ರಾಮನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2019: 12 ಜವಾನ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ ಘಟಕದಲ್ಲಿ ಹೊಸದಾಗಿ ಸೃಜಿಸಲಾದ ನ್ಯಾಯಾಲಯಗಳಿಗೆ 12 ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಆನ್ ಲೈನ್ ನಲ್ಲಿ ದಿನಾಂಕ 1.02.2019 ರಿಂದ 15.02.2019 ರವರೆಗೆ ಮಾತ್ರ ಸಲ್ಲಿಸಬಹುದು.

ರಾಮನಗರ  ಜಿಲ್ಲಾ ನ್ಯಾಯಾಲಯದ  ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಜವಾನ
Organisation ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
Educational Qualification 7ನೇ ತರಗತಿ
Job Location ರಾಮನಗರ
Salary Scale ಜವಾನ-ತಿಂಗಳಿಗೆ 17,000/- ರಿಂದ28,950/- ರೂ
Application Start Date February 1, 2019
Application End Date February 15, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 7ನೇ ತರಗತಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗೆ ಕನ್ನಡದಲ್ಲಿ ಓದಲು ಹಾಗೂ ಬರೆಯಲು ತಿಳಿದಿರಬೇಕು. ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ಹುದ್ದೆಗಳ ವರ್ಗೀಕರಣ:

ಜವಾನ : 12 ಹುದ್ದೆಗಳು

ಮೀಸಲಾತಿ ಇತರೆ ಮಹಿಳೆ ಗ್ರಾಮೀಣ ಅಭ್ಯರ್ಥಿಕ.ಮಾ.ಅ ಯೋ.ಅ ಒಟ್ಟು
ಸಾಮಾನ್ಯ ಅಭ್ಯರ್ಥಿ 02 02 01 01 06
ಪರಿಶಿಷ್ಟ ಜಾತಿ 01 01 02
ಪರಿಶಿಷ್ಟ ಪಂಗಡ 01 01
ಪ್ರವರ್ಗ-II (A) 01 01
ಪ್ರವರ್ಗ-III(A) 01 01
ಪ್ರವರ್ಗ-III(B) 01 01
ಒಟ್ಟು 01 04 05 01 01 12
ವಿಶೇಷ ಸೂಚನೆ: ಕ.ಮಾ.ಅ = ಕನ್ನಡ ಮಾಧ್ಯಮ ಅಭ್ಯರ್ಥಿ
ಯೋ.ಅ = ಯೋಜನಾ ನಿರಾಶ್ರಿತ ಅಭ್ಯರ್ಥಿ

ವೇತನದ ವಿವರ:

ಜವಾನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,000/- ರಿಂದ28,950/- ರೂ ಹಾಗೂ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ವಯೋಮಿತಿ:

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಈ ಅಧಿಸೂಚನೆಯಲ್ಲಿ ಹೊರಡಿಸಿದ ದಿನಾಂಕದಂದು ಕನಿಷ್ಟ 18ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಗರಿಷ್ಟ ವಯೋಮಿತಿ:

ಸಾಮಾನ್ಯ ವರ್ಗ35ವರ್ಷ
2A,2B,3A,3B38ವರ್ಷ
ಪ.ಜಾತಿ, ಪ.ಪಂಗಡ, ಪ್ರವರ್ಗ-140ವರ್ಷ

ಅಭ್ಯರ್ಥಿಗಳು ಈ ಅಧಿಸೂಚನೆಯ ದಿನಾಂಕದಂದು ಗರಿಷ್ಠ ವಯಸ್ಸನ್ನು ಮೀರಿರಕೂಡದು ಮತ್ತು ಸರಕಾರಿ ಸೇವೆಯಲ್ಲಿರುವವರೆಗೆ, ವಿಧವೆಯರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಆಯ್ಕೆ ವಿಧಾನ:

ಜವಾನ ಹುದ್ದೆಗೆ 7ನೇ ತರಗತಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳಂತೆ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುವುದು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಹುದ್ದೆಗಳಿಗೆ ಪಾವತಿಸಬೇಕಾದ ನಿಗದಿತ ಶುಲ್ಕ ಹಾಗೂ ವಿಧಾನ:

ಸಾಮಾನ್ಯ ಅರ್ಹತೆ, ಪ್ರವರ್ಗ- 1,ಪ್ರವರ್ಗ- 2A, 2B,3A,3B ಅಭ್ಯರ್ಥಿಗಳಿಗೆ200/-ರೂ
ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ100/-ರೂ

ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್ ಸೈಟ್ https://districts.ecourts.gov.in/ramanagara-onlinerecruitment ಅಥವಾ http://karnatakajudiciary.kar.nic.in/districtrecruitment.asp ನಲ್ಲಿ ನೀಡಲಾದ ಲಿಂಕ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟೇಟ್ ಬ್ಯಾಂಕ್ ಕಲೆಕ್ಟ್ ಮೂಲಕ ನೆಟ್ ಬ್ಯಾಂಕಿಂಗ್/ ಕ್ರೆಡಿಕ್ಟ್ ಕಾರ್ಡ್/ಡೆಬಿಟ್ ಕಾರ್ಡ್/ಚಲನ್ ಅನ್ನು ಡೌನ್ ಲೋಡ್ ಮಾಡುವ ಸೌಲಭ್ಯದ ಮೂಲಕ ಶುಲ್ಕವನ್ನು ಪಾವತಿಸತಕ್ಕದ್ದು. ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಲು ಇಚ್ಛಿಸದ ಅಭ್ಯರ್ಥಿಗಳು ಚಲನ್ ಪ್ರತಿಯನ್ನು ಅಧಿಕೃತ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ಅದರ ಪ್ರಿಂಟೌಟ್ ಅನ್ನು ಪಡೆದುಕೊಂಡು ಎಸ್.ಬಿ.ಐ' ನ ಯಾವುದೇ ಶಾಖೆಗೆ ಹಾಜರುಪಡಿಸಿ ಶುಲ್ಕವನ್ನು ಪಾವತಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ಡಿಮ್ಯಾಂಡ್ ಡ್ರಾಫ್ಟ್ / ಪೋಸ್ಟಲ್ ಆರ್ಡರ್/ ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಪಾವತಿಸದ ಅಭ್ಯರ್ಥಿಗಳನ್ನು ತಿರಸ್ಕರಿಸಲಾಗುವುದು.

ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Ramanagara District Court has invited application for the post of 12 Peon posts. Interested candidates can apply before 15th february 2019
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+