ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: ಬೋಧಕೇತರ ಹುದ್ದೆಗಳ ನೇಮಕಾತಿ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಬೋಧಕೇತರ ಹುದ್ದೆಗಳನ್ನು ತುಂಬಲು ಹೈದರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಬೋಧಕೇತರ ಹುದ್ದೆಗಳನ್ನು ತುಂಬಲು ಅರ್ಹ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳು ಎಂಟು ಪ್ರತಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೇಮಕಾತಿ

ಹುದ್ದೆಗಳ ವಿವರ

ಉಪ ಕುಲಸಚಿವರು: 01 ಹುದ್ದೆ

ವೇತನ ಶ್ರೇಣಿ: 33,600-53,850/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ. 55% ದೊಂದಿಗೆ ಸ್ನಾತಕೋತ್ತರ ಪದವಿಯನ್ನು ಉತ್ತೀರ್ಣರಾಗಿರತಕ್ಕದ್ದು. ಸರ್ಕಾರಿ ಕಛೇರಿ /ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 10 ವರ್ಷಗಳ ಆಡಳಿತಾತ್ಮಕ ಅನುಭವ ಪಡಿದಿರಬೇಕು/ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ/ಘಟಕ ಮಹಾವಿದ್ಯಾಲಯ/ಅನುದಾನಿತ
ಮಹಾವಿದ್ಯಾಲಯಗಳಲ್ಲಿ ̧ಸಹಾಯಕ ಪ್ರಾಧ್ಯಾಪಕರಾಗಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರಬೇಕು

ವೈದ್ಯಾಧಿಕಾರಿಗಳು: 01 ಹುದ್ದೆ

ವೇತನ ಶ್ರೇಣಿ: 33,600-53,850/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದಿರತಕ್ಕದ್ದು. ಉನ್ನತ ವ್ಯಾಸಂಗ ಹೊಂದಿದವರಿಗೆ ಆಧ್ಯತೆಯನ್ನು ನೀಡಲಾಗುವುದು. ಸರ್ಕಾರಿ ಅಥವಾ ಹೆಸರಾಂತ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ/ವೈದ್ಯಾಧಿಕಾರಿಯಾಗಿ ಕನಿಷ್ಠ 05 ವರ್ಷಗಳ ಅನುಭವ ಹೊಂದಿರತಕ್ಕದ್ದು.

ಸಹಾಯಕ ಕುಲಸಚಿವರು: 01 ಹುದ್ದೆ

ವೇತನ ಶ್ರೇಣಿ: 28,100-50,100/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ. 55% ದೊಂದಿಗೆ ಸ್ನಾತಕೋತ್ತರ ಪದವಿಯನ್ನು ಉತ್ತೀರ್ಣರಾಗಿರತಕ್ಕದ್ದು. ಸರ್ಕಾರಿ ಕಛೇರಿ /ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಆಡಳಿತಾತ್ಮಕ ಅನುಭವ ಪಡಿದಿರಬೇಕು.
ಸಾಮಾನ್ಯ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಸಿಸ್ಟಮ್ ಅಸಿಸ್ಟೆಂಟ್: 01 ಹುದ್ದೆ

ವೇತನ ಶ್ರೇಣಿ: 28,100-50,100/-
ವಿದ್ಯಾರ್ಹತೆ: ಬಿ.ಇ/ಬಿ,ಟೆಕ್ ನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್/ ಇನ್ಫರ್ಮೇಶನ್ ಸೈನ್ಸ್/ಇನ್ಫಾರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ.55% ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು. ಸಾಫ್ಟವೇರ್/ಹಾರ್ಡ್ವೇರ್ ಪ್ರೋಗ್ರಾಮ್ಸ್ಗೆ ಸಂಬಂಧಿಸಿದಂತೆ ಉತ್ತಮ ಜ್ಞಾನ ಹೊಂದಿರಬೇಕು.
ಅಥವಾ
ಎಂ.ಎಸ್ಸಿ (ಕಂಪ್ಯೂಟರ್ ಸೈನ್ಸ್)/ಎಂಸಿಎ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ.55% ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು. ಸಾಫ್ಟವೇರ್/ಹಾರ್ಡ್ವೇರ್ ಪ್ರೋಗ್ರಾಮ್ಸ್ಗೆ ಸಂಬಂಧಿಸಿದಂತೆ ಉತ್ತಮ ಜ್ಞಾನ ಹೊಂದಿರಬೇಕು.

ಎಸ್ಟೇಟ್ ಆಫೀಸರ್:01 ಹುದ್ದೆ

ವೇತನ ಶ್ರೇಣಿ: 22,800-45,200/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸಿವಿಲ್ ಇಂಜಿನಿಯರಿಂಗ್ ಸ್ನಾತಕ ಪದವಿಯಲ್ಲಿ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ.55% ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು. ಕನಿಷ್ಠ 08 ವರ್ಷಗಳ ಸಮಾನಾಂತರ ಹುದ್ದೆಯಲ್ಲಿ ಸೇವಾ ಅನುಭವ ಪಡೆದಿರಬೇಕು.

ಕಛೇರಿ ಅಧೀಕ್ಷಕರು: 01 ಹುದ್ದೆ

ವೇತನ ಶ್ರೇಣಿ: 22,800-43,200/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕ ಪದವಿಯಲ್ಲಿ ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ.55% ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು. ಸರ್ಕಾರಿ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಕನಿಷ್ಠ 03 ವರ್ಷ ಕಡಿಮೆ ಇಲ್ಲದಂತೆ ಕಛೇರಿ ಮೇಲ್ವಿಚಾರಣಾ ಸೇವಾ ಅನುಭವ ಪಡೆದಿರಬೇಕು.

ನರ್ಸ್: 01 ಹುದ್ದೆ

ವೇತನ ಶ್ರೇಣಿ: 21,600-40,050/-
ವಿದ್ಯಾರ್ಹತೆ: ಅಂಗೀಕೃತ ಸಂಸ್ಥೆಯಿಂದ ಮೂರು ವರ್ಷದ ಡಿಪ್ಲೊಮಾ ಇನ್ ನರ್ಸಿಂಗ್ ಕೋರ್ಸ್ ಅನ್ನು ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ.55%ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು.
ಅಥವಾ
ಬಿ.ಎಸ್ಸಿ ನರ್ಸಿಂಗ್ ಅನ್ನು ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ.55%ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು.

ಅದಿಕೃತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯಿಂದ ನರ್ಸ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಪ್ರಮಾಣ ಪತ್ರ ಪಡೆದಿರಬೇಕು.

ಕಂಪೌಂಡರ್ಸ್: 01 ಹುದ್ದೆ

ವೇತನ ಶ್ರೇಣಿ: 17,650-32,000/-
ವಿದ್ಯಾರ್ಹತೆ: ಡಿಪ್ಲೋಮಾ ಇನ್ ಫಾರ್ಮಸಿ ಅಥವಾ ಬಿ.ಎಸ್ಸಿ (ಮೈಕ್ರೊಬಯಾಲಜಿ) ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಿಕ್ಸ್ ವಿಷಯದಲ್ಲಿ ಪಾಸಾಗಿರುವ ಪ್ರಮಾಣಪತ್ರ ಪಡೆದಿರಬೇಕು.

ಫೀಲ್ಡ್ ಕೋಚಿಸ್ ಗಳು: 01 ಹುದ್ದೆ

ವೇತನ ಶ್ರೇಣಿ: 17,650-32,000/-
ವಿದ್ಯಾರ್ಹತೆ: ದೈಹಿಕ ಶಿಕ್ಷಣದಲ್ಲಿ ಸ್ನಾತಕ ಪದವಿಯನ್ನು ಕನಿಷ್ಠ ದ್ವಿತೀಯ ದರ್ಜೆ ಶ್ರೇಣಿಯಲ್ಲಿ ಪ್ರತಿಶತ ಶೇ.55%ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು. ಯೋಗಾಸನ ಕಲಿಕೆಲ್ಲಿ ಅನುಭವ ಹೊಂದಿರಬೇಕು. ಎನ್ಐಸ್ ತರಬೇತಿಯಲ್ಲಿ ನಿರ್ದಿಷ್ಟ ಪಡಿಸಿದ ಕ್ರೀಡಾ ಅನುಭವವನ್ನು ಅವಶ್ಯಕವಾಗಿ ಹೊಂದಿರಬೇಕು.

ಡಿ ದರ್ಜೆ ನೌಕರರು: 06 ಹುದ್ದೆ

ವೇತನ ಶ್ರೇಣಿ: 9600-14500/-
ವಿದ್ಯಾರ್ಹತೆ: 10 ನೇ ತರಗತಿ ಅಥವಾ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ: ರೂ.1,000/- (ಪ.ಜಾ/ಪ.ಪಂ/ಪ್ರವರ್ಗ-1 500/-)

ಅರ್ಜಿ ಸಲ್ಲಿಕೆ

ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ನಿಗದಿತ ಶುಲ್ಕದೊಂದಿಗೆ ಕೊನೆಯ ದಿನಾಂಕದೊಳಗೆ ಸಲ್ಲಿಸುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-01-2018 ರಂದು ಸಂಜೆ 5.00 ಗಂಟೆ ಒಳಗಾಗಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Rani Channamma University recruiting non teaching posts for local cadre. Hyderabad-Karnataka candidates can apply before Jan 30.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+