ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಕ್ಟೋಬರ್ 12,2019ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಹುದ್ದೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ಶೈಕ್ಷಣಿಕ ವಿದ್ಯಾರ್ಹತೆ :
ಸಾಮಾನ್ಯ ನಿಯಮ : ಈ ಎಲ್ಲಾ ಹುದ್ದೆಗಳಿಗೆ ನೇಮಕ ಬಯಸುವವರು ಕನ್ನಡ ಭಾಷೆಯ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು.
- ಉಪ ಕುಲಸಚಿವರು - ಸ್ನಾತಕೋತ್ತರ ಪದವಿ +10 ವರ್ಷಗಳ ಆಡಳಿತಾತ್ಮಕ ಅನುಭವ
- ವೈದ್ಯಾಧಿಕಾರಿಗಳು- ಎಂ.ಬಿ.ಬಿ.ಎಸ್ ಪದವಿ + 5 ವರ್ಷಗಳ ಅನುಭವ
- ಸಹಾಯಕ ಕುಲಸಚಿವರು- ಸ್ನಾತಕೋತ್ತರ ಪದವಿ + 5 ವರ್ಷಗಳ ಆಡಳಿತಾತ್ಮಕ ಅನುಭ
- ಸಿಸ್ಟಮ್ ಅಸಿಸ್ಟೆಂಟ್ - ಬಿ.ಇ /ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ / ಇನ್ಫರ್ಮೇಶನ್ ಸೈನ್ಸ್ /ಇನ್ಫರ್ಮೇಶನ್ ಟೆಕ್ನಾಲಜಿ ಅಥವಾ ಎಂ.ಎಸ್ಸಿ (ಕಂಪ್ಯೂಟರ್ ಸೈನ್ಸ್) / ಎಂ.ಸಿ.ಎ. ಸ್ನಾತಕೋತ್ತರ ಪದವಿ
- ಎಸ್ಟೇಟ್ ಆಫೀಸರ್ - ಸಿವಿಲ್ ಇಂಜಿನಿಯರಿಂಗ್ ಸ್ನಾತಕ ಪದವಿ + 8 ವರ್ಷಗಳ ಸೇವಾ ಅನುಭವ
- ಕಛೇರಿ ಅಧೀಕ್ಷಕರು - ಸ್ನಾತಕ ಪದವಿ + 3 ವರ್ಷಗಳ ಕಛೇರಿ ಮೇಲ್ವಿಚಾರಣಾ ಸೇವಾ ಅನುಭವ
- ನರ್ಸ್ - ಮೂರು ವರ್ಷದ ಡಿಪ್ಲೋಮಾ ಇನ್ ನರ್ಸಿಂಗ್ ಅಥವಾ ಬಿ.ಎಸ್ಸಿ. + 2 ವರ್ಷಗಳ ಪ್ರಾಯೋಗಿಕ ಸೇವಾ ಅನುಭವ
- ಕಂಪೌಂಡರ್ಸ್- ಡಿಪ್ಲೋಮಾ ಇನ್ ಫಾರ್ಮಾಸಿ ಅಥವಾ ಬಿ.ಎಸ್ಸಿ (ಮೈಕ್ರೋಬಯಾಲಜಿ) ಡಿಪ್ಲೋಮಾ ಇನ್ ಮೆಡಿಕಲ್
- ಲ್ಯಾಬೋರೇಟರಿ ಟೆಕ್‌ನಿಕ್ಸ್
- ಫೀಲ್ಡ್ ಕೋಚಿಸ್- ದೈಹಿ ಶಿಕ್ಷಣದಲ್ಲಿ ಸ್ನಾತಕ ಪದವಿ
- ಗ್ರೂಫ್-ಡಿ - 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ
ಖಾಲಿ ಹುದ್ದೆಗಳು ಮತ್ತು ಹುದ್ದೆಗಳಿಗೆ ನೀಡಲಾಗುವ ವೇತನದ ವಿವರ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ವಿವಿಧ ಬೋಧಕೇತಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಖಾಲಿ ಹುದ್ದೆಗಳ ವಿವರ ಮತ್ತು ಹುದ್ದೆಗಳಿಗೆ ನೀಡಲಾಗುವ ವೇತನದ ವಿವರವನ್ನು ಮೇಲಿನ ದೃಶ್ಯದಲ್ಲಿ ತಿಳಿಸಲಾಗಿದೆ.
ವಯೋಮಿತಿ:
ಪ.ಜಾ ಪ.ಪಂ./ಪ್ರವರ್ಗ-1-ಕನಿಷ್ಟ-18 ವರ್ಷ ಮತ್ತು ಗರಿಷ್ಟ 40 ವರ್ಷಗಳು
ಪ್ರವರ್ಗ-2ಎ,2ಬಿ,3ಎ,3ಬಿ- ಕನಿಷ್ಟ 18 ರಿಂದ ಗರಿಷ್ಟ 38 ವರ್ಷಗಳು
ಸಾಮಾನ್ಯ ವರ್ಗ- ಕನಿಷ್ಟ 18 ರಿಂದ ಗರಿಷ್ಟ 35 ವರ್ಷಗಳು
ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ, ಅವನು ಸಶಸ್ತ್ರ ಕೇಂದ್ರದಳದಲ್ಲಿ ಕನಿಷ್ಟ ಮೂರು ವರ್ಷ ಸೇವೆ ಸಲ್ಲಿಸಿರಬೇಕು ಅಂಥವರಿಗೆ ಸೇವಾವಧಿಯ ಆಧಾರದ ಮೇಲೆ ಅವರ ಸೇವಾವಧಿಯೊಂದಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಗೆ ಅವಕಾಶವಿರುತ್ತದೆ. (ಗರಿಷ್ಟ 45 ವರ್ಷ ವಯೋಮಿತಿ).
ಅರ್ಜಿ ಶುಲ್ಕದ ವಿವರ:
ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 1000/-ರೂ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1ರ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಡಿ.ಡಿ ಮೂಲಕ ಪಾವತಿಸಬೇಕಿರುತ್ತದೆ. ಅಂಗವಿಕಲ, ದೃಷ್ಟಿಮಾಂದ್ಯ ಅಭ್ಯರ್ಥಿಗಳು ಶುಲ್ಕದಲ್ಲಿ ಪೂರ್ಣ ವಿನಾಯಿತಿಯನ್ನು ಹೊಂದಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ :
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ http://www.rcub.ac.in/ ಗೆ ಹೋಗಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಅವಶ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಅಕ್ಟೋಬರ್ 12,2019ರ ಸಂಜೆ 5:00 ಗಂಟೆಯ ಒಳಗಾಗಿ ರಿಜಿಸ್ಟರ್ಡ್ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು.
ಕಛೇರಿಯ ವಿಳಾಸ :
ಕುಲಸಚಿವರು,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾಸಂಗಮ,
ಬೆಳಗಾವಿ-591156,
ಕರ್ನಾಟಕ.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











