RDPR Karnataka Recruitment 2020: ವಿವಿಧ 37 ಹುದ್ದೆಗಳಿಗೆ ಅರ್ಜಿ ಆಹ್ವಾನ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಟಾನಗೊಳಿಸಲಾಗುತ್ತಿರುವ ಕ್ಲಸ್ಟರ್ ಫೆಸಿಲಿಟೇಶನ್ ಪ್ರಾಜೆಕ್ಟ್ ಅಡಿಯಲ್ಲಿ 5 ಬ್ಲಾಕ್ ಜಿಐಎಸ್ ಕೋ-ಆರ್ಡಿನೇಟರ್, 16 ಬ್ಲಾಕ್ ಎನ್‌ಆರ್ ಎಂ ಎಕ್ಸ್ ಪರ್ಟ್ ಮತ್ತು 16 ಬ್ಲಾಕ್ ಲೈವ್ಲಿಹುಡ್ ಎಕ್ಸ್ ಪರ್ಟ್ ಒಟ್ಟು 37 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸೆ.21,2020ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ:

ಬ್ಲಾಕ್ ಜಿಐಎಸ್ ಕೋ-ಆರ್ಡಿನೇಟರ್ ಹುದ್ದೆಗಳಿಗೆ ಎಂ.ಟೆಕ್/ಎಂ.ಇ/ಎಂ.ಎಸ್ಸಿ, ಬ್ಲಾಕ್ ಎನ್‌ಆರ್ ಎಂ ಎಕ್ಸ್ ಪರ್ಟ್ ಹುದ್ದೆಗಳಿಗೆ ಬಿ.ಟೆಕ್ /ಡಿಪ್ಲೋಮಾ ಮತ್ತು ಬ್ಲಾಕ್ ಲೈವ್ಲಿಹುಡ್ ಎಕ್ಸ್ ಪರ್ಟ್ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
* ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
* ಕನ್ನಡ ಮತ್ತು ಇಂಗ್ಲೀಷ್ ಭಾಷೆ ಚೆನ್ನಾಗಿ ತಿಳಿದಿರಬೇಕು

ವಯೋಮಿತಿ:

ಈ ಹುದ್ದೆಗಳಿಗೆ ಕನಿಷ್ಟ 21 ರಿಂದ ಗರಿಷ್ಟ 4೫ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಬ್ಲಾಕ್ ಜಿಐಎಸ್ ಕೋ-ಆರ್ಡಿನೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/-ರೂ, ಬ್ಲಾಕ್ ಎನ್‌ಆರ್ ಎಂ ಎಕ್ಸ್ ಪರ್ಟ್ ಹುದ್ದೆಗಳಿಗೆ ಮತ್ತು ಬ್ಲಾಕ್ ಲೈವ್ಲಿಹುಡ್ ಎಕ್ಸ್ ಪರ್ಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ನಿಗದಿತ ವಿದ್ಯಾರ್ಹತೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಅನುಭವವುಳ್ಳ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನೇರವಾಗಿ ನೇಮಕಾತಿ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ ?:

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್ಸೈಟ್ https://rdpr.karnataka.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಇಲ್ಲಿರುವ ಲಿಂಕ್ ಬಳಸಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವುದು. www.mgnregakarnataka.com/jobs ಹಾಗೂ ಅರ್ಜಿ ನಮೂನೆಯನ್ನು ಸ್ಪಷ್ಟವಾಗಿ ಭರ್ತಿ ಮಾಡಿ ತಮ್ಮ ಸಹಿಯೊಂದಿಗೆ ಆಯುಕ್ತಾಲಯದ ಇ-ಮೇಲ್ ಗೂ ಕೂಡ ಕಳುಹಿಸುವುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 21 ಕೊನೆಯ ದಿನವಾಗಿರುತ್ತದೆ.
ಸಂಪರ್ಕ ಸಂಖ್ಯೆ: 080-22342163
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಪ್ರಕಟಣೆಯನ್ನು ಓದಲು ಮುಂದೆ ನೋಡಿ

More News  

For Quick Alerts
ALLOW NOTIFICATIONS  
For Daily Alerts

English summary
Rural development and panchayat raj department karnataka recruitment 2020 notification has been released for 37 various posts. Interested candidates can apply through online before september 21.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+