ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಛೇರಿ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ 54 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 31,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.

ಹುದ್ದೆಗಳ ವಿವರ:
ದಾಖಲಾತಿ ತಜ್ಞರು - 1 ಹುದ್ದೆ
ಹಿರಿಯ ಭೂ ವಿಜ್ಞಾನಿ - 1 ಹುದ್ದೆ
ಸಮಾಲೋಚಕರು - 2 ಹುದ್ದೆಗಳು
ಹಿರಿಯ ಸಮಾಲೋಚಕರು - 2 ಹುದ್ದೆಗಳು
ಕಿರಿಯ ಸಮಾಲೋಚಕರು - 1 ಹುದ್ದೆ
ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ - 5 ಹುದ್ದೆಗಳು
ಸಪೋರ್ಟ್ ಇಂಜಿನಿಯರ್ - 4 ಹುದ್ದೆಗಳು
ಡೇಟಾ ಎಂಟ್ರಿ ಆಪರೇಟರ್ - 2 ಹುದ್ದೆಗಳು
ಜಿಲ್ಲಾ ಯೋಜನಾ ವ್ಯವಸ್ಥಾಪಕ - 8 ಹುದ್ದೆಗಳು
ಜಿಲ್ಲಾ ಎಂಐಎಸ್ ಸಮಾಲೋಚಕರು - 16 ಹುದ್ದೆಗಳು
ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು - 1 ಹುದ್ದೆ
ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು - 7 ಹುದ್ದೆಗಳು
ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು - 2 ಹುದ್ದೆಗಳು
ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ-ಸಮಾಲೋಚಕರು - 2 ಹುದ್ದೆಗಳು
ಒಟ್ಟು - 54 ಹುದ್ದೆಗಳು
ವಿದ್ಯಾರ್ಹತೆ:
ಪದವಿ, ಪಿಯುಸಿ ಮತ್ತು ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್ /ಸಂಸ್ಥೆ / ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ನೇಮಕಾತಿ ಬಗೆಗಿನ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷಗಳು ಮೀರಿರಬಾರದು.
ವೇತನದ ವಿವರ:
ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 22,000/- ರಿಂದ 60,000/-ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ, ಅವರುಗಳಿಗೆ ಮಾತ್ರ ದೂರವಾಣಿ ಮುಖಾಂತರ ತಿಳಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಕೇಂದ್ರ ಕಛೇರಿ ಅಥವಾ ಆಯಾ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಹಾಜರಾಗುವುದು ಹಾಗೂ ಸಂದರ್ಶನದಲ್ಲಿ ಆಯ್ಕೆಯಾದ ಕೆಲವು ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಪರೀಕ್ಷೆ ಹಾಜರಾಗವುದು.
ಅರ್ಜಿ ಸಲ್ಲಿಕೆ:
ಆಸಕ್ತು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://rdpr.karnataka.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು, ರೆಸ್ಯುಮೆ ಹಾಗೂ ಅರ್ಜಿ ಜೊತೆಗೆ 'ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತನಾಗಿದ್ದೇನೆ' ಎಂಬುದರ ಬಗ್ಗೆ ಒಂದು ಪುಟದಲ್ಲಿ ಟಿಪ್ಪಣಿ ಬರೆದು ಅರ್ಜಿಯನ್ನು ಕಛೇರಿಯ ವಿಳಾಸಕ್ಕೆ ಆಗಸ್ಟ್ 31,2020ರ ಸಂಜೆ 5:30ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಕಚೇರಿಯ ವಿಳಾಸ:
ಆಯುಕ್ತರು,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,
2ನೇ ಮಹಡಿ, ಕೆ.ಹೆಚ್.ಬಿ ಕಟ್ಟಡ,
ಕಾವೇರಿ ಭವನ,
ಕೆ.ಜಿ. ರಸ್ತೆ,
ಬೆಂಗಳೂರು - 560009
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











