ರಾಜ್ಯದಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೌಕರರ ಸಾಮಾನ್ಯ ಶ್ರೇಣಿ ಸಮಿತಿ ಇದರಲ್ಲಿ ಖಾಲಿ ಇರುವ ಲೆಕ್ಕಾಧಿಕಾರಿಗಳು,ಪ್ರಥಮ ದರ್ಜೆ ಪ್ರಥಮ ದರ್ಜೆ ಸಹಾಯಕರು, ಹಿರಿಯ ಕ್ಷೇತ್ರಾಧಿಕಾರಿ, ಎರಡನೇ ದರ್ಜೆ ಸಹಾಯಕರು, ಕಿರಿಯ ಕ್ಷೇತ್ರಾಧಿಕಾರಿ ಮತ್ತು ಬೆರಳಚ್ಚುಗಾರರು/ಗಣಕ ಯಂತ್ರ ನಿರ್ವಾಹಕರ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ.
ಒಟ್ಟು 496 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಖುದ್ದಾಗಿ/ಅಂಚೆ/ಕೋರಿಯರ್ ಇತ್ಯಾದಿ ಮೂಲಕ ಕಳುಹಿಸಲು ಅವಕಾಶವಿರುವುದಿಲ್ಲ.

ಹುದ್ದೆಗಳ ವಿವರ
ಲೆಕ್ಕಾಧಿಕಾರಿ-88 ಹುದ್ದೆಗಳು
ವೇತನ ಶ್ರೇಣಿ:17650-32000/- + ಇತರೆ ಭತ್ಯೆಗಳು
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಕಾಂ/ಬಿಬಿಎಂ/ಬಿಸಿಎ/ ಪದವಿಯಲ್ಲಿ ಸಹಕಾರ ವಿಷಯವನ್ನು ಒಂದು ವಿಷಯವನ್ನಾಗಿ ಓದಿರಬೇಕು. ಟ್ಯಾಲಿ ಸರ್ಟಿಫಿಕೇಟಿನೊಂದಿಗೆ ಗಣಕ ಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.
ಪ್ರಥಮ ದರ್ಜೆ ಸಹಾಯಕರು-66 ಹುದ್ದೆಗಳು
ವೇತನ ಶ್ರೇಣಿ:14550-26700/- + ಇತರೆ ಭತ್ಯೆಗಳು
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಜೊತೆಯಲ್ಲಿ ಗಣಕ ಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹಿರಿಯ ಕ್ಷೇತ್ರಾಧಿಕಾರಿ-42 ಹುದ್ದೆಗಳು
ವೇತನ ಶ್ರೇಣಿ:14550-26700/- + ಇತರೆ ಭತ್ಯೆಗಳು
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಜೊತೆಯಲ್ಲಿ ಗಣಕ ಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.
ಎರಡನೇ ದರ್ಜೆ ಸಹಾಯಕರು-191 ಹುದ್ದೆಗಳು
ವೇತನ ಶ್ರೇಣಿ:11600-21000/- + ಇತರೆ ಭತ್ಯೆಗಳು
ವಿದ್ಯಾರ್ಹತೆ: ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು. ಗಣಕ ಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.
ಕಿರಿಯ ಕ್ಷೇತ್ರಾಧಿಕಾರಿ ಸಹಾಯಕರು-62 ಹುದ್ದೆಗಳು
ವೇತನ ಶ್ರೇಣಿ:11600-21000/- + ಇತರೆ ಭತ್ಯೆಗಳು
ವಿದ್ಯಾರ್ಹತೆ: ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು. ಗಣಕ ಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.
ಬೆರಳಚ್ಚುಗಾರರು/ಗಣಕ ಯಂತ್ರ ನಿರ್ವಾಹಕರು-47 ಹುದ್ದೆಗಳು
ವೇತನ ಶ್ರೇಣಿ:11600-21000/- + ಇತರೆ ಭತ್ಯೆಗಳು
ವಿದ್ಯಾರ್ಹತೆ: ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು ಅಥವಾ ಮೂರು ವರ್ಷಗಳ ಡಿಪ್ಲೋಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪೂರ್ಣಗೊಳಿಸಿರಬೇಕು. ಬೆರಳಚ್ಚಿನಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸೀನಿಯರ್ ತೇರ್ಗಡೆ ಹೊಂದಿರಬೇಕು. ಗಣಕ ಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.
ಸೂಚನೆಗಳು
• ಬ್ಯಾಂಕಿನಲ್ಲಿ ಹಾಲಿ ಇರುವ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಬಂಧ ನೇರ ನೇಮಕಾತಿ ಪ್ರಕ್ರಿಯೆಯ ಪೂರ್ಣ ವಿವರಗಳನ್ನು ಬ್ಯಾಂಕಿನ ಜಾಲ ತಾಣದಿಂದ ಪಡೆದು ತಾಕ್ಷಣಿಕ ಸೇವೆಯ (online) ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು. ಬೇರೆ ರೀತಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
• ಅಭ್ಯರ್ಥಿಯು ಭಾರತೀಯ ನಾಗರೀಕನಾಗಿರತಕ್ಕದ್ದು.
• ಕನ್ನಡ ಭಾಷೆಯಲ್ಲಿ ಓದಲು, ಬರೆಯಲು, ಅರ್ಥೈಸಿಕೊಳ್ಳಲು ಮಾತನಾಡಲು ಬರಬೇಕು.
• ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು.
• ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು ಒಂದೇ ನೊಂದಣಿ ಸಂಖ್ಯೆಯಡಿಯಲ್ಲಿಯೇ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ, ಪ್ರತ್ಯೇಕವಾಗಿ ಅರ್ಜಿ ಸಲ್ಲಿಸತಕ್ಕದ್ದು.
ವಯೋಮಿತಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 35 ವರ್ಷಗಳು. (ಒಬಿಸಿ ವರ್ಗದವರಿಗೆ ಮೂರು ವರ್ಷ ಮತ್ತು ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ಐದು ವರ್ಷಗಳ ಸಡಿಲಿಕೆ ಇದೆ)
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000/-
- ಎಸ್.ಸಿ/ಎಸ್.ಟಿ/ಪ್ರ-1/ ಅಭ್ಯರ್ಥಿಗಳಿಗೆ ರೂ.500/-
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-3-2020
- ಶುಲ್ಕ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 16-4-2020
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











