ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ: 147 ಜೂನಿಯರ್ ಅಸಿಸ್ಟೆಂಟ್ ನೇಮಕಾತಿ

ದಕ್ಷಿಣ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಖಾಲಿಯಿರುವ ಜೂನಿಯರ್ ಅಸಿಸ್ಟೆಂಟ್ (ಫೈರ್ ಸರ್ವಿಸ್) ಹುದ್ದೆಯ ನೇಮಕಾತಿಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದಕ್ಷಿಣ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಖಾಲಿಯಿರುವ ಜೂನಿಯರ್ ಅಸಿಸ್ಟೆಂಟ್ (ಫೈರ್ ಸರ್ವಿಸ್) ಹುದ್ದೆಯ ನೇಮಕಾತಿಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 147 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಜೂನಿಯರ್ ಅಸಿಸ್ಟೆಂಟ್ ನೇಮಕಾತಿ

ಹುದ್ದೆಯ ವಿವರ

ಹುದ್ದೆ ಹೆಸರು :ಜೂನಿಯರ್ ಅಸಿಸ್ಟೆಂಟ್
ಎಸ್.ಸಿ -23
ಎಸ್.ಟಿ -21
ಒಬಿಸಿ -11
ಸಾಮಾನ್ಯ-92
ಒಟ್ಟು -147

ವೇತನ ಶ್ರೇಣಿ

ರೂ.12500 -28500 /-

ಅರ್ಹತೆ

  • ಕನಿಷ್ಠ ಸರಾಸರಿ ೫೦% ಅಂಕಗಳೊಂದಿಗೆ ಮೆಕ್ಯಾನಿಕಲ್ / ಆಟೋಮೊಬೈಲ್ / ಫೈರ್ ವಿಷಯದಲ್ಲಿ ಡಿಪ್ಲೋಮ ಪಡೆದಿರಬೇಕು ಅಥವಾ ಕನಿಷ್ಠ ಸರಾಸರಿ 50% ಅಂಕಗಳೊಂದಿಗೆ ದ್ವಿತೀಯ ತೇರ್ಗಡೆಯಾಗಿರಬೇಕು.
  • ವಿದ್ಯಾರ್ಹತೆ ಜೊತೆಗೆ ಚಾಲ್ತಿಯಲ್ಲಿರುವ ಭಾರಿ ವಾಹನ ಚಲನ ಪರವಾನಗಿ ಅಥವಾ 31 -03 -2016 ಕ್ಕೆ ಮುಂಚಿತವಾಗಿ ಪಡೆದ ಲಘು ವಾಹನ ಚಾಲನ ಪರವಾನಗಿ ಹೊಂದಿರಬೇಕು.
  • ಲಘು ವಾಹನ ಚಾಲನ ಪರವಾನಗಿ ಉಳ್ಳ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾದಾಗ ಡ್ರೈವಿಂಗ್ ಟೆಸ್ಟ್ ನಡೆಸುವುದಕ್ಕಿಂತ ಮುಂಚಿತವಾಗಿ ಭಾರಿ ವಾಹನ ಚಾಲನ ಪರವಾನಗಿ ಪಡೆದು ಹಾಜರು ಪಡಿಸುವುದಾಗಿ ದೃಢೀಕರಿಸಿ ಬರೆದುಕೊಡಬೇಕು.

ಸೂಚನೆ

ದ್ವಿತೀಯ ಪಿಯುಸಿಯಲ್ಲಿ ಕಂಪ್ಯೂಟರ್ ಕೋರ್ಸ್ ಅಭ್ಯಾಸ ಮಾಡಿದ ಅಥವಾ ಎನ್ಸಿಸಿ ಸರ್ಟಿಫಿಕೇಟ್ ಹೊಂದಿದ ಅಥವಾ ಫೈರ್ ಫೈಟಿಂಗ್ ಟ್ರೈನಿಂಗ್ ಕೋರ್ಸ್ ಪೂರೈಸಿದ ಅಥವಾ ನ್ಯಾಷನಲ್ ಫೈರ್ ಸರ್ವಿಸ್ ಕಾಲೇಜ್ ನಿಂದ ಸಬ್ ಫೈರ್ ಆಫೀಸರ್ ಕೋರ್ಸ್ ಪೂರೈಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ವಯೋಮಿತಿ

31 -03 -2017 ರಂತೆ 30 ವರ್ಷ ಮೀರಿರಬಾರದು.
ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ - 05 ವರ್ಷ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳಿಗೆ -03 ವರ್ಷ ಸಡಿಲಿಕೆ

ದೈಹಿಕ ಅರ್ಹತೆ

  • ಅಭ್ಯರ್ಥಿ ಕನಿಷ್ಠ 167 ಸೆ.ಮೀ ಎತ್ತರ, 81 ಸೆ.ಮೀ ಎದೆ ಸುತ್ತಳತೆ (ಹಿಗ್ಗಿಸಿದ), 5 ಸೆ.ಮೀ ಎದೆ ಹಿಗ್ಗಿಸುವಿಕ ಸಾಮರ್ಥ್ಯ, ಕನಿಷ್ಠ 55 ಕೆಜಿ ತೂಕ ಹೊಂದಿರಬೇಕು. ಉತ್ತಮ ದೃಷ್ಟಿ ಸಾಮರ್ಥ್ಯ ಹೊಂದಿರುವುದು ಕಡ್ಡಾಯವಾಗಿರುತ್ತದೆ.
  • ಅಗ್ನಿ ಅನಾಹುತ ನಿರ್ವಹಣೆಗೆ ಅಡ್ಡಿಯಾಗುವಂತಹ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿರಬಾರದು. ಅಲ್ಲದೆ ಚಪ್ಪಟೆ ಪಾದ, ತಾಗುಮಂಡಿ, ಮೆಳ್ಳಗಣ್ಣು, ಬಾಗಿದ ಕಾಲು, ಇರುಳಾಂದತೆ, ವರ್ಣಾಂದತೆ, ದೈಹಿಕ ನ್ಯೂನತೆ ಇರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಅರ್ಜಿ ಶುಲ್ಕ

ರೂ.100 /- (ಎಸ್.ಸಿ/ಎಸ್.ಟಿ/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ )
ನಿಗದಿತ ಮೊತ್ತದ ಡಿಡಿಯನ್ನು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಇವರಿಗೆ ಉದ್ದೇಶಿಸಿ ಚೆನ್ನೈನಲ್ಲಿ ಸಂದಾಯವಾಗುವಂತೆ ಪಡೆದು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು. ಡಿಡಿ ಹಿಂಬದಿಯಲ್ಲಿ ಅಭ್ಯರ್ಥಿಯ ಹೆಸರು ದಪ್ಪಕ್ಷರದಲ್ಲಿ ಬರೆದಿರಬೇಕು.

ನೇಮಕಾತಿ ವಿಧಾನ

ಅರ್ಜಿಗಳನ್ನು ಪ್ರಾಥಮಿಕ ಪರಿಶೀಲನೆಯ ನಂತರ ಅರ್ಹರಾದ ಎಲ್ಲಾ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಆಯೋಜಿಸಲಾಗುವುದು. ಇದರಲ್ಲಿ ಆಯ್ಕೆಯಾದವರಿಗೆ ಮುಂದಿನ ಹಂತವಾಗಿ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗು ಚಾಲನಾ ವೃತ್ತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಂತಿಮವಾಗಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ತಿಂಗಳ ಕಾಲಾವಧಿಯ 'ಬೇಸಿಕ್ ಟ್ರೈನಿಂಗ್ ಕೋರ್ಸ್' ನೀಡಲಾಗುವುದು. ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದ ನಂತರವಷ್ಟೇ ಅವರನ್ನು ಹುದ್ದೆಗೆ ಖಾಯಂಗೊಳಿಸಲಾಗುವುದು.

ಪರೀಕ್ಷಾ ಕೇಂದ್ರ

ಮಂಗಳೂರು, ಹೈದರಾಬಾದ್, ತ್ರಿಚಿ, ತ್ರಿವೇಂದ್ರಮ್, ಅಗತ್ತಿ.

ಅರ್ಜಿ ಸಲ್ಲಿಕೆ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು http://www.aai.aero/public_notices/aaisite_test/main_new.jsp ವೆಬ್ಸೈಟ್ ಮೂಲಕ ಅರ್ಜಿ ಡೌನ್ಲೋಡ್ ಮಾಡಿಕೊಂಡು ತಮ್ಮ ಸ್ವಂತ ಕೈಬರಹದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಭರ್ತಿ ಮಾಡಿದ ನಂತರ ಶುಲ್ಕದ ಡಿಡಿ, ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಫೋಟೋ, ವಿದ್ಯಾರ್ಹತೆ ,ಜನ್ಮದಿನಾಂಕ , ಡ್ರೈವಿಂಗ್ ಲೈಸನ್ಸ್, ಜಾತಿ ಪ್ರಮಾಣ ಪತ್ರಗಳ ದೃಢೀಕೃತ ನಕಲು ಪ್ರತಿಗಳನ್ನು ಲಗತ್ತಿಸಿ ಕಳುಹಿಸಬೇಕು.
ಲಕೋಟೆಯ ಮೇಲ್ಭಾಗದಲ್ಲಿ Application for the post of Junior Assistant (Fire Service) ಎಂದು ಬರೆಯಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ
HE REGIONAL EXECUTIVE
DIRECTOR,
Airports Authority of India, Southern Region, Chennai - 600 027

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 -03 -2017

More News  

For Quick Alerts
ALLOW NOTIFICATIONS  
For Daily Alerts

English summary
Applications are invited from the eligible candidates to fill up the post of Junior Assistant
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+