ಭಾರತೀಯ ರೈಲ್ವೆಯ ಅಡಿಯಲ್ಲಿರುವ ಪಶ್ಚಿಮ ರೈಲ್ವೇ ಇಲಾಖೆಯು(ಡಬ್ಲ್ಯುಆರ್) ಆರ್‌ಆರ್‌ಸಿ ಡಬ್ಲ್ಯೂಆರ್ ನೇಮಕಾತಿ ಅಧಿಸೂಚನೆ 2021 ಅನ್ನು ಬಿಡುಗಡೆ ಮಾಡಿದೆ. ಪಶ್ಚಿಮ ರೈಲ್ವೇ ಇಲಾಕೆಯಲ್ಲಿ 80 ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 22,2021 ರಿಂದ ಪ್ರಾರಂಭವಾಗಿ ನವೆಂಬರ್ 21,2021ರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ.
RRC Western Railway ನೇಮಕಾತಿ 2021 ಖಾಲಿ ಹುದ್ದೆಗಳ ವಿವರ :
ಜೂನಿಯರ್ ಇಂಜಿನಿಯರ್ (ಟ್ರ್ಯಾಕ್ ಮೆಷಿನ್)- 39 ಹುದ್ದೆಗಳು
ಟೆಕ್ನಿಶಿಯನ್ III (ಟ್ರ್ಯಾಕ್ ಮೆಷಿನ್) - 24 ಹುದ್ದೆಗಳು
ಜೂನಿಯರ್ ಸ್ಟೆನೋಗ್ರಾಫರ್ (ಇಂಗ್ಲಿಷ್/ಹಿಂದಿ)- 09 ಹುದ್ದೆಗಳು
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ) - 08 ಹುದ್ದೆಗಳು
ಒಟ್ಟು 80 ಹುದ್ದೆಗಳು
RRC Western Railway ನೇಮಕಾತಿ 2021 ಅರ್ಹತೆ :
ಆರ್‌ಆರ್‌ಸಿ ಪಶ್ಚಿಮ ರೈಲ್ವೆ ಇಲಾಖೆ ನೇಮಕಾತಿಯ ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೆಟ್ರಿಕ್ಯುಲೇಶನ್/ಎಸ್‌ಎಸ್‌ಎಲ್‌ಸಿ ಜೊತೆಗೆ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಐಟಿಐ; 10+2 ಅಥವಾ ಅದಕ್ಕೆ ಸಮನಾದ ಜೊತೆಗೆ ಶೀಘ್ರಲಿಪಿ; ಹಿಂದಿ ಅಥವಾ ಇಂಗ್ಲಿಷ್ ವಿಷಯವನ್ನು ಪ್ರಮುಖವಾಗಿ ಅಧ್ಯಯನ ಮಾಡುವ ಮೂಲಕ ಸ್ನಾತಕೋತ್ತರ ಪದವಿ; ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್/ವಿಶ್ವವಿದ್ಯಾಲಯದಿಂದ ಹೊಂದಿರಬೇಕು.
RRC Western Railway ನೇಮಕಾತಿ 2021 ವಯೋಮಿತಿ :
ಆರ್‌ಆರ್‌ಸಿ ಪಶ್ಚಿಮ ರೈಲ್ವೆ ಇಲಾಖೆ ನೇಮಕಾತಿಯ ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳ ವಯೋಮಿತಿಯು ಜನವರಿ 1,2022ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 42 ವರ್ಷದೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 45 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಟ 47 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
RRC Western Railway ನೇಮಕಾತಿ 2021 ವೇತನ :
ಆರ್‌ಆರ್‌ಸಿ ಪಶ್ಚಿಮ ರೈಲ್ವೆ ಇಲಾಖೆ ನೇಮಕಾತಿಯ ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.
RRC Western Railway ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :
ಆರ್‌ಆರ್‌ಸಿ ಪಶ್ಚಿಮ ರೈಲ್ವೆ ಇಲಾಖೆ ನೇಮಕಾತಿಯ ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಶೀಘ್ರಲಿಪಿ ಕೌಶಲ್ಯ ಪರೀಕ್ಷೆ/ಟ್ರಾನ್ಸ್‌ಲೇಶನ್ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
RRC Western Railway ನೇಮಕಾತಿ 2021 ಅರ್ಜಿ ಶುಲ್ಕ :
ಆರ್‌ಆರ್‌ಸಿ ಪಶ್ಚಿಮ ರೈಲ್ವೆ ಇಲಾಖೆ ನೇಮಕಾತಿಯ ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಅರ್ಜಿ ಶುಲ್ಕದ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಅಧಿಸೂಚನೆಯನ್ನು ಓದಬಹುದು.
RRC Western Railway ನೇಮಕಾತಿ 2021 ಅರ್ಜಿ ಸಲ್ಲಿಕೆ :
ಆರ್‌ಆರ್‌ಸಿ ಪಶ್ಚಿಮ ರೈಲ್ವೆ ಇಲಾಖೆ ನೇಮಕಾತಿಯ ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.rrc-wr.com/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅಕ್ಟೋಬರ್ 22,2021 ರಿಂದ ನವೆಂಬರ್ 21,2021ರ ಸಂಜೆ 6 ಗಂಟೆಯೊಳಗೆ ಅರ್ಜಿಯನ್ನು ಹಾಕಬಹುದು.
ಅಭ್ಯರ್ಥಿಗಳು ಆರ್‌ಆರ್‌ಸಿ ಪಶ್ಚಿಮ ರೈಲ್ವೆ ಇಲಾಖೆ ನೇಮಕಾತಿಯ ಜ್ಯೂನಿಯರ್ ಇಂಜಿನಿಯರ್ ಮತ್ತು ಟೆಕ್ನೀಶಿಯನ್ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಜ್ಯೂನಿಯರ್ ಸ್ಟೆನೋಗ್ರಾಫರ್ ಹಾಗೂ ಜ್ಯೂನಿಯರ್ ಟ್ರಾನ್‌ಸ್ಲೇಟರ್ ಹುದ್ದೆಗಳ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications