ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಅಡಿಯಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ರೆಗ್ಯುಲರ್ ಬೇಸಿಸ್ ಮೇಲೆ ಒಟ್ಟು 121 ಮ್ಯಾನೇಜರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ನೋಂದಣಿಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ
ಮ್ಯಾನೇಜರ್: 76 ಹುದ್ದೆಗಳು
ವೇತನ ಶ್ರೇಣಿ: ವಾರ್ಷಿಕ 18 ಲಕ್ಷಗಳು
ವಿದ್ಯಾರ್ಹತೆ: ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಿಜಿಡಿಎಂ/ಎಂಬಿಎ ಪೂರೈಸಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವವಿರಬೇಕು.
ವಯೋಮಿತಿ: ಗರಿಷ್ಠ 30ವರ್ಷಗಳು
ಚೀಫ್ ಮ್ಯಾನೇಜರ್: 45 ಹುದ್ದೆಗಳು
ವೇತನ ಶ್ರೇಣಿ: ವಾರ್ಷಿಕ 22 ಲಕ್ಷಗಳು
ವಿದ್ಯಾರ್ಹತೆ: ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಿಜಿಡಿಎಂ/ಎಂಬಿಎ ಪೂರೈಸಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವವಿರಬೇಕು.
ವಯೋಮಿತಿ: ಗರಿಷ್ಠ 38 ವರ್ಷಗಳು

ಅರ್ಜಿ ಸಲ್ಲಿಕೆ
ಅರ್ಜಿಗಳನ್ನ ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಆನ್-ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿದ ನಂತರ ಅದನ್ನು ಪ್ರಿಂಟ್ ತೆಗೆದುಕೊಂಡು, ಅಗತ್ಯ ದಾಖಲೆಗಳನ್ನು ನಮೂದಿಸಿ ನಿಗದಿತ ದಿನಾಂಕದೊಳಗೆ ಕಛೇರಿ ವಿಳಾಸಕ್ಕೆ ತಲುಪಿಸತಕ್ಕದ್ದು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಶುಲ್ಕ
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100/-
- ಇತರ ಅಭ್ಯರ್ಥಿಗಳಿಗೆ ರೂ.600/-
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 16/01/2018
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:04/02/2018
- ಆನ್-ಲೈನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ:04/02/2018
- ಅರ್ಜಿಗಳನ್ನು ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ:19/02/2018
- ಅರ್ಜಿಗಳ ಹಾರ್ಡ್ ಕಾಪಿಯನ್ನು ತಲುಪಿಸಲು ಕೊನೆಯ ದಿನಾಂಕ:12/02/2018
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











