ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 20 ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಯಾದಗಿರಿ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ 20 ಗ್ರಾಮಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ದಿನಾಂಕ ಫೆಬ್ರವರಿ 19, 2019ರೊಳಗಾಗಿ ಸಲ್ಲಿಸತಕ್ಕದ್ದು.

ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ

 

CRITERIA DETAILS
Name Of The Posts ಗ್ರಾಮಲೆಕ್ಕಿಗ
Organisation ಕಂದಾಯ ಇಲಾಖೆ
Educational Qualification 12ನೇ ತರಗತಿ / ದ್ವಿತೀಯ ಪಿಯುಸಿ
Job Location ಯಾದಗಿರಿ
Salary Scale ರೂ.21,400/- ರಿಂದ 42,000/-ರೂ ವೇತನ
Application Start Date January 18, 2019
Application End Date February 19, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್ ಇ ಅಥವಾ ಐಸಿಎಸ್ ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಈ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರತಕ್ಕದ್ದು. ಈ ವಿದ್ಯಾರ್ಹತೆ ಹೊರತುಪಡಿಸಿ ಇನ್ನಿತರ ಯಾವುದೇ ತತ್ಸಮಾನ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ. ಆಯ್ಕೆಗೊಂಡ ಅಭ್ಯರ್ಥಿಗಳ ವಿದ್ಯಾರ್ಹತೆಯ ದಾಖಲಾತಿಗಳ ನೈಜತೆ ಬಗ್ಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ದೃಡಪಡಿಸಿಕೊಂಡ ನಂತರ ನೇಮಕಾತಿ ಆದೇಶ ನೀಡಲಾಗುವುದು.

ಹುದ್ದೆಗಳ ವರ್ಗೀಕರಣ:

ಹೈದ್ರಾಬಾದ್ -ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳ ಕೈತಪ್ಪಿಹೋದ ರೋಷ್ಟರ್ ಬಿಂದುಗಳ ಹುದ್ದೆಗಳು- 3(ಬ್ಯಾಕ್ ಲಾಗ್)

ವರ್ಗೀಕರಣದ ವಿವರಸಾಮಾನ್ಯ ಅಭ್ಯರ್ಥಿಮಹಿಳಾ ಅಭ್ಯರ್ಥಿಗ್ರಾಮೀಣ ಅಭ್ಯರ್ಥಿ ಅಂಗವಿಕಲ ಅಭ್ಯರ್ಥಿಮಾಜಿ ಸೈನಿಕರುಕನ್ನಡ ಮಾಧ್ಯಮ ಅಭ್ಯರ್ಥಿ ಯೋಜನಾ ನಿರಾಶ್ರಿತರು ಒಟ್ಟು
ಸಾಮಾನ್ಯ111 3
ಒಟ್ಟು1 11 3

 

ರೋಸ್ಟರ್ ಬಿಂದು 16 ರಿಂದ ಪ್ರಾರಂಭಿಸಲಾಗಿದೆ (ಒಟ್ಟು 17 ಹುದ್ದೆಗಳು)

ವರ್ಗೀಕರಣದ ವಿವರಸಾಮಾನ್ಯ ಅಭ್ಯರ್ಥಿ ಮಹಿಳಾ ಅಭ್ಯರ್ಥಿಗ್ರಾಮೀಣ ಅಭ್ಯರ್ಥಿಅಂಗವಿಕಲ ಅಭ್ಯರ್ಥಿಮಾಜಿ ಸೈನಿಕಕನ್ನಡ ಮಾಧ್ಯಮಯೋಜನಾ ನಿರಾಶ್ರಿತರು ಒಟ್ಟು
ಪ್ರವರ್ಗ11 1
ಪ್ರವರ್ಗ2A111 3
ಪ್ರವರ್ಗ2B
ಪ್ರವರ್ಗ3A 1 1
ಪ್ರವರ್ಗ3B
ಪರಿಶಿಷ್ಟ ಜಾತಿ111 3
ಪರಿಶಿಷ್ಟ ಪಂಗಡ
ಸಾಮಾನ್ಯ ಅಭ್ಯರ್ಥಿ232 119
ಒಟ್ಟು564 1117

ವಯೋಮಿತಿ:

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವಾದ ಫೆಬ್ರವರಿ 19, 2019ಕ್ಕೆ ಈ ಕೆಳಗಿನ ವಯೋಮಿತಿ ಹೊಂದಿರತಕ್ಕದ್ದು.

ಕನಿಷ್ಟ ಗರಿಷ್ಟ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 18 40
ಪ್ರವರ್ಗ-2A,2B,3A,3B 18 38
ಸಾಮಾನ್ಯ ವರ್ಗದವರಿಗೆ 18 35

ವಯೋಮಿತಿ ಸಡಿಲಿಕೆಯ ಮಾಹಿತಿಯ ಕುರಿತು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.21,400/- ರಿಂದ 42,000/-ರೂ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್ ಸಿ ಅಥವಾ ಐಸಿಎಸ್ ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆರೂ.200/-
2A,2B,3A,3B ವರ್ಗದ ಅಭ್ಯರ್ಥಿಗಳಿಗೆರೂ.300/-
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆರೂ.400/-

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಫೆಬ್ರವರಿ 19,2019ಕೊನೆಯ ದಿನವಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್ ಸೈಟ್ http://yadgir-va.kar.nic.in/ ತೆರೆದು ಕಂಪ್ಯೂಟರ್ ಪರದೆಯ ಮೇಲೆ ಅರ್ಜಿಯನ್ನು ತುಂಬಬೇಕು ಹಾಗೂ ಇತ್ತೀಚಿನ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು. ನಂತರ ಅಭ್ಯರ್ಥಿಯು submit button ಅನ್ನು ಒತ್ತಿದರೆ ಅರ್ಜಿ ಸಂಖ್ಯೆ (Reference Number) ಸೃಷ್ಟಿಯಾಗುತ್ತದೆ. ಆನ್ ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ (Acknowledgement slip) ಮತ್ತು ದ್ವಿ ಪ್ರತಿ ಚಲನ್ ಅನ್ನು ತೆಗೆದುಕೊಳ್ಳತಕ್ಕದ್ದು. ಈ ಚಲನ್ ಅನ್ನು ನಿಗದಿತ ಅರ್ಜಿ ಶುಲ್ಕದೊಂದಿಗೆ ಕಡ್ಡಾಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ, ಯಾವುದಾದರೂ ಶಾಖೆಯ, ಉಳಿತಾಯ ಖಾತೆ (ಎಸ್.ಬಿ) ಅಕೌಂಟ್ ನಂ.62186114470 IFSC Code: SBIN0020225ಗೆ ಪಾವತಿಸಬೇಕು. ಅಭ್ಯರ್ಥಿಗಳು ಸ್ವೀಕೃತಿ ಸ್ಲಿಪ್ ಅನ್ನು ಮತ್ತು ಚಲನ್ ಪಾವತಿಯ ಒಂದು ಪ್ರತಿಯನ್ನು ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳತಕ್ಕದ್ದು. ಇನ್ನೊಂದು ಚಲನ್ ಪ್ರತಿ ಬ್ಯಾಂಕ್ ಬಳಿ ಇರುತ್ತದೆ. ಈ ದಾಖಲೆಗಳನ್ನು ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕದಂದು ಹಾಜರುಪಡಿಸತಕ್ಕದ್ದು.ಬ್ಯಾಂಕಿನಲ್ಲಿ ನಿಗದಿತ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 22.2.2019 ಆಗಿರುತ್ತದೆ.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Revenue Department of karnataka government Yadgir district has invited applications for the 20 village accountant posts.Interested candidates can apply through online before 19th february 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X