ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಕೊಪ್ಪಳ ಜಿಲ್ಲೆಯಲ್ಲಿ ವರ್ಗೀಕರಣ ಮತ್ತು ಮಿಸಲಾತಿ ಅನ್ವಯ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಮುಂಬಡ್ತಿ, ವರ್ಗಾವಣೆ ಇನ್ನಿತರೆ ಕಾರಣಗಳಿಂದ 34 ಗ್ರಾಮ ಲೆಕ್ಕಿಗರು ತೆರವಾಗಿದ್ದು, ಖಾಲಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ಗ್ರಾಮ ಲೆಕ್ಕಿಗ: 34 ಹುದ್ದೆಗಳು
ವೇತನ ಶ್ರೇಣಿ: ರೂ.11600-21000/-
ಶೈಕ್ಷಣಿಕ ವಿದ್ಯಾರ್ಹತೆ
- ಕರ್ನಾಟಕ ಪಿಯು ಬೋರ್ಡ್ ನಡೆಸುವ ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್ಇ ಅಥವಾ ಐಸಿಎಸ್ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ದೂರ ಶಿಕ್ಷಣದ ಮೂಲಕ ಪಿಯುಸಿ ಅಥವಾ ಸಮಾನಂತರ ವಿದ್ಯಾರ್ಹತೆ ಹೊಂದಿರುವವರು ಅರ್ಹರಿರುವುದಿಲ್ಲ. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 35 ವರ್ಷಗಳು. (ಒಬಿಸಿ ವರ್ಗದವರಿಗೆ ಮೂರು ವರ್ಷ ಮತ್ತು ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ಐದು ವರ್ಷಗಳ ಸಡಿಲಿಕೆ ಇದೆ)
ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ.
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳಿಗೆ ರೂ.400/-
- ಒಬಿಸಿ ಅಭ್ಯರ್ಥಿಗಳಿಗೆ ರೂ.300/-
- ಎಸ್.ಸಿ/ಎಸ್.ಟಿ/ಪ್ರ-1/ಮಹಿಳಾ ಅಭ್ಯರ್ತಿಗಳಿಗೆ ರೂ ರೂ.200/-
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಪಿಯುಸಿ ಅಥವಾ ಸಿಬಿಎಸ್ಇ ಅಥವಾ ಐಸಿಎಸ್ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾಯ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 10-10-2017
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-11-2017
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08539-221690
ಹೆಚ್ಚಿನ ಮಾಹಿತಿಗಾಗಿ koppal-va.kar.nic.in ಗಮನಿಸಿ