ಕೊಡಗು ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 16ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಕೊಡಗು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ 16 ಗ್ರಾಮಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ದಿನಾಂಕ ಫೆಬ್ರವರಿ 15, 2019ರ ಸಂಜೆ 5:30ರೊಳಗಾಗಿ ಸಲ್ಲಿಸತಕ್ಕದ್ದು.

ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಗ್ರಾಮಲೆಕ್ಕಿಗ
Organisation ಕಂದಾಯ ಇಲಾಖೆ
Educational Qualification 12ನೇ ತರಗತಿ / ದ್ವಿತೀಯ ಪಿಯುಸಿ
Job Location ಕೊಡಗು
Salary Scale 21,400/- ರಿಂದ 42,000/-ರೂ ವೇತನ
Application Start Date January 15, 2019
Application End Date February 14, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್ ಇ ಅಥವಾ ಐಸಿಎಸ್ ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಗಣಕಯಂತ್ರ ಜ್ಞಾನ ಹೊಂದಿರಬೇಕು. ಈ ವಿದ್ಯಾರ್ಹತೆ ಹೊರತುಪಡಿಸಿ ಇನ್ನಿತರೆ ಯಾವುದೇ ತತ್ಸಮಾನ ವಿದ್ಯಾರ್ಹತೆಗಳನ್ನು ಪರಿಗಣಿಸಲಾಗುವುದಿಲ್ಲ.

ವಯೋಮಿತಿ:

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವಾದ ಫೆಬ್ರವರಿ 15, 2019ಕ್ಕೆ ಈ ಕೆಳಗಿನ ವಯೋಮಿತಿ ಹೊಂದಿರತಕ್ಕದ್ದು.

ಕನಿಷ್ಟ ಗರಿಷ್ಟ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 18 40
ಪ್ರವರ್ಗ-2A,2B,3A,3B 18 38
ಸಾಮಾನ್ಯ ವರ್ಗದವರಿಗೆ 18 35

ವಯೋಮಿತಿ ಸಡಿಲಿಕೆಯ ಮಾಹಿತಿಯ ಕುರಿತು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.

ಖಾಲಿ ಹುದ್ದೆಗಳ ವಿವರ:

1 ಖಾಲಿ ಇರುವ ಹೊಸ ಹುದ್ದೆಗಳು =14
2 ಬ್ಯಾಕ್ ಲಾಗ್ ಹುದ್ದೆಗಳು = 2

ಹುದ್ದೆಗಳ ವರ್ಗೀಕರಣ:

ಪ್ರವರ್ಗಇತರೆ ಅಭ್ಯರ್ಥಿಮಹಿಳಾ ಅಭ್ಯರ್ಥಿಗ್ರಾಮೀಣ ಅಭ್ಯರ್ಥಿಮಾಜಿ ಸೈನಿಕಕನ್ನಡ ಮಾಧ್ಯಮ ಒಟ್ಟು
(O)(W )(R) (XMP)(KM)
ಪರಿಶಿಷ್ಟ ಜಾತಿ 1 1 1 3
ಪರಿಶಿಷ್ಟ ಪಂಗಡ 1 1
ಪ್ರವರ್ಗ1 1 1
ಪ್ರವರ್ಗ2A 1 1
ಪ್ರವರ್ಗ2B 1 1 2
ಪ್ರವರ್ಗ3A
ಪ್ರವರ್ಗ3B
ಸಾಮಾನ್ಯ ಅಭ್ಯರ್ಥಿ 2 2 2 1 1 8
ಒಟ್ಟು 4 4 4 3 1 16

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.21,400/- ರಿಂದ 42,000/-ರೂ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್ ಸಿ ಅಥವಾ ಐಸಿಎಸ್ ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆರೂ.250.00/-
ಸಾಮಾನ್ಯ ವರ್ಗ,2A,2B,3A,3B ವರ್ಗದ ಅಭ್ಯರ್ಥಿಗಳಿಗೆರೂ.500.00/-

ಕಂಪ್ಯೂಟರ್ ನಲ್ಲಿ ಮುದ್ರಿಸಿದ ಚಲನ್ ನಂತೆ ಅರ್ಜಿ ಶುಲ್ಕವನ್ನು ಯಾವುದಾದರೂ ಕಾರ್ಪೋರೇಶನ್ ಬ್ಯಾಂಕಿನಲ್ಲಿ A/C No.000700101026358 ಕಾರ್ಪೋರೇಶನ್ ಬ್ಯಾಂಕ್, ಮಡಿಕೇರಿ ಶಾಖೆ ( IFSC CODE: CORP0000007) ಖಾತೆಗೆ ಪಾವತಿಸಿ, ಸ್ವೀಕೃತಿಯನ್ನು ಪಡೆಯಬೇಕು. ಪಾವತಿ ಮಾಡಿದ ಚಲನ್ ಕೌಂಟರ್ ಫೈಲನ್ನು ಸ್ಕ್ಯಾನ್ ಮಾಡಿ ಇದೇ ವೆಬ್ ಸೈಟ್ ನಲ್ಲಿ ಚಲನ್ ಸಂಖ್ಯೆ. ದಿನಾಂಕಗಳೊಂದಿಗೆ ಅಪ್ ಲೋಡ್ ಮಾಡುವುದು. ಅಭ್ಯರ್ಥಿಗಳು ಸ್ವೀಕೃತಿ ಸ್ಲಿಪ್ ಅನ್ನು ಮತ್ತು ಚಲನ್ ಪಾವತಿಯ ಒಂದು ಪ್ರತಿಯನ್ನು ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳತಕ್ಕದ್ದು. ಇನ್ನೊಂದು ಚಲನ್ ಪ್ರತಿ ಬ್ಯಾಂಕ್ ಬಳಿ ಇರುತ್ತದೆ. ಈ ದಾಖಲೆಗಳನ್ನು ನಿಗಧಿಪಡಿಸಿದ ದಿನಾಂಕದಂದು ಹಾಜರುಪಡಿಸತಕ್ಕದ್ದು.ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಫೆಬ್ರವರಿ 16,2019ಕೊನೆಯ ದಿನವಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್ ಸೈಟ್ http://kodagu-va.kar.nic.in/ ತೆರೆದು ಕಂಪ್ಯೂಟರ್ ಪರದೆಯ ಮೇಲೆ ಅರ್ಜಿಯನ್ನು ತುಂಬಬೇಕು ಹಾಗೂ ಇತ್ತೀಚಿನ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು. ನಂತರ ಅಭ್ಯರ್ಥಿಯು submit button ಅನ್ನು ಒತ್ತಿದರೆ ಅರ್ಜಿ ಸಂಖ್ಯೆ (Reference Number) ಸೃಷ್ಟಿಯಾಗುತ್ತದೆ. ಆನ್ ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ (Acknowledgement slip) ಮತ್ತು ದ್ವಿ ಪ್ರತಿ ಚಲನ್ ಅನ್ನು ತೆಗೆದುಕೊಳ್ಳತಕ್ಕದ್ದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Revenue Department of karnataka government kodagu district has invited applications for the 16 village accountant posts.Interested candidates can apply through online before 15th february 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X