Rail Wheel Factory Recruitment 2021 : 192 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆಯ ಅಡಿಯಲ್ಲಿರುವ ರೇಲ್ ವ್ಹೀಲ್ ಫ್ಯಾಕ್ಟರಿ (ಆರ್‌ಡಬ್ಲ್ಯೂಎಫ್)ಯಲ್ಲಿ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆ 2021 ಅನ್ನು ಬಿಡುಗಡೆ ಮಾಡಲಾಗಿದೆ. ಆರ್‌ಡಬ್ಲ್ಯುಎಫ್‌ನಲ್ಲಿ 192 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸಿದ್ದರಿರುವ ಅಭ್ಯರ್ಥಿಗಳೂ ಅರ್ಜಿಯನ್ನು ಹಾಕಬಹುದು. ಈ ಹುದ್ದೆಗಳ ಅರ್ಜಿ ಪ್ರಕ್ರಿಯೆಯು ಆಗಸ್ಟ್ 13, 2021 ರಿಂದ ಸೆಪ್ಟೆಂಬರ್ 13, 2021ರ ಸಂಜೆ 5:00 ಗಂಟೆ ವರೆಗೆ ನಡೆಯಲಿದೆ.

ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021 ಅರ್ಹತೆಗಳು:

ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021 ಅರ್ಹತೆಗಳು:

ಆರ್‌ಡಬ್ಲ್ಯುಎಫ್ ನೇಮಕಾತಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆರ್‌ಡಬ್ಲ್ಯೂಎಲ್ ಅಪ್ರೆಂಟಿಸ್ ಅಧಿಸೂಚನೆ 2021 ರಲ್ಲಿ ವಿವರಿಸಿರುವಂತೆ 10 ನೇ ತರಗತಿ/ಮೆಟ್ರಿಕ್ಯುಲೇಷನ್ ಅಥವಾ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ ವನ್ನು (ಎನ್‌ಟಿಸಿ) ಸಂಬಂಧಿತ ವಿಷಯದಲ್ಲಿ ಹೊಂದಿರಬೇಕು.

ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021 ವಯೋಮಿತಿ:

ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021 ವಯೋಮಿತಿ:

ಆರ್‌ಡಬ್ಲ್ಯುಎಫ್ ನೇಮಕಾತಿಯ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 13,2021ರ ಅನ್ವಯ ಕನಿಷ್ಟ 15 ವರ್ಷ ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಟ 24 ವರ್ಷ ವಯೋಮಿತಿ ಮೀರಿರಬಾರದು.

ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ ಮತ್ತು ವೇತನ :

ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ ಮತ್ತು ವೇತನ :

ಆರ್ಡಬ್ಲ್ಯುಎಫ್ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆಯನ್ನು ಅರ್ಜಿದಾರರ ಕಿರು ಪಟ್ಟಿ, ಮೆರಿಟ್ ಮತ್ತು ದಾಖಲೆ ಪರಿಶೀಲನೆ ಮೂಲಕ ಮಾಡಲಾಗುತ್ತದೆ. ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021ರ ಮೂಲಕ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಆದ ಅಭ್ಯರ್ಥಿಗಳಿಗೆ ಅಪ್ರೆಂಟಿಶಿಪ್ ನಿಯಮಾನುಸಾಸರ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.

ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021 ಅರ್ಜಿ ಶುಲ್ಕ :

ರೈಲ್ ವ್ಹೀಲ್ ಫ್ಯಾಕ್ಟರಿ ನೇಮಕಾತಿ 2021 ಅರ್ಜಿ ಶುಲ್ಕ :

ಅರ್ಜಿದಾರರು ನಿಗದಿತ ಮೊತ್ತ 100/-ರೂ ಅನ್ನು ಆರ್‌ಡಬ್ಲ್ಯುಎಫ್ ಟ್ರೇಡ್ ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಶುಲ್ಕವಾಗಿ ಪಾವತಿಸಬೇಕಿದ್ದು, ಪ್ರಧಾನ ಅಂಚೆ ಸಲಹೆಗಾರ/ರೈಲ್ ವೀಲ್ ಫ್ಯಾಕ್ಟರಿ ಪರವಾಗಿ ಭಾರತೀಯ ಅಂಚೆ ಆದೇಶ/ಬೇಡಿಕೆ ಡ್ರಾಫ್ಟ್ ರೂಪದಲ್ಲಿ ಪಾವತಿಸಬಹುದು. ಆರ್‌ಡಬ್ಲ್ಯುಎಫ್ ಅಪ್ರೆಂಟಿಸ್ ಅಧಿಸೂಚನೆ 2021 ರಲ್ಲಿ ಉಲ್ಲೇಖಿಸಿರುವಂತೆ ಎಸ್‌ಸಿ/ಎಸ್‌ಟಿ/ಪಿಎಚ್ ಮತ್ತು ಮಹಿಳಾ ಅಭ್ಯರ್ಥಿಗಳು ಶುಲ್ಕ ಪಾವತಿಯಿಂದ ವಿನಾಯಿತಿ ಹೊಂದಿರುತ್ತಾರೆ.

ರೈಲ್ ವೀಲ್ ಫ್ಯಾಕ್ಟರಿ ನೇಮಕಾತಿ 2021 ಅರ್ಜಿ ಸಲ್ಲಿಕೆ :

ರೈಲ್ ವೀಲ್ ಫ್ಯಾಕ್ಟರಿ ನೇಮಕಾತಿ 2021 ಅರ್ಜಿ ಸಲ್ಲಿಕೆ :

ಆರ್‌ಡಬ್ಲ್ಯೂಎಫ್ ನೇಮಕಾತಿಯ ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ "Senior Personnel Officer, Personnel Department, Rail Wheel Factory, Yelahanka, Bengaluru - 560064" ವಿಳಾಸಕ್ಕೆ ಸೆಪ್ಟೆಂಬರ್ 13,2021ರ ಸಂಜೆ 5:00 ಗಂಟೆಯೊಳಗೆ ಅರ್ಜಿಯನ್ನು ತಲುಪಿಸಬೇಕಿರುತ್ತದೆ.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
Rail wheel factory recruitment 2021 notification has been released for 192 trade apprentice posts. Interested candidates can apply before September 13.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+