೀಡಿಯೋ ಎಡಿಟರ್ ಹುದ್ದೆಗಳಿಗೆ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಮತ್ತು ಡಿಜಿಟಲ್ ಸೀನಿಯರ್ ಸಬ್‌-ಎಡಿಟರ್ ಹುದ್ದೆಗಳಿಗೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮಾಧ್ಯಮದಲ್ಲಿ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಈ ಹುದ್ದೆಗಳಿಗೆ ಪ್ರಸಾರ್‌ ಭಾರತಿಯ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಡಿಜಿಟಲ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 75,000/- ರೂ, ಸೋಶಿಯಲ್ ಮೀಡಿಯಾ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 50,000/-ರೂ ಮತ್ತು ಡಿಜಿಟಲ್ ಸೀನಿಯರ್ ಸಬ್‌-ಎಡಿಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು ಪ್ರಸಾರ್ ಭಾರತಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಧಿಕೃತ ವೆಬ್‌ಸೈಟ್‌ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಮೇ 2,2019ರೊಳಗೆ ಕಳುಹಿಸಬಹುದು ಅಥವಾ [email protected] ಅಥವಾ [email protected] ಮತ್ತು CC ಯನ್ನು [email protected] ವಿಳಾಸಕ್ಕೆ ಮೇಲ್ ಮಾಡುವ ಮೂಲಕ ಆರ್ಜಿಯನ್ನು ಸಲ್ಲಿಸಬಹುದು.

ಕಚೇರಿಯ ವಿಳಾಸ:
ಡೆಪ್ಯುಟಿ ಡೈರೆಕ್ಟರ್,
ಪ್ರಸಾರ್ ಭಾರತಿ ಸೆಕ್ರೆಟರಿಯೇಟ್,
ಪ್ರಸಾರ್‌ ಭಾರತಿ ಹೌಸ್,
ಟವರ್ ಸಿ,
ಕಾಪರ್ನಿಕಸ್ ಮಾರ್ಗ್,
ನವದೆಹಲಿ -110001

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Prasar bharati recruitment 2019 notification has been released on official website for the recruitment of multiple posts . Interested candidates can apply through offline before 2nd may 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+