SBI Recruitment 2020: 3850 ಸರ್ಕಲ್ ಬೇಸ್ಡ್ ಆಫೀಸರ್‌ (ಸಿಬಿಓ) ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತದೆಲ್ಲೆಡೆ ಖಾಲಿ ಇರುವ 3850 ಸರ್ಕಲ್ ಬೇಸ್ಡ್ ಆಫೀಸರ್‌ (ಸಿಬಿಓ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಎಸ್‌ಬಿಐ ನೇಮಕಾತಿ..ಆ.16ರೊಳಗೆ ಅರ್ಜಿ ಹಾಕಿ

ಅಧಿಸೂಚನೆಯನ್ನು ಓದಿದ ನಂತರ ಅರ್ಹ ಅಭ್ಯರ್ಥಿಗಳು ಒಂದು ವಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್ ಮೂಲಕ ಆಗಸ್ಟ್ 16,2020 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಇನ್ನಿತರೆ ಮಾಹಿತಿಗಾಗಿ ಮುಂದೆ ಓದಿ.

ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ ?:

ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ ?:

ಗುಜರಾತ್ - 750 ಹುದ್ದೆಗಳು 

ಕರ್ನಾಟಕ- 750 ಹುದ್ದೆಗಳು
ಮಧ್ಯಪ್ರದೇಶ -296 ಹುದ್ದೆಗಳು
ಛತ್ತೀಸ್‌ಗಢ -104 ಹುದ್ದೆಗಳು
ತಮಿಳುನಾಡು -550 ಹುದ್ದೆಗಳು
ತೆಲಂಗಾಣ -550 ಹುದ್ದೆಗಳು
ರಾಜಸ್ತಾನ -300 ಹುದ್ದೆಗಳು
ಮಹಾರಾಷ್ಟ್ರ -517 ಹುದ್ದೆಗಳು
ಗೋವಾ -33 ಹುದ್ದೆಗಳು
ಒಟ್ಟು -3850 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:

ಶೈಕ್ಷಣಿಕ ವಿದ್ಯಾರ್ಹತೆ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇಮಕಾತಿಯ ಸರ್ಕಲ್ ಬೇಸ್ಡ್ ಆಫೀಸರ್‌ (ಸಿಬಿಓ) ಹುದ್ದೆಗಳಿಗೆ ಯಾವುದೇ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇದಲ್ಲದೆ ಅಭ್ಯರ್ಥಿಗಳು ನಿಗದಿತ ವಾಣಿಜ್ಯ ಬ್ಯಾಂಕ್ ಅಥವಾ ಪ್ರಾದೇಶಿಕ ಬ್ಯಾಂಕಿನಲ್ಲಿ 2 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.

ವಯೋಮಿತಿ:

ವಯೋಮಿತಿ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇಮಕಾತಿಯ ಸರ್ಕಲ್ ಬೇಸ್ಡ್ ಆಫೀಸರ್‌ (ಸಿಬಿಓ) ಹುದ್ದೆಗಳಿಗೆ ಆಗಸ್ಟ್ 1,2020ರ ಅನ್ವಯ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,700/- ರಿಂದ 42,020/-ರೂ ವೇತನವನ್ನು ನೀಡಲಾಗುವುದು. ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಡಿಎ, ಎಚ್‌ಆರ್‌ಎ, ಗುತ್ತಿಗೆ ಬಾಡಿಗೆ, ಸಿಸಿಎ, ವೈದ್ಯಕೀಯ ಮತ್ತು ಇತರ ಭತ್ಯೆಗಳು ಮತ್ತು ಅಗತ್ಯತೆಗಳನ್ನು ಸಹ ಪಡೆಯುತ್ತಾರೆ.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆ:

ಸರ್ಕಲ್ ಬೇಸ್ಡ್ ಆಫೀಸರ್‌ (ಸಿಬಿಓ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, 2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳು 750/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸುವುದು ಹೇಗೆ:

ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ನೇಮಕಾತಿಯ ಸರ್ಕಲ್ ಬೇಸ್ಡ್ ಆಫೀಸರ್‌ (ಸಿಬಿಓ) ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಎಸ್‌ಬಿಐ ನ ಅಧಿಕೃತ ವೆಬ್‌ಸೈಟ್‌ https://www.sbi.co.in/web/careers ಗೆ ಭೇಟಿ ನೀಡಿ. ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಆಗಸ್ಟ್ 16,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
SBI recruitment 2020 notification released for 3850 CBO posts across india. Interested candidates can apply through online before August 16.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+