RITES Recruitment 2019: 46 ಜ್ಯೂನಿಯರ್ ಮ್ಯಾನೇಜರ್ ಮತ್ತು ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೇ ಸಚಿವಾಲಯದ ಅಡಿಯಲ್ಲಿ ಬರುವ RITES Ltd ಸಂಸ್ಥೆಯು 46 ಜ್ಯೂನಿಯರ್ ಮ್ಯಾನೇಜರ್ ಮತ್ತು ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಟಕಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಕ್ಟೋಬರ್ 10,2019 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ರೈಟ್ಸ್ ರೈಲ್ವೆ ಇಲಾಖೆಯು 46 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ

CRITERIA DETAILS
Name Of The Posts ಜ್ಯೂನಿಯರ್ ಮ್ಯಾನೇಜರ್ ಮತ್ತು ಜ್ಯೂನಿಯರ್ ಅಸಿಸ್ಟೆಂಟ್
Organisation RITES Ltd ರೈಲ್ವೇ ಸಚಿವಾಲಯ
Educational Qualification ಸಿಎ /ಸಿಎಂಎ, ಬಿ.ಕಾಂ /ಬಿಬಿಎ / ಬಿಎಂಎಸ್
Job Location ಭಾರತದೆಲ್ಲೆಡೆ
Salary Scale ಜ್ಯೂನಿಯರ್ ಮ್ಯಾನೇಜರ್- ತಿಂಗಳಿಗೆ 40,000/- ರಿಂದ 1,40,000/-ರೂ ಮತ್ತು ಜ್ಯೂನಿಯರ್ ಅಸಿಸ್ಟೆಂಟ್ 18,000/- ರಿಂದ 66,000/-ರೂ
Application Start Date September 18, 2019
Application End Date October 10, 2019

ಶೈಕ್ಷಣಿಕ ವಿದ್ಯಾರ್ಹತೆ:

ಜ್ಯೂನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಸಿಎ ಅಥವಾ ಸಿಎಂಎ ಮತ್ತು ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಬಿ.ಕಾಂ / ಬಿಬಿಎ / ಬಿಎಂಎಸ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಕನಿಷ್ಟ 21 ರಿಂದ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಜ್ಯೂನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,000/- ರಿಂದ 1,40,000/-ರೂ ಮತ್ತು ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000/- ರಿಂದ 66,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ , ನೇರ ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಜ್ಯೂನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಸಾಮಾನ್ಯ /ಓಬಿಸಿ ಅಭ್ಯರ್ಥಿಗಳು 600/-ರೂ ಮತ್ತು ಮಾಜಿ ಸೈನಿಕ/ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು 300/-ರೂ ಮತ್ತು ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು 300/-ರೂ ಮತ್ತು ಮಾಜಿ ಸೈನಿಕ/ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ರೈಟ್ಸ್ ರೈಲ್ವೇ ನೇಮಕಾತಿಯ ಅಧಿಕೃತ ವೆಬ್‌ಸೈಟ್‌ https://rites.com/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ನಂತರ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅಕ್ಟೋಬರ್ 10,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

More News  

For Quick Alerts
ALLOW NOTIFICATIONS  
For Daily Alerts

English summary
RITES Recruitment 2019-20: Apply Online for 46 Junior Manager & Assistant Vacancies. RITES Limited (RITES) invited Online applications from eligible and interested candidates to fill up Junior Manager & Assistant Posts through RITES official notification September 2019. 
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+