ಎಸ್ ಬಿಐ ನೇಮಕಾತಿ 2019: 42 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 15 ಸೀನಿಯರ್ ಎಕ್ಸಿಕ್ಯೂಟಿವ್, 6ಡೆಪ್ಯುಟಿ ಮ್ಯಾನೇಜರ್ ಮತ್ತು 5 ಸೀನಿಯರ್ ಎಕ್ಸಿಕ್ಯೂಟಿವ್ ಮತ್ತು 16 ಸ್ಪೆಶಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಫೆಬ್ರವರಿ 11,2019ರೊಳಗೆ ಅರ್ಜಿ ಸಲ್ಲಿಸಬಹುದು.

ಎಸ್ ಬಿಐ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

 

CRITERIA DETAILS
Name Of The Posts ಸೀನಿಯರ್ ಎಕ್ಸಿಕ್ಯೂಟಿವ್, ಡೆಪ್ಯುಟಿ ಮ್ಯಾನೇಜರ್ ಮತ್ತು ಸ್ಪೆಶಲಿಸ್ಟ್ ಕೇಡರ್ ಅಧಿಕಾರಿ
Organisation ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Educational Qualification ಚಾರ್ಟೆಡ್ ಅಕೌಂಟೆಂಟ್/ಎಂಬಿಎ (ಫಿನಾನ್ಸ್)/ ಫಿನಾನ್ಸ್ ಕಂಟ್ರೋಲ್ ನಲ್ಲಿ ಸ್ನಾತಕೋತ್ತರ ಪದವಿ,ಬಿಇ/ಬಿಟೆಕ್,ಎಂಬಿಎ/ಪಿಜಿಡಿಎಮ್/ಪಿಜಿಡಿಬಿಎಮ್/ ಸಮಾನ ಪದವಿ
Job Location ಮುಂಬೈ
Salary Scale ಹುದ್ದೆಗಳಿಗನುಸಾರ
Application Start Date January 22, 2019
Application End Date February 11, 2019

ವಿದ್ಯಾರ್ಹತೆ:

ಸೀನಿಯರ್ ಎಕ್ಸಿಕ್ಯೂಟಿವ್: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ ಬೋರ್ಡ್ ನಲ್ಲಿ ಚಾರ್ಟೆಡ್ ಅಕೌಂಟೆಂಟ್/ಎಂಬಿಎ (ಫಿನಾನ್ಸ್)/ ಫಿನಾನ್ಸ್ ಕಂಟ್ರೋಲ್ ನಲ್ಲಿ ಸ್ನಾತಕೋತ್ತರ ಪದವಿ/ ಮ್ಯಾನೇಜ್ಮೆಂಟ್ ಸ್ಟಡೀಸ್ ನಲ್ಲಿ ಸ್ನಾತಕೋತ್ತರ ಪದವಿ/ಪಿಜಿಡಿಎಮ್ (ಫಿನಾನ್ಸ್) ನಲ್ಲಿ ಉತ್ತೀರ್ಣರಾಗಿರಬೇಕು.

ಡೆಪ್ಯುಟಿ ಮ್ಯಾನೇಜರ್ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್ ಅನ್ನು ಇನ್ಫರ್ಮೇಶನ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಅಪ್ಲಿಕೇಶನ್/ ಇಲೆಕ್ಟ್ರಾನಿಕ್ಸ್/ಇಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ಸ್ ನಲ್ಲಿ ಶೇ 60 %ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್ ನಲ್ಲಿ ಉತ್ತೀರ್ಣರಾಗಿರಬೇಕು.

ಸ್ಪೆಶಲಿಸ್ಟ್ ಕೇಡರ್ ಅಧಿಕಾರಿ: ಮ್ಯಾನೇಜರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಎ/ಪಿಜಿಡಿಎಮ್/ಪಿಜಿಡಿಬಿಎಮ್/ ಸಮಾನ ಪದವಿ ಅಭ್ಯರ್ಥಿಗಳು ಹುದ್ದೆಗನುಗುಣವಾಗಿ ಕನಿಷ್ಠ ವಿದ್ಯಾಹತೆ ಜೊತೆಗೆ ಅನುಭವ ಹೊಂದಿದವರು ಮಾತ್ರ ಎಸ್ ಬಿಐ ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿಗಳು ನೇಮಕಾತಿ 2019 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 

ಸ್ಟೆಶಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳ ವಿವರ:

ಗ್ರೇಡ್ MMGS-||

ಡೆಪ್ಯುಟಿ ಮ್ಯಾನೇಜರ್ (Debit Card Operations) 01
ಡೆಪ್ಯುಟಿ ಮ್ಯಾನೇಜರ್ (Govt.e-marketing) 01

ಗ್ರೇಡ್ MMGS-|||

ಮ್ಯಾನೇಜರ್ (Debit Card Marketing) 01
ಮ್ಯಾನೇಜರ್(Smart City Projects) 03
ಮ್ಯಾನೇಜರ್(Transit/State Road Transport Corporation) 03
ಮ್ಯಾನೇಜರ್ (UPI & Aggregator) 07

ವಯೋಮಿತಿ:

ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 1,2018 ಕ್ಕೆ ಸಾಮಾನ್ಯ/ ಮೀಸಲಾತಿ ಅಭ್ಯರ್ಥಿಗಳಿಗೆ 25 ರಿಂದ 35 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳು ಸಲ್ಲಿಸಬಹುದು.

ಡೆಪ್ಯುಟಿ ಮ್ಯಾನೇಜರ್ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 27 ರಿಂದ 35 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ಸ್ಪೆಶಲಿಸ್ಟ್ ಕೇಡರ್ ಅಧಿಕಾರಿ MMGS-||| ಹುದ್ದೆಗಳಿಗೆ ಕನಿಷ್ಟ 27 ರಿಂದ ಗರಿಷ್ಟ 35 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಮತ್ತು MMGS-|| ಹುದ್ದೆಗಳಿಗೆ ಕನಿಷ್ಟ 28 ರಿಂದ 37 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:

ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅಂಗವಿಕಲ (ಪರಿಶಿಷ್ಟ ಜಾತಿ/ಪರಿ‍ಶಿಷ್ಟ ಪಂಗಡ) ಅಭ್ಯರ್ಥಿಗಳಿಗೆ 15 ವರ್ಷ, ಅಂಗವಿಕಲ (ಓಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಡೆಪ್ಯುಟಿ ಮ್ಯಾನೇಜರ್ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ವಯೋಮಿತಿ ಸಡಿಲಿಕೆಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.

ವೇತನದ ವಿವರ:

ಸೀನಿಯರ್ ಎಕ್ಸಿಕ್ಯೂಟಿವ್ ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ 12 ರಿಂದ 15 ಲಕ್ಷ ವೇತನದ ಜೊತೆಗೆ ವರ್ಷಕ್ಕೆ 10% ನಷ್ಟು ವೇತನ ಹೆಚ್ಚಳವನ್ನು ಮಾಡಲಾಗುತ್ತದೆ. ವರ್ಷದ ವೇತನ ನೀಡುವ ಜೊತೆಗೆ ಸಂಸ್ಥೆಯು ಪ್ರಯಾಣ ವೆಚ್ಚವನ್ನು ಮರುಪಾವತಿಸುತ್ತದೆ.

ಡೆಪ್ಯುಟಿ ಮ್ಯಾನೇಜರ್ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 31,705/-ರಿಂದ 45,950/-ರೂ ವೇತನ ನೀಡಲಾಗುತ್ತದೆ. ಸಿಟಿಸಿ:ನೆಗೋಶಿಯೇಬಲ್, ರೆಂಜ್ ; ವರ್ಷಕ್ಕೆ 13 ರಿಂದ 16 ಲಕ್ಷ ನೀಡಲಾಗುವುದು. ಸಂಸ್ಥೆಯು ಯಾವುದೇ ಇತರೆ ವೆಚ್ಚವನ್ನು ನೀಡುವುದಿಲ್ಲ.

ಸ್ಪೆಶಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳ ಮಿಡಲ್ ಮ್ಯಾನೇಜ್ಮೆಂಟ್ ಗ್ರೇಡ್ -|| ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 31,705 - ರಿಂದ 45,950/- ರೂ ವೇತನ ಮತ್ತು ಮಿಡಲ್ ಮ್ಯಾನೇಜ್ಮೆಂಟ್ ಗ್ರೇಡ್ -||| ಹುದ್ದೆಗಳಿಗೆ 42,020/- ರಿಂದ 51,490/- ರೂ ವೇತನವನ್ನು ನೀಡಲಾಗುತ್ತದೆ .

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಸ್ಪೆಶಲಿಸ್ಟ್ ಕೇಡರ್ ಹುದ್ದೆಗಳಿಗೆ ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600/- ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100/- ರೂ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಮೊದಲು ಅಧಿಕೃತ ವೆಬ್ ಸೈಟ್ https://sbi.co.in/ ಗೆ ಹೋಗಿ

ಸ್ಟೆಪ್ 2: ನಂತರ Career section ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಅಲ್ಲಿ "SBI Recruitment 2019 for senior executive (Credit Review)posts" , "SBI Recruitment 2019 for Dy Manager & Sr Executive Posts", "SCO Recruitment 2019" ಹುದ್ದೆಗಳ ಮಾಹಿತಿಯ ಅಧಿಸೂಚನೆಯನ್ನು ನೋಡಿ

ಸ್ಟೆಪ್ 4: ನಿಮಗೆ ಸೂಕ್ತವಾಗುವ ಹುದ್ದೆಗೆ ಅರ್ಜಿಯನ್ನು ಭರ್ತಿಮಾಡಿ

ಸ್ಟೆಪ್ 5: ಅಧಿಸೂಚನೆಯಲ್ಲಿ ನೀಡಲಾದ ಮಾಹಿತಿಯ ಅನುಸಾರ ಅರ್ಜಿ ಶುಲ್ಕವನ್ನು ಪಾವತಿಸಿ

ಸ್ಟೆಪ್ 6: ಅರ್ಜಿ ಭರ್ತಿ ಮಾಡಿ ಶುಲ್ಕ ಪಾವತಿಸಿದ ನಂತರ Submit button ಮೇಲೆ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ

ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಬಗೆಗೆ ಮಾಹಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಡೆಪ್ಯುಟಿ ಮ್ಯಾನೇಜರ್ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಬಗೆಗೆ ಮಾಹಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಡೆಪ್ಯುಟಿ ಮ್ಯಾನೇಜರ್ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಪೆಶಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
SBI 2019 notification has been released for the recruitment of 20 senior executive, 6 deputy managers & 16 specialist cadre officer posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X