ಪ್ರಾದೇಶಿಕ ಶಿಕ್ಷಣ ಸಂಸ್ಥೆಯು 7 ಹುದ್ದೆಗಳನ್ನು ಭರ್ತಿ ಮಾಡಲು ಸೆಪ್ಟೆಂಬರ್ 11ರಂದು ವಾಕ್-ಇನ್ ಇಂಟರ್ವ್ಯೂ ನಡೆಸಲಾಗುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು.
ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯು ಜ್ಯೂನಿಯರ್ ರಿಸರ್ಚ್ ಫೆಲೋ, ಕಂಪ್ಯೂಟರ್ ಅಸಿಸ್ಟೆಂಟ್ /ಟೈಪಿಸ್ಟ್ ಮತ್ತು ವೊಕೇಶನಲ್ ಟೀಚರ್ ಹುದ್ದೆಗಳನ್ನು ಭರ್ತಿ ಮಾಡಲು ಸಂದರ್ಶನ ನಡೆಸಿತ್ತಿದ್ದು, ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳ ಬಗೆಗೆ ತಿಳಿಯಲು ಮುಂದೆ ಓದಿ.

| CRITERIA | DETAILS |
| Name Of The Posts | ಜ್ಯೂನಿಯರ್ ರಿಸರ್ಚ್ ಫೆಲೋ, ಕಂಪ್ಯೂಟರ್ ಅಸಿಸ್ಟೆಂಟ್ /ಟೈಪಿಸ್ಟ್, ವೊಕೇಶನಲ್ ಟೀಚರ್ |
| Organisation | ಪ್ರಾದೇಶಿಕ ಶಿಕ್ಷಣ ಸಂಸ್ಥೆ |
| Educational Qualification | ಎಂ.ಎಸ್ಸಿ/ಎಂ.ಎಡ್, ಪದವಿ /ಡಿಪ್ಲೋಮಾ, ಗ್ರಾಜುಯೇಟ್ / ರೀಟೇಲ್ ಮ್ಯಾನೇಜ್ಮೆಂಟ್‌ನಲ್ಲಿ ಡಿಪ್ಲೋಮಾ |
| Job Location | ಮೈಸೂರು (ಕರ್ನಾಟಕ) |
| Salary Scale | ಜ್ಯೂನಿಯರ್ ರಿಸರ್ಚ್ ಫೆಲೋ- ತಿಂಗಳಿಗೆ 23,000/- ರಿಂದ 25,000/-ರೂ, ಕಂಪ್ಯೂಟರ್ ಅಸಿಸ್ಟೆಂಟ್ / ಟೈಪಿಸ್ಟ್ - ತಿಂಗಳಿಗೆ 14,000/-ರೂ ಮತ್ತು ವೊಕೇಷನಲ್ ಟೀಚರ್ - ತಿಂಗಳಿಗೆ 25,000/-ರೂ |
| Application Start Date | September 6, 2019 |
| Application End Date | September 11, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಎಂ.ಎಸ್ಸಿ /ಎಂ.ಎಡ್ , ಕಂಪ್ಯೂಟರ್ ಅಸಿಸ್ಟೆಂಟ್ / ಟೈಪಿಸ್ಟ್ ಹುದ್ದೆಗಳಿಗೆ ಪದವಿ / ಮೂರು ವರ್ಷದ ಡಿಪ್ಲೋಮಾ ಮತ್ತು ವೊಕೇಷನಲ್ ಟೀಚರ್ ಹುದ್ದೆಗಳಿಗೆ ಗ್ರಾಜುಯೇಟ್ ಅಥವಾ ರೀಟೇಲ್ ಮ್ಯಾನೇಜ್ಮೆಂಟ್‌ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ವಯೋಮಿತಿ:
ಹುದ್ದೆಗಳಿಗನುಸಾರ ಗರಿಷ್ಟ 35, 37 ಮತ್ತು 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ವಾಕ್-ಇನ್ ಇಂಟರ್ವ್ಯೂ ನಲ್ಲಿ ಪಾಲ್ಗೊಳ್ಳಬಹುದು.
ವೇತನದ ವಿವರ:
ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,000/- ರಿಂದ 25,000/-ರೂ, ಕಂಪ್ಯೂಟರ್ ಅಸಿಸ್ಟೆಂಟ್ / ಟೈಪಿಸ್ಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 14,000/-ರೂ ಮತ್ತು ವೊಕೇಷನಲ್ ಟೀಚರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ವಾಕ್-ಇನ್ ಇಂಟರ್ವ್ಯೂ:
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 11ರಂದು ಸಂಸ್ಥೆಯ ಆವರಣದಲ್ಲಿ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











