ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ 984 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ

ಭಾರತ ಸರ್ಕಾರದ ಪ್ರಮುಖ ವಿಮಾ ಕಂಪನಿಗಳಲ್ಲಿ ಒಂದಾದ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ 984 ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತ ಸರ್ಕಾರದ ಪ್ರಮುಖ ವಿಮಾ ಕಂಪನಿಗಳಲ್ಲಿ ಒಂದಾದ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ 984 ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ದೇಶಾದ್ಯಂತ ಖಾಲಿ ಇರುವ ಹುದ್ದೆಗಳನ್ನು ರಾಜ್ಯವಾರು ವಿಂಗಡಿಸಿದ್ದು ಕರ್ನಾಟಕದಲ್ಲಿ 66 ಹುದ್ದೆಗಳು ಖಾಲಿ ಇವೆ.

ಕರ್ನಾಟಕ ರಾಜ್ಯಕ್ಕೆ ಮೀಸಲಿರಿಸಿರುವ ಹುದ್ದೆಗಳ ವಿವರ

ಎಸ್.ಸಿ-09
ಎಸ್.ಟಿ-04
ಒಬಿಸಿ-18
ಸಾಮಾನ್ಯ-35
ಒಟ್ಟು-66

984 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ

ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದವರು ಅರ್ಜಿ ಸಲ್ಲಿಸಬಹುದು. ಆದರೆ ಎಸ್ ಎಸ್ ಎಲ್ ಸಿ/ ಇಂಟರ್ ಮೀಡಿಯೇಟ್ ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವನ್ನಾಗಿ ಆಯ್ದುಕೊಂಡಿರಬೇಕು. ಪದವಿಯನ್ನು ಜೂನ್ 30,2016 ರ ಮೊದಲು ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ರಾಜ್ಯದ ಭಾಷೆಯನ್ನು ಓದಲು ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಹೀಗಾಗಿ ಕರ್ನಾಟಕದಲ್ಲಿನ ಹುದ್ದೆಗಳಿಗೆ ಕನ್ನಡ ಬಲ್ಲವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

ವೇತನ ಶ್ರೇಣಿ

ರೂ.14,435 -40,080 /-

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷವನ್ನು ಪೂರ್ಣಗೊಳಿಸಿರಬೇಕು ಹಾಗೂ ಗರಿಷ್ಠ 30 ವರ್ಷವನ್ನು ಮೀರಿರಬಾರದು.

ವಯೋಮಿತಿಯಲ್ಲಿ ಸಡಿಲಿಕೆ

ಎಸ್.ಟಿ/ ಎಸ್.ಸಿ ಅಭ್ಯರ್ಥಿಗಳಿಗೆ ಐದು ವರ್ಷ, ಒ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆಯನ್ನು ನೀಡಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷಾ ವಿವರ

ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರಾಥಮಿಕ ಪರೀಕ್ಷೆ
ಒಟ್ಟು ನೂರು ಅಂಕಗಳ ಈ ಪರೀಕ್ಷೆಯು ನೂರು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.ಉತ್ತರಿಸಲು 60 ನಿಮಿಷಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ಪತ್ರಿಕೆಯು ಇಂಗ್ಲಿಷ್, ರೀಸನಿಂಗ್, ಮತ್ತು ನ್ಯುಮೆರಿಕ್ ಎಬಿಲಿಟಿ ವಿಷಯಗಳನ್ನು ಒಳಗೊಂಡಿರುತ್ತದೆ.

ಮುಖ್ಯ ಪರೀಕ್ಷೆ
ಒಟ್ಟು 200 ಅಂಕಗಳ ಈ ಪರೀಕ್ಷೆಯು 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಉತ್ತರಿಸಲು 120 ನಿಮಿಷಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ಪತ್ರಿಕೆಯು ಇಂಗ್ಲಿಷ್, ರೀಸನಿಂಗ್, ಜನರಲ್ ಅವೇರ್ನೆಸ್, ಕಂಪ್ಯೂಟರ್ ಲ್ಯಾಂಗ್ವೇಜ್ ಮತ್ತು ನ್ಯುಮೆರಿಕ್ ಎಬಿಲಿಟಿ ವಿಷಯಗಳನ್ನು ಒಳಗೊಂಡಿರುತ್ತದೆ.

ತಾತ್ಕಲಿಕ ಪರೀಕ್ಷಾ ದಿನಾಂಕ

ಪ್ರಾಥಮಿಕ ಪರೀಕ್ಷೆ: 22,23 ಏಪ್ರಿಲ್ 2017
ಮುಖ್ಯ ಪರೀಕ್ಷೆ: 23 ಮೇ 2017
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.500 /-
(ಎಸ್.ಸಿ/ಎಸ್.ಟಿ/ಮಹಿಳಾ ಅಭ್ಯರ್ಥಿಗಳಿಗೆ/ ಎಕ್ಸ್ ಸರ್ವೀಸ್ ಅಭ್ಯರ್ಥಿಗಳಿಗೆ ರೂ.50 /-)

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಗಳನ್ನು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ವೆಬ್ಸೈಟ್ ನಲ್ಲಿ ಆನ್-ಲೈನ್ ಮೂಲಕ ಸಲ್ಲಿಸುಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-03-2017

ಸೂಚನೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ದಿನಾಂಕಕ್ಕೂ ಹತ್ತು ದಿನ ಮುಂಚಿತವಾಗಿ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ: www.newindia.co.in

More News  

For Quick Alerts
ALLOW NOTIFICATIONS  
For Daily Alerts

English summary
The NewIndiaAssurance Company Ltd., a leading Public Sector General Insurance Company and wholly owned by Government of India, invites applications from eligible Indian Citizens for recruitment of 984 assistants in Class III cadre from open market
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+