ಆರ್ ಆರ್ ಬಿ ನೇಮಕಾತಿ 1,03,769 ಗ್ರೂಪ್ Dಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಆರ್ ಆರ್ ಬಿ ನೇಮಕಾತಿ 1,03,769 ಗ್ರೂಪ್ D ಹುದ್ದೆಗಳನನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು
ಏಪ್ರಿಲ್ 12.2019ರ ರಾತ್ರಿ 11:59 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

 ಭಾರತೀಯ ರೈಲ್ವೆ ನೇಮಕಾತಿ

CRITERIA DETAILS
Name Of The Posts ಗ್ರೂಪ್ D ಹುದ್ದೆಗಳು
Organisation ಭಾರತೀಯ ರೈಲ್ವೆ
Educational Qualification 10 ನೇ ತರಗತಿ / 12 ನೇ ತರಗತಿ ಅಥವಾ ಐಟಿಐ
Job Location ಭಾರತದೆಲ್ಲೆಡೆ
Salary Scale ಹುದ್ದೆಗಳಿಗನುಸಾರ
Application Start Date March 12, 2019
Application End Date April 12, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ 10 ನೇ ತರಗತಿ / 12 ನೇ ತರಗತಿ ಅಥವಾ ಐಟಿಐ ಯನ್ನು ಎನ್‌ಸಿವಿಟಿ / ಎಸ್‌ಸಿವಿಟಿ ಇಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 1,2019 ರ ಅನ್ವಯ 18 ರಿಂದ 33 ವರ್ಷ ವಯೋಮಿತಿಯೊಳಗಿರಬೇಕು. ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದೆಲ್ಲೆಡೆ ನೇಮಕ ಮಾಡಲಾಗುವುದು.

ವೇತನದ ವಿವರ:

ವಿವಿಧ ಹುದ್ದೆಗಳು ವಿವಿಧ ವೇತನವನ್ನು ಹೊಂದಿದ್ದು ಹೆಚ್ಚಿನ ವಿವರವನ್ನು ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಯಬಹುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದ್ದು ಎಲ್ಲಾ ಅಭ್ಯರ್ಥಿಗಳೂ 500/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಅಂಗವಿಕಲ/ಮಾಜಿಸೈನಿಕ / ಅಲ್ಪ ಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250/-ರೂ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಆರ್ ಆರ್ ಬಿಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಆನ್ ಲೈನ್ ಮೂಲಕವೇ ಸಲ್ಲಿಸಬೇಕಿರುತ್ತದೆ ಹೊರತು ಮತ್ತಾವುದೇ ರೀತಿಯಲ್ಲಿ ಸಲ್ಲಿಸಿದರೆ ಸ್ವೀಕ್ರಿಸಲಾಗುವುದಿಲ್ಲ. ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸಬೇಕು. ಅಭ್ಯರ್ಥಿಗಳು ಅರ್ಜಿಗಳನ್ನು ಏಪ್ರಿಲ್ 12.2019 ರೊಳಗೆ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ:

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಆರ್ ಆರ್ ಬಿಯ ಅಧಿಕೃತ ವೆಬ್ ಸೈಟ್ http://indianrailways.gov.in/ ಗೆ ಹೋಗಿ
ಸ್ಟೆಪ್ 2: ಈ ಹುದ್ದೆಗಳ ಬಗೆಗೆ ನೀಡಲಾದ ಮಾಹಿತಿಯನ್ನು ಹುಡುಕಿ
ಸ್ಟೆಪ್ 3: ಈ ಹುದ್ದೆಗಳ ಬಗೆಗೆ ಕೇಳಲಾಗಿರುವ ಅರ್ಹತೆಯನ್ನು ಒಮ್ಮೆ ಗಮನಿಸಿ
ಸ್ಟೆಪ್ 4: ನಂತರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಭರ್ತಿ ಮಾಡಿ ನಂತರ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ
ಸ್ಟೆಪ್ 5: ಎಲ್ಲವೂ ಮುಗಿದ ನಂತರ submit button ಮೇಲೆ ಕ್ಲಿಕ್ ಮಾಡಿ ಅರ್ಜಿಯ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.

ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ http://rrbbnc.gov.in/ ಅನ್ನು ಬಳಸಿ

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Railway Recruitment Board (RRB) is going to recruit 103769 candidates to fill their Group D in All India. Job Aspirants are requested to go through the official website of RRB job notification 2019 before apply. Eligible candidates can apply online through the official website, rrbcdg.gov.in. Last Date to submit the online application form is 26th April 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+